Advertisement
ಸಂಘದ ಅಧ್ಯಕ್ಷ ರವಿ ಎಸ್. ದೇವಾಡಿಗ ಮಾತನಾಡಿ, ಜಾತಿ ಬಾಂಧವರ ಸದಸ್ಯತನದ ಗಣತಿ ಮತ್ತು ವೈದ್ಯಕೀಯ ನಿಧಿ ಸಂಗ್ರಹದ ಬಗ್ಗೆ ಸಹಕಾರ ನೀಡುವಂತೆ ಸಂಘದ ಸದಸ್ಯರಲ್ಲಿ ವಿನಂತಿಸಿ, ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆ ಯರು ನೆರೆದಿದ್ದನ್ನು ಕಂಡು ಸಂತೋಷ ವಾಗುತ್ತಿದೆ ಎಂದರು. ಕಾರ್ಯಕ್ರಮವು ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ದೇವಾಡಿಗ ಮತ್ತು ಜತೆ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಡಿತು.
ಗಳ, ಆಟಿ ಕಳಂಜ ಇತ್ಯಾದಿಗಳ ಮಾಹಿತಿ ಯನ್ನು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರಂಜಿನಿ ಆರ್. ಮೊಲಿ ನೀಡಿದರು. ಮಹಿಳಾ ಮಾಜಿ ಕಾರ್ಯಾಧ್ಯಕ್ಷೆ ಪ್ರಫುಲ್ಲಾ ವಾಸು ದೇವಾಡಿಗರು ಪ್ರತಿಭಾ ಸ್ಪರ್ಧೆ ಏರ್ಪಡಿಸಿದ್ದು, ಮಾತ್ರವಲ್ಲದೆ ಅದರ ಬಹುಮಾನಗಳ ಪ್ರಾಯೋಜಕತ್ವ ವಹಿಸಿದರು.
Related Articles
Advertisement
ಮಹಿಳಾ ಸದಸ್ಯೆಯರು ಆಟಿ ತಿಂಗಳ ವ್ಯಂಜನಗಳನ್ನು ಪ್ರದರ್ಶಿಸಿ ತಮ್ಮ ಪಾಕ ವಿಶೇಷತೆಯನ್ನು ಮೆರೆದಿದ್ದು, ಎಲ್ಲರ ಪ್ರಶಂಸೆಗೆ ಪಾತ್ರ ರಾದರು. ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣವನ್ನು ಸುಂದರವಾಗಿ ವಿನ್ಯಾಸ ಮಾಡಿದ ಯುವ ವಿಭಾಗದ ನೀತೇಶ್ ದೇವಾಡಿಗರನ್ನು ಅಭಿನಂದಿಸಲಾಯಿತು. ಮಾಜಿ ಅಧ್ಯಕ್ಷರಾದ ವಾಸು ದೇವಾಡಿಗ, ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ದೇವಾಡಿಗ ಮತ್ತು ಯುವ ವಿಭಾಗದ ಮಾರ್ಗದರ್ಶಕ ಗಿರೀಶ್ ದೇವಾಡಿಗರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.
ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ. ಮೋಹನ್‌ದಾಸ್, ಚ್. ಮೋಹನ್‌ದಾಸ್, ಉಪಾಧ್ಯಕ್ಷ ಭಾಸ್ಕರ್ ರಾವ್, ಜತೆ ಕಾರ್ಯದರ್ಶಿ ಗಣೇಶ್ ಶೇರಿಗಾರ್, ಕೋಶಾಧಿಕಾರಿ ದಯಾನಂದ್ ದೇವಾಡಿಗ ಮತ್ತು ಸಂಘದ ವೈದ್ಯಕೀಯ ಘಟಕದ ಕಾರ್ಯಾಧ್ಯಕ್ಷ ಜನಾರ್ದನ ದೇವಾಡಿಗ,ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ಭಾರತಿ ನಿಟ್ಟೇಕರ್ ಉಪಸ್ಥಿತ
ರಿದ್ದರು. ಪ್ರಮಿಳಾ ವಿ. ಶೇರಿಗಾರ್ ಕಾರ್ಯ ಕ್ರಮ ನಿರೂಪಿಸಿದರು. ಪೂರ್ಣಿಮಾ ಡಿ. ದೇವಾಡಿಗ ವಂದಿಸಿದರು.