Advertisement
ಬೇವು-ಬೆಲ್ಲ ಹಂಚಿ ಶುಭಾಶಯ ವಿನಿಮಯ: ಜನರು ಬೇವು-ಬೆಲ್ಲ ಹಂಚಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ತಾಲೂಕಿನಾದ್ಯಂತ ರಾಸುಗಳನ್ನು ವಿಶೇಷವಾಗಿ ಸಿಂಗರಿಸಿ, ಕೊಂಬುಗಳಿಗೆ ಬಣ್ಣ ಹಚ್ಚಿ, ಮನೆಗಳ ಎದುರು ಬಣ್ಣಬಣ್ಣದ ರಂಗವಲ್ಲಿ ಹಾಕಿ ಸಂಭ್ರಮಿಸಿ, ಬೇವು-ಬೆಲ್ಲ ಸೇವಿಸಿ ಸ್ನೇಹ ಸದ್ಭಾವನೆಯಿಂದ ಒಳ್ಳೊಳ್ಳೆ ಮಾತಾಡೋಣ ಎಂದು ಪರಸ್ಪರ ಶುಭಾಶಯ ಹಂಚಿಕೊಂಡರು.
ಬಾಗಿಲಿನಲ್ಲಿ ಮೆರವಣಿಗೆ ಮಾಡಲಾಯಿತು. ರಾಸುಗಳ ಮೆರವಣಿಗೆ: ರಸ್ತೆಯಲ್ಲಿ ಹುಲ್ಲಿಗೆ ಬೆಂಕಿ ಹಾಕಿ, ತಮ್ಮ ರಾಸುಗಳನ್ನು ಕಿಚ್ಚಿನಲ್ಲಿ ಹಾಯಿಸುವುದರ ಮೂಲಕ ರೈತರು ಹಬ್ಬವನ್ನು ಸಡಗರದಿಂದ ಸಂಭ್ರಮಿಸಿದರು. ವರ್ಷಕ್ಕಿಂತ ವರ್ಷ ಈ ಬಾರಿ ರಾಸುಗಳು ಕಿಚ್ಚು ಹಾಯಿಸುವವರ ಸಂಖ್ಯೆ ತೀರ ಕಡಿಮೆಯಾಗುತ್ತಿದೆ. ಪ್ರತಿ ಹಳ್ಳಿಯಲ್ಲೂ ಹಸುಗಳಿಗೆ ಪೂಜೆ ಮಾಡಿ, ಮೆರವಣಿಗೆ ಮೂಲಕ ಗ್ರಾಮಗಳಲ್ಲಿ ಹಸುಗಳಿಗೆ ಸಿಂಗಾರ ಮಾಡಿ, ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಬೆಂಕಿ ಇಟ್ಟು ಕಿಚ್ಚು ಹಾಯಿಸುವ ಪದ್ಧತಿ ಹಿರಿಯರ ಕಾಲದಿಂದ ಸಂಪ್ರದಾಯವಾಗಿ ನಡೆದುಕೊಂಡು ಬರುತ್ತಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮನೆಗಳಿಂದ ಹೊರಬಂದು ಹಸುಗಳಿಗೆ ಅಲಂಕಾರ ಮಾಡಿರುವುದನ್ನು ನೋಡಲು ಕಾತುರದಿಂದ ಕಾದುಕುಳಿತಿರುತ್ತಾರೆ.
Related Articles
Advertisement
ಕಾಟಮರಾಯನಿಗೆ ಪೂಜೆ: ಅಂದಿನ ಕಾಲದಿಂದ ಕಾಟಮರಾಯನಿಗೆ ಪೂಜೆ ಮಾಡುವ ಸಂಪ್ರದಾಯವಿದೆ. ಹಿರಿಯರು ಮಾತಿನಂತೆ ಎತ್ತು, ಹಸುಗಳಿಗೆ ರೋಗರುಜಿನ ಬರದಂತೆ ನೋಡಿಕೊಳ್ಳಲೆಂದು ಈ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸುವ ನಂಬಿಕೆ ರೈತರಲ್ಲಿದೆ. ಕಾಟಮರಾಯನಿಗೆ ಅಲಂಕಾರ ಮಾಡಿ, ಪೂಜಾ ಕೈಂಕರ್ಯ ನಡೆಸುವುದುಂಟು. ಪೂಜೆಯ ನಂತರ ಪ್ರಸಾದ ವಿನಿಯೋಗ ಮಾಡುತ್ತಾರೆ.