Advertisement

ಬಾಕಿ ಪಿಂಚಣಿ ಬಿಡುಗಡೆಗೆ ದೇವದಾಸಿಯರ ಒತ್ತಾಯ

06:07 PM Oct 22, 2021 | Team Udayavani |

ರಾಯಚೂರು: ದೇವದಾಸಿಯರಿಗೆ ಬಾಕಿ ಇರುವ ಆರು ತಿಂಗಳ ಪಿಂಚಣಿ ನೀಡಬೇಕು, ಮೂರು ವರ್ಷದಿಂದ ನನೆಗುದಿಗೆ ಬಿದ್ದ ಮನೆಗಳ ನಿರ್ಮಾಣ ತ್ವರಿತವಾಗಿ ಮುಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆಆಗ್ರಹಿಸಿ ರಾಜ್ಯ ದೇವದಾಸಿಯರ ವಿಮೋಚನಾ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ದೇವದಾಸಿಯರ ಮಕ್ಕಳ ಮದುವೆಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಎರಡು ವರ್ಷಗಳಿಂದ ಕೋವಿಡ್‌ ಹಿನ್ನೆಲೆಯಲ್ಲಿ ದೇವದಾಸಿಯರ ಜೀವನ ನಡೆಸಲು ಕಷ್ಟಕರವಾಗಿದೆ. ಪ್ರತಿ ತಿಂಗಳು ನೀಡುವ ಪಿಂಚಣಿ ಕೂಡ ವಿಳಂಬವಾಗುತ್ತಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುವವರಿಗೆಷ್ಟವಾಗುತ್ತಿದೆ. ಆರು ತಿಂಗಳಿಂದ ಬಾಕಿ ಇರುವ ಪೆನ್ಶನ್‌ ಕೂಡಲೇ ಬಿಡುಗಡೆ ಮಾಡಬೇಕು. ಅಲ್ಲದೇ, ಮೂರು ವರ್ಷಗಳಿಂದ ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗಿದ್ದು, ಕೂಡಲೇ ಮನೆಗಳ ನಿರ್ಮಾಣಕ್ಕೆ ಮುಂದಗಾಬೇಕು ಎಂದರು.

ಮುದಗಲ್‌ ಗ್ರಾಮದ 15 ಜನ ದೇವದಾಸಿಯರ ಪುನರ್ವಸತಿಗಾಗಿ ಭೂಮಿ ಮಂಜೂರು ಮಾಡಬೇಕು. ದೇವದಾಸಿ ಮಕ್ಕಳನ್ನು ಮದುವೆಯಾದವರಿಗೆ ಕೂಡಲೇ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಎಚ್.ಪದ್ಮಾ, ಜಿಲ್ಲಾ ಗೌರವಾಧ್ಯಕ್ಷ ಕೆ.ಜಿ. ವೀರೇಶ, ತಾಲೂಕು ಅಧ್ಯಕ್ಷ ಅಯ್ಯಮ್ಮ, ತಾಲೂಕ ಕಾರ್ಯದರ್ಶಿ ಜೆ.ತಾಯಮ್ಮ, ಡಿ.ಎಸ್‌. ಶರಣಬಸವ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next