Advertisement

ಪಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿದೆ ದೇವರಗುಂಡಿ ಜಲಪಾತ

09:16 PM Dec 27, 2020 | sudhir |

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಸನಿಹದಲ್ಲಿರುವ ದೇವರಗುಂಡಿ ಜಲಪಾತ ಪಕ್ರತಿಯ ಮಡಿಲಲ್ಲಿ ಕಂಗೊಳಿಸುತ್ತಿದ್ದು ಚಾರಣ ಪ್ರಿಯರನ್ನು ಪಕೃತಿ ಪ್ರೇಮಿಗಳನ್ನು ತನ್ನತ್ತ ಆಕರ್ಷಿಸುತ್ತದೆ.

Advertisement

ತೊಡಿಕಾನ ಸನಿಹದ ದೇವರಗುಂಡಿ ಜಲಪಾತ ಎಲ್ಲಾ ಜಲಪಾತಗಳಂತಲ್ಲ ಇದು ವರ್ಷ ಪೂರ್ತಿ ಸುಮಾರು ೬೦ ಪೀಟ್ ಎತ್ತರದಿಂದ ಜಲಧಾರೆಯಾಗಿ ದುಮ್ಮಿಕ್ಕಿ ಹರಿಯುತ್ತದೆ.

ಬೇಸಿಗೆ ನೀರಿನ‌ ಹರಿವಿನ ಪ್ರಮಾಣ ಒಂದಷ್ಟು ಕಡಿಮೆಯಾಗುತ್ತದೆ .ಸುತ್ತಮುತ್ತ ಪಕೃತಿದತ್ತವಾದ ತಂಪಾದ ಹವೆ. ಹಕ್ಕಿಗಳ ಇಂಚರ, ಕೋಗಿಲೆಗಳ ಗಾನ,ದುಂಬಿಗಳ ಝೇಂಕಾರ, ಜಲಧಾರೆಯ ಜುಳು ಜುಳು ನಿನಾದ ಮನಸಿಗೆ ಮುದನೀಡುತ್ತದೆ.

ಜಲಪಾತದ ಸೊಬಗನ್ನು ಆಸ್ವಾದಿಸುತ್ತ ಸಮಯ ಜಾರಿ ಹೋಗುವುದು ಅರಿವಿಗೆ ಬರುವುದಿಲ್ಲ.ಅಲ್ಲಿಂದ ಹೊರೊಡೋಣ ಎಂದರೆ ಮನಸೆ ಬಾರದು. ಸುತ್ತಮುತ್ತಲ ಹಸಿರ ಕೃಷಿ ತೋಟಗಳು ಜಲಪಾತದ ಸೊಬಗಿಗೆ ಇನ್ನಷ್ಟು ಮೆರುಗು ನೀಡುತ್ತಿವೆ.

ಇದು ಕೇವಲ ಪ್ರವಾಸಿ ತಾಣವಲ್ಲ.ಸುಳ್ಯ ಸೀ‌ಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ ದೇವಾಯಕ್ಕೆ ಹಾಗೂ ದೇವರಗುಂಡಿ ಜಲಪಾತ ಧಾರ್ಮಿಕ ಹಿನ್ನಲೆಗಳಿವೆ.

Advertisement

ಕಣ್ವ ಮಹಾಮುನಿ ತಪಸ್ಸು ಆಚರಿಸಿದ್ದು ಇದೆ ಪರಿಸರದಲ್ಲಿ ಶ್ರೀ ವಿಷ್ಣುವು ಮತ್ಸ್ಯರೂಪ ತಾಳಿ ಇಲ್ಲಿಂದ ತೊಡಿಕಾನ ದೇವಾಲಯದ ಮತ್ಸ ತಟಾದಲ್ಲಿ ಶಿವನ ವಾಹ‌ನವಾಗಿ ಶಿವನೊಂದಿಗೆ ಪ್ರತ್ಯಕ್ಷಗೊಂಡನು ಎಂಬ ನಂಬಿಕೆ ಇಲ್ಲಿಯ ಜನರಲ್ಲಿದೆ.

ತೊಡಿಕಾನ ದೇವಳದಲ್ಲಿ ವಿಶೇಷ ಪರ್ವ ದಿನಗಳಲ್ಲಿ ದೇವರಗುಂಡಿಯಿಂದ ತೀರ್ಥ ತೆಗೆದುಕೊಂಡು ಹೋಗಿ ಶ್ರೀ ದೇವರಿಗೆ ಅಭಿಷೇಕ ಮಾಡುತ್ತಾರೆ.ಈ ಹಿನ್ನೆಯಲ್ಲಿ ದೇವರಗುಂಡಿಯ ಪಾವಿತ್ರ್ಯವನ್ನು ಕಾಪಾಡಲು ದೇವಾಲಯದ ವತಿಯಿಂದ ಭಕ್ತಾಧಿಗಳಿಗೆ ಪ್ರವಾಸಿಗರಿಗೆ ಸೂಚನೆ ನೀಡಲಾಗುತ್ತಿದೆ.

ಸುಳ್ಯ ತಾಲೂಕು ಕೇಂದ್ರದಿಂದ ತೊಡಿಕಾನಕ್ಕೆ ಖಾಸಗಿ ಬಸ್ಸುಗಳ ಸಂಚಾರ ಇದೆ.ಇಲ್ಲವೆ ಸ್ಚಂತಹ ವಾಹನಗಳ ಮೂಲಕ ತೊಡಿಕಾನಕ್ಕೆ ಭೇಟಿ ನೀಡಬಹುದು.

– ತೇಜೇಶ್ಬರ್ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next