Advertisement

ಕುಂಭಕಾಶಿ ಇಂದು ದೇವ ಕಾಶಿ: ಪೇಜಾವರ ಶ್ರೀ

11:27 AM Apr 30, 2018 | Team Udayavani |

ತೆಕ್ಕಟ್ಟೆ (ಕುಂಭಾಶಿ): ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲದ ಶಿಲಾಮಯ ಗರ್ಭಗೃಹದ ನೂತನ ದೇಗುಲ ಸಮರ್ಪಣೆ, ಶ್ರೀ ಮಹಾಗಣಪತಿ, ಶ್ರೀ ವೆಂಕಟರಮಣ ದೇವರು, ಶ್ರೀ ನಾಗ, ಶ್ರೀ ನಾಗಯಕ್ಷಿ, ಶ್ರೀ ಸ್ವರ್ಣಯಕ್ಷಿ ಬಿಂಬ ಪ್ರತಿಷ್ಠೆ, ತಣ್ತೀಕಲಶಾಭಿಷೆೇಕ, ಪ್ರತಿಷ್ಠಾ ಕಲಶಾಭಿಷೇಕ, ಮೂರು ಭದ್ರಾದೀಪ ಪ್ರತಿಷ್ಠೆಯನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ರವಿವಾರ ನೆರವೇರಿಸಿದರು.

Advertisement

ಬಳಿಕ ಧಾರ್ಮಿಕ ಸಭೆಯನ್ನು ಉದ್ಘಾಟಿಸಿದ ಶ್ರೀಗಳು ಮಾತನಾಡಿ, ದುಷ್ಟ ಶಕ್ತಿಗಳನ್ನು ಸಂಹಾರ ಮಾಡಿದ ಈ ಕುಂಭಾಶಿ ಪುಣ್ಯ ಕ್ಷೇತ್ರದಲ್ಲಿ ಭವ್ಯವಾಗಿ ನಿರ್ಮಾಣವಾದ ದುರ್ಗಾ ದೇವಿಯ ದೇಗುಲದಿಂದಾಗಿ ದೇವ ಕಾಶಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ದೇಗುಲದ ಕಾರಣಕರ್ತರಾದ, ಮುಂಬಯಿ ಉದ್ಯಮಿ ದೇವರಾಯ ಎಂ. ಶೇರೆಗಾರ್‌ ಮತ್ತು ಅನಿತಾ ದಂಪತಿ ಶ್ರೀಗಳಿಗೆ ಫಲಪುಷ್ಪ ನೀಡಿ ಗೌರವಿಸಿದರು.

ಶ್ರೀ ಕ್ಷೇತ್ರ ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ
ಹರಿನಾರಾಯಣ ದಾಸ ಆಸ್ರಣ್ಣರು, ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ 
ಧರ್ಮದರ್ಶಿ ಕೆ. ಸೂರ್ಯ ನಾರಾಯಣ ಉಪಾಧ್ಯಾಯ, ಆಗಮ ಪಂಡಿತ ಎಲ್ಲೂರು ಸೀಮೆಯ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಪ್ರಧಾನ ಅರ್ಚಕ ವೇ|ಮೂ| ಕೆ. ಶ್ರೀಧರ ಉಪಾಧ್ಯಾಯ ಕಾರ್ಯಕ್ರಮದಲ್ಲಿ ಕುಂದಾಪುರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರವೀಂದ್ರ ಕಾವೇರಿ, ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನ ಇದರ ಅಧ್ಯಕ್ಷ ಜಯಾನಂದ ಖಾರ್ವಿ, ಕುಂದಾಪುರ ಬಿಲ್ಲವ ಸಂಘದ ಅಧ್ಯಕ್ಷ ಎನ್‌.ಟಿ. ಪೂಜಾರಿ ಹಾಗೂ ಗಂಗೊಳ್ಳಿ ಹೊಸಮನೆ ಕುಟುಂಬಸ್ಥರು, ಕೀರ್ತಿಶೇಷ ಗೌರಮ್ಮ ಮತ್ತು ಮಂಜುನಾಥ ಶೇರೆಗಾರ ಕುಟುಂಬಿಕರು ಉಪಸ್ಥಿತರಿದ್ದರು.

ದೇವರಾಯ ಎಂ. ಶೇರೆಗಾರ್‌ ಸ್ವಾಗತಿಸಿ, ಸಂತೋಷ್‌, ರಶ್ಮಿರಾಜ್‌, ರಾಜಶೇಖರ್‌ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next