ಹೈದರಾಬಾದ್: ಜೂನಿಯರ್ ಎನ್ ಟಿಆರ್(Jr. NTR) ಅಭಿನಯದ ಬಹು ನಿರೀಕ್ಷಿತ ‘ದೇವರ’ (Devara) ಶುಕ್ರವಾರ (ಸೆ.27ರಂದು) ವಿಶ್ವದಾದ್ಯಂತ ಅದ್ಧೂರಿಯಾಗಿದೆ.
ಕೊರಟಾಲ ಶಿವ (Koratala Siva) ಪ್ಯಾನ್ ಇಂಡಿಯಾ ಹಾಗೂ ಬಹು ತಾರಾಗಣವನ್ನಿಟ್ಟುಕೊಂಡು ಬಿಗ್ ಬಜೆಟ್ ನಲ್ಲಿ ಬಂದ ‘ದೇವರ’ ರಿಲೀಸ್ ಗೂ ಮುನ್ನವೇ ಹತ್ತಾರು ವಿಚಾರಗಳಿಂದ ಸದ್ದು ಮಾಡಿತು.
ಸಿನಿಮಾಕ್ಕಾಗಿ ಮಧ್ಯರಾತ್ರಿಯಿಂದಲೇ ಅನೇಕ ಕಡೆ ಶೋಗಳನ್ನು ಹಾಕಲಾಗಿದೆ. ಅದರಂತೆ ಫಸ್ಟ್ ಡೇ ಫಸ್ಟ್ ಶೋಗೆ ಸಾವಿರಾರು ಮಂದಿ ಹರಿದು ಬಂದಿದ್ದಾರೆ.
ಸಿನಿಮಾ ಹೇಗಿದೆ. ಸಿನಿಮಾ ನೋಡಿದವರು ಏನು ಹೇಳಿದ್ದಾರೆ ಎನ್ನುವುದನ್ನು ‘ಎಕ್ಸ್’ ರಿವ್ಯೂ ಮೂಲಕ ನೋಡಿಕೊಂಡು ಬರೋಣ ಬನ್ನಿ..
“ದೇವರ ಒಂದು ಸಿನಿಮಾವಲ್ಲ, ಇದೊಂದು ಇವೆಂಟ್. ಇಲ್ಲಿ ಆ್ಯಕ್ಷನ್, ಡ್ರಾಮಾ, ಎಮೋಷನ್ ಎಲ್ಲವೂ ಇದೆ. ಮೊದಲಾರ್ಧವು ವೇದಿಕೆಯನ್ನು ಹೊಂದಿಸುತ್ತದೆ. ದ್ವಿತೀಯಾರ್ಧವು ಬೆಂಕಿಯನ್ನು ಹೊತ್ತಿಸುತ್ತದೆ ಮತ್ತು ಕೊನೆಯಲ್ಲಿ, ನೀವು ಕೇವಲ ಚಲನಚಿತ್ರವನ್ನು ವೀಕ್ಷಿಸುತ್ತಿಲ್ಲ, ನೀವು ಸಾಹಸದ ಭಾಗವಾಗಿದ್ದೀರಿ ಎನ್ನುವ ಭಾವನೆ ಮೂಡುತ್ತದೆ. ಇದೊಂದು ಬ್ಲಾಕ್ ಬಸ್ಟರ್” ಎಂದು 5 ರಲ್ಲಿ 4 ಸ್ಟಾರ್ ರೇಟಿಂಗ್ ನ್ನು ಒಬ್ಬರು ನೀಡಿದ್ದಾರೆ.
ʼದೇವರ ಸಿನಿಮಾದ ಕೊನೆಯ 20 ನಿಮಿಷ ನಿಜಕ್ಕೂ ಅದ್ಭುತವಾಗಿದೆ. ಅನಿರುದ್ಧ್ ಅವರ ಬಿಜಿಎಂ ಗಮನ ಸೆಳೆಯುತ್ತದೆ. ಟೈಟಲ್ ಕಾರ್ಡ್ ,ಆಯುಧ ಪೂಜೆ ,ಕುಸ್ತಿ ಹೋರಾಟ ಉತ್ತಮವಾಗಿ ಮೂಡಿಬಂದಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಮೊದಲಾರ್ಧ ಆವರೇಜ್ ಆಗಿದೆ. ದ್ವಿತೀಯಾರ್ಧ ಅಷ್ಟೇನೂ ಒಳ್ಳೆಯದಿಲ್ಲ. ಇದು ಕೊರಟಾಲ ಅವರ ಮತ್ತೊಂದು ʼಆಚಾರ್ಯʼ ಆಗಿದೆ. ಆದರೆ ಇದರಲ್ಲಿ ʼಆಚಾರ್ಯʼಗಿಂತ ಉತ್ತಮ ಬಿಜಿಎಂ ಹಾಗೂ ವಿಎಫ್ ಎಕ್ಸ್ ಇದೆ. ಸೈಫ್ ಅಲಿಖಾನ್ , ಜಾಹ್ನವಿ ಓಕೆ ಓಕೆ ಎನ್ನುವಂತೆ ನಟಿಸಿದ್ದಾರೆ. ನೀರು ಮತ್ತು ಶಾರ್ಕ್ ದೃಶ್ಯಗಳು ಚೆನ್ನಾಗಿದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಈ ಸಿನಿಮಾವು ಜೂನಿಯರ್ ಎನ್‌ಟಿಆರ್‌ರ ಅದ್ವಿತೀಯ ಅಭಿನಯದ ಜೊತೆಗೆ ಬಲವಾದ ಕಥೆಯ ಮಿಶ್ರಣವಾಗಿದೆ. ಮೊದಲಾರ್ಧದಲ್ಲಿ ಫೈಟ್ಸ್ ಸೀನ್ ಗಳನ್ನು ನೋಡಬಹುದು. ದ್ವಿತೀಯಾರ್ಧವು ಸ್ವಲ್ಪ ಊಹಿಸಬಹುದಾಗಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಮೊದಲಾರ್ಧವು ನಿರೀಕ್ಷೆಯೊಂದಿಗೆ ಕೊನೆಗೊಳ್ಳುತ್ತದೆ. ಆದರೆ ಅದು ದ್ವಿತೀಯಾರ್ಧ ಅದನ್ನು ಮುಂದುವರೆಸಲು ಸಾಧ್ಯವಾಗಲ್ಲ. ಅನಿರುದ್ಧ್ ಅವರ ಮ್ಯೂಸಿಕ್ ಎಂಗೇಜಿಂಗ್ ಆಗಿದೆ. ಇದು ತಾರಕ್ ಅವರ ಒನ್ ಮ್ಯಾನ್ ಶೋವೆಂದು ಒಬ್ಬರು ಬರೆದುಕೊಂಡಿದ್ದಾರೆ.
ಕೊರಟಾಲ ಅವರ ಬರಹಗಳು ಮತ್ತು ಚಿತ್ರಕಥೆಯೊಂದಿಗೆ ಕಂಬ್ಯಾಕ್ ಮಾಡಿದ್ದಾರೆ. ಆದರೆ ನನಗೆ ನಿರಾಶೆಯ ಅನುಭವವಾಗಿದೆ. ಸಿನಿಮಾ ಸ್ವಲ್ಪ ನಿಧಾನವಾದ ಮತ್ತು ಊಹಿಸಬಹುದಾದ ಚಿತ್ರಕಥೆಯನ್ನು ಹೊಂದಿದೆ. ವಿಎಫ್ ಎಕ್ಸ್, ಇಂಟರ್ ವೆಲ್ ಮತ್ತು ಕ್ಲೈಮ್ಯಾಕ್ಸ್ ಚೆನ್ನಾಗಿಲ್ಲ. ಜೂ.ಎನ್ ಟಿಆರ್ ಹೊರತುಪಡಿಸಿದರೆ ಇತರರಿಗೆ ನಟನೆಯಲ್ಲಿ ಯಾವುದೇ ಸ್ಕೋಪ್ ಇಲ್ಲವೆಂದು ಒಬ್ಬರು ಬರೆದುಕೊಂಡಿದ್ದಾರೆ.
ಫಸ್ಟ್ ಹಾಫ್ ಕೊರಟಾಲ ಅವರು ಫುಲ್ ಪ್ಲೇಟ್ ಬಿರಿಯಾನಿಯನ್ನು ಡಬಲ್ ಮಸಾಲ, ಎಕ್ಸ್ ಟ್ರಾ ಲೆಗ್ ಫೀಸ್ ನೊಂದಿಗೆ ನಿಮಗೆ ಕೊಡುತ್ತಾರೆ. ದ್ವಿತೀಯಾರ್ಧದಲ್ಲಿ ಅವರು ಆರ್ಡರ್ ಕ್ಯಾನ್ಸಲ್ ಮಾಡುತ್ತಾರೆ ಎಂದು ವ್ಯಂಗ್ಯವಾಗಿಯೇ ಸಿನಿಮಾ ಒಬ್ಬರು ಟೀಕಿಸಿದ್ದಾರೆ.
‘ದೇವರ’ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ಸೈಫ್ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.