ದೇವನಹಳ್ಳಿ: ಗ್ರಾಮೀಣ ಭಾಗದ ಶಾಲೆಗಳ ಅಭಿ ವೃದ್ಧಿಗೆ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರ ಕೋಟ್ಯಾಂತರ ರೂಪಾಯಿ ವ್ಯಯ ಮಾಡು ತ್ತಿದ್ದರು ಸಹ ಹಾಗೂ ಸಿಎಸ್‌ಆರ್ ಅನುದಾನಗಳಲ್ಲಿ ಶೌಚಾಲಯ ನಿರ್ಮಾಣ ವಾಗಿದ್ದರೂ ಸಹ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಯ ಶೌಚಾಲಯ ಅವ್ಯವಸ್ಥೆಯ ತಾಣವಾಗಿದೆ.
ತಾಲೂಕಿನ ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಗೆ ಮಕ್ಕಳಿಗೆ ಅನುಕೂಲವಾಗಲು ಸಿಎಸ್‌ಆರ್ ಅನುದಾನ ದಲ್ಲಿ ಕಂಪನಿಯೊಂದು ಕಟ್ಟಿಸಿ ಕೊಟ್ಟಿದೆ ಆದರೆ ಅದರ ನಿರ್ವಹಣೆ ಇಲ್ಲದೆ ಅವ್ಯವಸ್ಥೆಗೆ ಕಾರಣವಾಗಿದೆ. ವಿಶ್ವ ನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಗೆ ಡಿ ದರ್ಜೆ ನೌಕರರ ಕೊರತೆ ಇದೆ. ನಾಲ್ಕು ಜನಕ್ಕೆ ಒಬ್ಬರು ಸಹ ಡಿದರ್ಜೆ ನೌಕರರು ಇಲ್ಲ. ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್ ಕೆಜಿ ಮತ್ತು ಯುಕೆಜಿ ಒಂದನೇ ತರಗತಿಯಿಂದ ಎಸ್ ಎಸ್‌ಎಲ್‌ಸಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಸಹ ಇರುವುದರಿಂದ ಸುಮಾರು 420 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಾಲಕ/ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದ್ದರೂ ಸಹ ಶೌಚಾಲಯದಲ್ಲಿ ನೀರಿನ ಸಂಪರ್ಕ ಪೈಪು ಗಳು ಮಾತ್ರ ಕಾಣುತ್ತಿವೆ, ಆದರೆ ಒಂದು ತೊಟ್ಟು ನೀರು ಸಹ ಬರದಿರುವುದು ದುರ ದೃಷ್ಟಕರವಾಗಿದೆ.
ಅನೈತಿಕ ಚಟುವಟಿಕೆಗಳ ತಾಣ: ಶಾಲೆ ಮುಗಿದ ನಂತರ ಸಂಜೆ ವೇಳೆಯಲ್ಲಿ ಪುಂಡಪೋಕರಿಗಳು ಶೌಚಾಲಯದ ಕಿಟಕಿಗಳನ್ನು ಹೊಡೆಯುತ್ತಿದ್ದಾರೆ. ಕಾಂಪೌಂಡ್ ವ್ಯವಸ್ಥೆ ಇಲ್ಲದೆ ಪ್ರತಿದಿನ ಸಂಜೆ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣ ದಲ್ಲಿ ಅನೈತಿಕ ಚಟುವಟಿಕೆ ಗಳ ತಾಣವಾಗಿದೆ. ಮದ್ಯಪಾನ ಮಾಡಿ ಬಾಟಲುಗಳನ್ನು ಬಿಟ್ಟು ಹೋಗುತ್ತಾರೆ. ಶಾಲೆಯ ಸುತ್ತಲೂ ಕಾಂಪೌಡ್ ನಿರ್ಮಾಣ ಮಾಡಿದರೆ ಮಾತ್ರ ಅನೈತಿಕ ಚಟುವಟಿಕೆ ಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಸ್ಥಳೀಯರು ಹೇಳುತ್ತಾರೆ.
ಅನೇಕ ಬಾರಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶಾಲಾ ಜಾಗ ಅಳತೆ ಮಾಡಲು ಸೂಚಿಸಿದ್ದರು. ಇನ್ನು ಅಳತೆ ಕಾರ್ಯವಾಗುತ್ತಿಲ್ಲವೆಂಬ ಆರೋಪ ಶಾಲಾ ಆಡಳಿತಯಿಂದ ಕೇಳಿ ಬರುತ್ತಿದೆ. ಶೌಚಾಲಯದ ಅವ್ಯವಸ್ಥೆ ಒಂದು ಕಡೆಯಾದರೆ ಶಾಲಾ ಕಾಂಪೌಂಡಿನ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಆವರಣಕ್ಕೆ ಕಲ್ಪಿಸದೆ ಇರುವುದರಿಂದ ಸಾಕಷ್ಟು ಸಮಸ್ಯೆ ಗಳಿಗೆ ಕಾರಣವಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಚುನಾಯಿತ ಜನಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯತ್ತ ಗಮನ ಆರಿಸಿ ಅಭಿವೃದ್ಧಿ ಪಡಿಸಬೇಕೆಂದು ಸಾರ್ವಜನಿಕರು ಹಾಗೂ ಶಾಲಾ ಆಡಳಿತ ಮಂಡಳಿ ಸೇರಿದಂತೆ ವಿದ್ಯಾರ್ಥಿಗಳ ಒತ್ತಾಯವಾಗಿದೆ.
ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಯ ಶೌಚಾಲಯ ಅವ್ಯವಸ್ಥೆಯಾಗಿದ್ದು ಕೂಡಲೇ ಸರಿಪಡಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ. ಕೂಡಲೇ ಜನಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಯಾದ ಕಾಂಪೌಂಡ್ ನಿರ್ಮಾಣ ಮಾಡಿಕೊಡಬೇಕು.
-ಶ್ರೀನಿವಾಸ್, ಸ್ಥಳೀಯ ನಾಗರಿಕ ವಿಶ್ವನಾಥಪುರ
ಕರ್ನಾಟಕ ಪಬ್ಲಿಕ್ ಶಾಲೆ ಆವರಣಕ್ಕೆ ಕಾಂಪೌಂಡ್ ನಿರ್ಮಾಣಕ್ಕೆ ಮಹಾತ್ಮ ಗಾಂಧಿ ಉದ್ಯೋಗ್ ಖಾತ್ರಿ ಯೋಜನೆಯಲ್ಲಿ ಮಾಡಲು ಆಗುತ್ತಿಲ್ಲ. ಹೆಚ್ಚು ಜಾಗ ಇರುವುದರಿಂದ ಹಂತ ಹಂತವಾಗಿ ಕಾಂಪೌಂಡ್ ನಿರ್ಮಾಣ ಮಾಡಬೇಕಾಗಿದೆ. ಶೌಚಾಲಯ ಅವ್ಯವಸ್ಥೆ ಸಂಬಂಧಪಟ್ಟಂತೆ ಕರ್ನಾಟಕ ಪಯ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದುಕೊಳ್ಳಲಾಗುವುದು.
-ಶ್ರೀಕಂಠ, ಉಪನಿರ್ದೇಶಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ
-ಎಸ್.ಮಹೇಶ್