Advertisement
ವೇದಿಕೆಯಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರೊಮೋಸ್ ಎಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಇದರ ವ್ಯವಸ್ಥಾಪಕ ನಿರ್ದೇಶಕ ಬಿ. ಬಿ. ಘಟಕಲ, ವಿಶೇಷ ಅತಿಥಿಗಳಾಗಿ ದುಬೈ ದೇವಾಡಿಗ ಸಂಘ ಇದರ ಸಂಸ್ಥಾಪಕ ಹಾಗೂ ಶ್ರೀ ಏಕನಾಥೇಶ್ವರಿ ದೇವಸ್ಥಾನ ಕಟ್ಟಡ ಸಮಿತಿಯ ಟ್ರಸ್ಟಿ ಶೀನ ದೇವಾಡಿಗ, ಲೋಟಸ್ ಇಂಟರ್ ನ್ಯಾಶನಲ್ ಪ್ರೈಟ್ ಎಕೊÕ$³àರ್ಟ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಮಹಾಬಲ ದೇವಾಡಿಗ, ಸಂಘದ ಗೌರವಾಧ್ಯಕ್ಷ ಸುರೇಶ ಡಿ. ಪಡುಕೋಣೆ, ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗ, ಗೌರವ ಉಪಾಧ್ಯಕ್ಷರಾದ ನಾಗರಾಜ ಪಡುಕೋಣೆ, ಉಪಾಧ್ಯಕ್ಷರಾದ ಎನ್. ಎನ್. ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಬಿ. ಎಂ. ದೇವಾಡಿಗ, ಮಂಜುನಾಥ ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಸೀತಾ ಎಂ. ದೇವಾಡಿಗ ಉಪಸ್ಥಿತರಿದ್ದರು.
Related Articles
Advertisement
ಇನ್ನೋರ್ವ ವಿಶೇಷ ಅತಿಥಿ ಶೀನ ದೇವಾಡಿಗ ದುಬೈ ಮಾತನಾಡಿ, ನಮ್ಮಲ್ಲಿ ಸಾಮಾಜಿಕ ಪ್ರಜ್ಞೆ ಹಾಗೂ ಕಳಕಳಿ ಇರಬೇಕು. ಅಗತ್ಯವಿದ್ದ ನಮ್ಮ ಸಮಾಜ ಬಾಂಧವರಿಗೆ ನಮ್ಮಲ್ಲಿ ಆಗುವಷ್ಟು ಸಹಾಯಹಸ್ತ ಚಾಚಬೇಕು ಎನ್ನುವ ಹಿತನುಡಿಯನ್ನು ತಿಳಿಸಿದರು. ಸಭಾಧ್ಯಕ್ಷ ಸುರೇಶ ಡಿ. ಪಡುಕೋಣೆ ಅವರು ಮಾತನಾಡಿ, ನಮ್ಮ ಸಂಘವು ಸಾಕಷ್ಟು ಸಾಧನೆಗಳನ್ನು ಮಾಡಿದೆ. ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗ ಅವರು ಸುದೀರ್ಘ ಕಾಲದಿಂದ ಸಂಘಕ್ಕೆ ಯೋಗ್ಯ ಹಾಗೂ ಉತ್ಕೃಷ್ಟ ಯೋಗದಾನ ನೀಡುತ್ತಿ¨ªಾರೆ. ನಮ್ಮ ಸಂಘಕ್ಕೆ ಅತೀ ಆವಶ್ಯಕವಾದ ನಮ್ಮದೇ ಆದ ಸಮಾಜ ಭವನ ಸ್ಥಾಪಿಸುವಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಂಘದ ಸಂಸ್ಥಾಪಕ ಸದಸ್ಯರುಗಳಾದ ಎನ್. ಎನ್. ದೇವಾಡಿಗ, ಎಸ್. ವಿ. ದೇವಾಡಿಗ, ಜಿ. ವಿ. ದೇವಾಡಿಗ ಮತ್ತು ಎ. ಎನ್. ದೇವಾಡಿಗ ಇವರುಗಳನ್ನು ಹಾಗೂ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಬಿ. ಎಂ. ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಸೀತಾ ಎಂ. ದೇವಾಡಿಗ ದಂಪತಿಯನ್ನು ಅತಿಥಿಗಣ್ಯರು ಸಮ್ಮಾನಿಸಿದರು. ಕು| ದೀಪಾ ಮಹಾಬಲ ದೇವಾಡಿಗ ಇವರನ್ನು ಗೌರವಿಸಲಾಯಿತು.
ವಾರ್ಷಿಕ ಕ್ರೀಡೋತ್ಸವ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಗೌರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ವೇತನವನ್ನು ಪ್ರತಿ ವರ್ಷದಂತೆ ಸುರೇಶ ಕಂಚೀಕಾನ್ ಇವರು ಪ್ರಾಯೋಜಿಸಿದರು. ಬಹುಮಾನ ಪಡೆದವರ ಯಾದಿಯನ್ನು ರವೀಂದ್ರ ದೇವಾಡಿಗ, ಪ್ರೇಮಾ ದೇವಾಡಿಗ ವಾಚಿಸಿದರು. ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಜಿ. ಎ. ದೇವಾಡಿಗ ಮತ್ತು ಬಿ. ಎಂ. ದೇವಾಡಿಗ ಅತಿಥಿಗಳನ್ನು ಪರಿಚಯಿಸಿದರು. ಸಭಾ ಕಾರ್ಯಕ್ರಮವನ್ನು ಬಿ. ಎಂ. ದೇವಾಡಿಗ ಹಾಗೂ ಅಶೋಕ್ ಕೆ. ದೇವಾಡಿಗ ನಿರೂಪಿಸಿದರು. ಬೆಳಗ್ಗಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಶೋಕ್ ಕೆ. ದೇವಾಡಿಗ ನೆರವೇರಿಸಿದರು. ಬೆಳಿಗ್ಗಿನ ಸಾಂಸ್ಕೃತಿಕ ಸ್ಪರ್ಧೆಗಳ ತೀರ್ಪುಗಾರರಾಗಿ ಶ್ಯಾಮಲಾ ರಾಧೇಶ್ ಹಾಗೂ ರೇಶ್ಮಾ ಗಣಪತಿ ಶಂಕರಲಿಂಗ ಸಹಕರಿಸಿದರು. ಇವರನ್ನು ಸಂಘದ ಪರವಾಗಿ ಅಭಿನಂದಿಸಲಾಯಿತು. ಯುವ ವೇದಿಕೆಯ ಅಧ್ಯಕ್ಷ ಉಮೇಶ್ ಆರ್. ದೇವಾಡಿಗ ವಂದಿಸಿದರು.