ದೇವನಹಳ್ಳಿ: ಇತ್ತೀಚಿನ ನವಿಲು ಗ್ರಾಮಗಳಲ್ಲಿ ಸ್ಥಳೀಯರು ನವಿಲಿನ ನರ್ತನ ನೋಡಿ ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ದಿನ್ನೆ ಸೋಲೂರು ಗ್ರಾಮಸ್ಥರು ಕಣ್ಣು ತುಂಬಿಸಿಕೊಳ್ಳುತ್ತಿದ್ದಾರೆ. ಕಾಡಿನಲ್ಲಿರುವ ಪ್ರಾಣಿ ಪ್ರಾಣಿ- ಪಕ್ಷಿಗಳೊಂದಿಗೆ ಇರಬೇಕಾದ ನವಿಲು ಸುಮಾರು ವರ್ಷಗಳಿಂದ ಗ್ರಾಮದಲ್ಲಿ ಸಾಕು ಪ್ರಾಣಿ ಪಕ್ಷಿಗಳೊಂದಿಗೆ ನಂಟು ಇಟ್ಟುಕೊಂಡು ಗ್ರಾಮದಲ್ಲಿ ವಾಸವಾಗಿರುವ ಸೆಲ್ಫಿ ನವಿಲು ಆಗಾಗ್ಗೆ ಗ್ರಾಮಸ್ಥರ ಮತ್ತು ಸಾರ್ವಜನಿಕರ ಆಕರ್ಷಣೀಯವಾಗಿದೆ.
ನವಿಲು ನೃತ್ಯಯ ನೋಡಲು ಎರಡು ಕಣ್ಣು ಸಾಲದು. ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿನ ದಿನ ಗಳಲ್ಲಿ ನವಿಲುಗಳು ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಬೊಮ್ಮವಾರ ಸಮೀಪದಲ್ಲಿ ಕಾಣಿಸಿಕೊಳ್ಳುತ್ತದೆ. ತಾಲೂಕಿನ ಇತರೆ ಭಾಗಗಳಲ್ಲಿ ಕಂಡು ಬರುತ್ತಿದೆ.
ಪ್ರತಿಯೊಬ್ಬರೂ ನವಿಲುಗಳನ್ನು ನೋಡುತ್ತಿದ್ದಾರೆ. ಕೇವಲ ಕಾಡುಗಳಲ್ಲಿ ಮತ್ತು ಪ್ರಾಣಿ ಸಂಗ್ರಾಲಯ ಮತ್ತು ಇತರ ಕಡೆಗಳಲ್ಲಿ ನೋಡುತ್ತಿದ್ದರು. ಈಗ ಗ್ರಾಮಾಂತರ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರತಿಯೊಬ್ಬರಲ್ಲೂ ಆಕರ್ಷಣೀಯವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಅರಣ್ಯ ಪ್ರದೇಶ ಸಾಕಷ್ಟು ಕಡಿಮೆಯಾಗುತ್ತಿದೆ. ಜಾಗತೀಕರಣ ತಾಪಮಾನ ಮತ್ತು ಅಭಿವೃದ್ಧಿಯಾಗುತ್ತಿರುವು ದರಿಂದ ಮರ ಗಿಡಗಳು ಕಡಿಮೆಯಾಗುತ್ತಿವೆ. ಮಳೆ ಬೆಳೆಯಾಗಬೇಕಾದರೆ ಹೆಚ್ಚೆಚ್ಚು ಜನ ಗಿಡಮರವನ್ನು ಬೆಳೆಸಬೇಕು. ಕಾಡು ಹೆಚ್ಚಾದರೆ ಮಳೆಯೂ ಸಹ ಹೆಚ್ಚಾಗುತ್ತದೆ ಎಂದು ಪರಿಸರ ಪ್ರೇಮಿಗಳು ಹೇಳುತ್ತಾರೆ.
ಕಾಡಿನಲ್ಲಿರುವ ಪ್ರಾಣಿ-ಪಕ್ಷಿಗಳೊಂದಿಗೆ ಇರಬೇಕಾದ ನವಿಲು ಸುಮಾರು ವರ್ಷಗಳಿಂದ ಇಲ್ಲಿನ ವಿಶ್ವನಾಥ ಪುರ ಗ್ರಾಪಂ ವ್ಯಾಪ್ತಿಯ ದಿನ್ನೆ ಸೋ ಲೂರು ಗ್ರಾಮದಲ್ಲಿ ಸಾಕು ಪ್ರಾಣಿ, ಪಕ್ಷಿಗಳೊಂದಿಗೆ ನಂಟು ಇಟ್ಟುಕೊಂಡು ಗ್ರಾಮದಲ್ಲಿಯೇ ವಾಸವಾಗಿರುವ ಸೆಲ್ಫಿ ನವಿಲು ಆಗಾಗ್ಗೆ ಗ್ರಾಮಸ್ಥರ ಮತ್ತು ಸಾರ್ವಜನಿಕರ ಆಕರ್ಷಣೀಯ ವಾಗಿದೆ. ಮನುಷ್ಯನ ಕಂಡು ಓಡಿಹೋಗುವ ನವಿಲುಗಳ ತದ್ವಿರುದ್ಧವಾಗಿ ಕೋಳಿ, ನಾಯಿ, ಕುರಿ, ಮೇಕೆ ಇವುಗಳ ಜೊತೆಯಲ್ಲಿ ನಾನು ಸಹ ಇದ್ದೇನೆ ಎಂದು ಇಲ್ಲಿನ ನವಿಲೊಂದು ಸುಮಾರು ವರ್ಷಗಳಿಂದ ವಾಸ್ತವ್ಯ ಹೂಡಿದ್ದು, ಕಾಡಿಗೆ ಬಿಟ್ಟರೂ ಮತ್ತೇ ಗ್ರಾಮ ಸೇರುವ ನವಿಲು ಇದಾಗಿದ್ದು, ಇಲ್ಲಿನ ಗ್ರಾಮಸ್ಥರು ಸಹ ಕೋಳಿ ಆಹಾರವನ್ನೇ ಅದಕ್ಕೂ ಕೊಟ್ಟು ಸಾಕು ಪ್ರಾಣಿಯಂತೆ ಸಾಕುತ್ತಿರುವುದು ಮತ್ತೂಂದು ವಿಶೇಷ.
ಸುಮಾರು 2 ವರ್ಷಗಳಿಂದ ಗ್ರಾಮದಲ್ಲಿ ನವಿಲು ವಾಸವಿದೆ. ಸಾಕಿರುವ ಪ್ರಾಣಿಗಳೊಂದಿಗೆ ನಂಟು ಇಟ್ಟುಕೊಂಡು ಓಡಾಡಿಕೊಂಡು ಇರುತ್ತದೆ. ಯಾರಾದರೂ ನವಿಲಿನೊಂದಿಗೆ ಫೋಟೋ ಸೆಲ್ಫಿ ಹಿಡಿಯುತ್ತಾರೆ. ಬೆಳಗಿನ ಜಾವದಲ್ಲಿ ನವಿಲ ನರ್ತನ ಆಕರ್ಷಕವಾಗಿರುತ್ತದೆ.
● ಶ್ರೀನಿವಾಸ್, ಗ್ರಾಪಂ ಸದಸ್ಯ, ದಿನ್ನೆಸೋಲೂರು
ಇಲ್ಲಿನ ನವಿಲು ನೀರಿನ ಟ್ಯಾಂಕ್, ಮನೆಗಳ ಅಂಗಳ ಸುತ್ತಮುತ್ತ ಓಡಾಡಿಕೊಂಡು ಇರುತ್ತದೆ. ಸ್ಥಳೀಯ ಮಕ್ಕಳು ಸಹ ಇದರೊಂದಿಗೆ ಆಟವಾಡಿಕೊಂಡು ಇರುತ್ತಾರೆ. ಬೆಳಗ್ಗೆ ಊರಿನವರಿಗೆ ದರ್ಶನವನ್ನು ಕೊಡುತ್ತದೆ. ಎಲ್ಲಿಯೂ ಹೋಗದೆ ಇಲ್ಲಿಯೇ ಇದರ ವಾಸ್ತವ್ಯ ಸ್ಥಳವಾಗಿದೆ.
● ವೇಣು, ಗ್ರಾಮಸ್ಥ, ದಿನ್ನೆ ಸೋಲೂರು
ಆಹಾರ ಹುಡುಕಿಕೊಂಡು ಗ್ರಾಮಗಳಿಗೆ ನವಿಲುಗಳು ಬರುತ್ತಿವೆ. ಅವುಗಳಿಗೆ ಸೂಕ್ತ ವಾತಾವರಣ ಜಾಗದಲ್ಲಿ ಸಿಗು ವುದರಿಂದ ಅವುಗಳು ಗ್ರಾಮಗಳ ಕಡೆ ಬರುವ ಸಾಧ್ಯತೆ ಇದೆ. ಕಾಡು ಪ್ರದೇಶ ಕಡಿಮೆಯಾಗು ತ್ತಿದೆ. ಕಾಡು ಪ್ರದೇಶ ವನ್ನು ಹೆಚ್ಚಿಸಬೇಕು. ಇತ್ತೀಚಿನ ದಿನಗಳಲ್ಲಿ ಮಳೆ ಇಲ್ಲದೆ ತಾಪಮಾನ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರೂ ಮಲಗಿಡಗಳನ್ನು ಬೆಳೆಸಬೇಕು. ಗ್ರಾಮೀಣ ಪ್ರದೇಶದಲ್ಲಿ ನವಿಲುಗಳು ಬರುತ್ತಿರುವುದರಿಂದ ಅದರ ನರ್ತನ ನೋಡಲು ಅವಕಾಶವಾಗಿದೆ.
● ಜಿ.ಮಂಜುನಾಥ್, ಪರಿಸರ ಪ್ರೇಮಿ.
-ಎಸ್.ಮಹೇಶ್