Advertisement
ಪ್ರವಾಸಿಮಂದಿರದಿಂದ ಪ್ರಾರಂಭಗೊಂಡ ಪ್ರತಿಭಟನಾ ರ್ಯಾಲಿ ಪಟ್ಟಣದ ರಾಜಬೀದಿಗಳಲ್ಲಿ ತೆರಳಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ರೈತರು ಬೆಳೆದ ಹೂವು, ಹಣ್ಣು, ತರಕಾರಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಹಾಗೂ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಭೂಸ್ವಾಧೀನ ಮಾಡಲು ಬಿಡುವುದಿಲ್ಲ. ಪ್ರಾಣ ಬೇಕಾದರೂ ಬಿಡುತ್ತೇವೆ. ಭೂಮಿ ಬಿಡುವುದಿಲ್ಲ. ರೈತರ ಫಲವತ್ತಾದ ಕೃಷಿ ಭೂಮಿ ಉಳಿಸಬೇಕು.
Related Articles
Advertisement
ನೋಟಿಫಿಕೇಷನ್ ಮಾಡಿರುವ ಭೂಮಿ ಕೃಷಿ ಭೂಮಿ ಆಗಿದೆ: ತಾಲೂಕು ರೈತಸಂಘದ ಅಧ್ಯಕ್ಷ ಗಾರೆ ರವಿಕುಮಾರ್ ಮಾತನಾಡಿ, ನಲ್ಲೂರು, ನಲ್ಲಪ್ಪನಹಳ್ಳಿ, ಚೀಮಾ ಚನ ಹಳ್ಳಿ, ಪಾಳ್ಯ, ಚನ್ನರಾಯಪಟ್ಟಣ, ಹ್ಯಾಡಾಳ, ಪೋಲನಹಳ್ಳಿ, ಮಲ್ಲೇಪುರ, ಮುಟ್ಟ ಬಾರ್ಲು, ಗೋಕರೆ ಬಚ್ಚೇನಹಳ್ಳಿ, ತೆಲ್ಲೋಹಳ್ಳಿ, ಹರಳೂರು, ಮುದ್ದೇನಹಳ್ಳಿ ಗ್ರಾಮ ಗಳ ಸುಮಾರು 2,336 ಎಕರೆ ಭೂಮಿ ನೋಟಿμಕೇಷನ್ ಸಹ ಮಾಡಿದೆ. ನೋಟಿಫಿ ಕೇಷನ್ ಮಾಡಿರುವ ಬಹುಪಾಲು ಭೂಮಿಯು ಕೃಷಿ ಭೂಮಿಯಾಗಿದ್ದು, ಇದರಲ್ಲಿ ದಿನನಿತ್ಯದ ಆಹಾರ ಧಾನ್ಯ, ತರಕಾರಿ, ದ್ರಾಕ್ಷಿ, ಮಾವು, ರೇಷ್ಮೆ ಸೇರಿ ಸುಮಾರು ತೋಟಗಾರಿಕಾ ಬೆಳೆ ಬೆಳೆದು ಜೀವನೋಪಾಯ ಮಾಡಲಾಗುತ್ತಿದೆ ಎಂದರು.
ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ರಾಜ್ಯ ರೈತಸಂಘದ ಉಪಾಧ್ಯಕ್ಷ ವೆಂಕಟ ನಾರಾಯಣಪ್ಪ, ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಬಚ್ಚಹಳ್ಳಿ ವೆಂಕಟೇಶ್, ಉಪಾಧ್ಯಕ್ಷ ನಾರಾಯಣಸ್ವಾಮಿ (ನಾಣಿ), ಹಸಿರು ಸೇನೆಯ ತಾಲೂಕು ಅಧ್ಯಕ್ಷ ಶಶಿಕುಮಾರ್, ಕರವೇ ಗೌರವಾ ಧ್ಯಕ್ಷ ಎನ್.ಚಂದ್ರಶೇಖರ್, ತಾಲೂಕು ಅಧ್ಯಕ್ಷ ಜಯ ಶಂಕರ್, ಉಪಾಧ್ಯಕ್ಷ ಗಯಾಜ್ ಪಾಷ, ನಾಸಿರ್ ಅಹಮದ್, ಶಿವಪ್ರಕಾಶ್, ಪಿ.ನಾಗೇಶ್, ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಕೆ.ಸಿ. ನರೇಂದ್ರ ಬಾಬು, ಬಿಎಸ್.ಪಿ ಜಿಲ್ಲಾಧ್ಯಕ್ಷ ತಿಮ್ಮ ರಾಯಪ್ಪ, ಸಂಚಾಲಕ ಆವತಿ ತಿಮ್ಮರಾಯಪ್ಪ, ಅತ್ತಿ ಬೆಲೆ ನರಸಪ್ಪ, ರೈತ ವೆಂಕಟರಮಣಪ್ಪ, ಮೋಹನ್ ಕುಮಾರ್, ರಮೇಶ್, ಬಾಬು, ಅಶ್ವಥಪ್ಪ, ನಂಜಪ್ಪ, ದೇವರಾಜಪ್ಪ, ಸತ್ಯಪ್ಪ, ಮುಕುಂದ, ಮುನಿರಾಜು, ಗೋಪಾಲಪ್ಪ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಇದ್ದರು.
ರೈತರಿಗೆ ಹಣ ನೀಡಿ ಮನವೊಲಿಸುವ ಷಡ್ಯಂತ್ರಕಳೆದ 75ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿದ್ದಾರೆ. ಭೂಸ್ವಾಧಿನ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಬಡವರು, ದಲಿತರಿಗೆ ಹಣದ ಆಮಿಷವನ್ನು ನೀಡಿ ಮನವೊಲಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡುತ್ತಿರುವ ರೈತರು ರೈತರಲ್ಲ ಎಂದು ನಿರಾಣಿ ಹೇಳುತ್ತಾರೆ. ಇಲ್ಲಿನ ಕೆಐಎಡಿಬಿ ಭೂಸ್ವಾಧೀನದ ಹಣದಿಂದ ಮುಖ್ಯಮಂತ್ರಿ ಆಗುತ್ತೇನೆಂಬ ಕನಸಿನಲ್ಲಿ ಮುರುಗೇಶ್ ನಿರಾಣಿ ಇದ್ದಾರೆ. ಮುಖ್ಯಮಂತ್ರಿ ಕನಸನ್ನು ಬಿಟ್ಟು ಬಿಡಿ. ಇನ್ನು ಮುಂದೆ ಆಗುವುದಿಲ್ಲ. ಯಡಿಯೂರಪ್ಪ ಸರ್ಕಾರದಲ್ಲಿ ಕಟ್ಟಾಸುಬ್ರಮಣ್ಯ ನಾಯ್ಡು ಕೆಲವು ಹಗರಣಗಳಿಂದ ಜೈಲಿಗೆ ಹೋಗಿದ್ದರು. ಅದೇ ರೀತಿ ಮುರುಗೇಶ್ ನಿರಾಣಿ ಸಹ ಹೋಗುತ್ತಾರೆ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಕಿಡಿಕಾರಿದರು. ರೈತರ ಸಮಸ್ಯೆ ಬಗೆಹರಿಸುವೆ: ಎಂಟಿಬಿ ನಾಗರಾಜ
ರೈತರ ಪ್ರತಿಭಟನೆ ವೇಳೆಯಲ್ಲಿ ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ನಂತರ ರೈತರಿಂದ ಮನವಿ ಪತ್ರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, 8ದಿನದೊಳಗಾಗಿ ಮುಖ್ಯಮಂತ್ರಿ, ಕೈಗಾರಿಕಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಲು ಅವಕಾಶ ಮಾಡಿ ಕೊಡುತ್ತೇನೆ. ರೈತರ ಸಮಸ್ಯೆ ಸಂಬಂಧಪಟ್ಟಂತೆ ಕೈಗಾರಿಕಾ ಸಚಿವರೊಂದಿಗೆ ಮಾತನಾಡಿದ್ದೇನೆ. ದೇವನಹಳ್ಳಿಗೆ ಕೈಗಾರಿಕಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಒಂದು ಸಭೆಯನ್ನು ಮಾಡಲಾಗುವುದು. ಒಂದೇ ಹೋಬಳಿಯಲ್ಲಿ 1,777 ಎಕರೆ ಜಮೀನನ್ನು ಭೂಸ್ವಾಧೀನ ಮಾಡುತ್ತಿರುವುದರ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ರೈತರ ಜೊತೆ ನಾವಿದ್ದೇವೆ. ರೈತರ ಸಮಸ್ಯೆಬಗೆಹರಿಸಲಾಗುವುದು ಎಂದರು.