ಒತ್ತಾಯಿಸಿ ದೇವದಾಸಿ ವಿಮೋಚನೆ ಸಂಘದ ತಾಲೂಕು ಪದಾ ಧಿಕಾರಿಗಳು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು. ದೇವದಾಸಿ ವಿಮೋಚನಾ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ಬಡ ಕುಟುಂಬದವರಿಗೆ ಮತ್ತು ದೇವದಾಸಿ ಮಹಿಳೆಯರಿಗೆ ತಲಾ 10 ಕೆಜಿ ಅಕ್ಕಿ ಮತ್ತು ಆರೋಗ್ಯದ ಉಚಿತ ತಪಾಸಣೆ ನಡೆಸಬೇಕು. ಕೋವಿಡ್-19 ಪರಿಸ್ಥಿತಿ ಎದುರಿಸಲಾಗದಷ್ಟು ಆರ್ಥಿಕ ಸಂಕಷ್ಟಕ್ಕೆ ದೇವದಾಸಿ ಕುಟುಂಬಗಳು ಸಿಲುಕಿವೆ.
Advertisement
ಲಾಕ್‌ಡೌನ್‌ನಿಂದ ಈವರೆಗೂ ಬಡ ಕುಟುಂಬಗಳು ಚೇತರಿಸಿಕೊಳ್ಳದಂತಾಗಿದೆ. ಈ ಹಿನ್ನೆಲೆಯಲ್ಲಿ ಶೋಷಿತ ದೇವದಾಸಿಯರಿಗೆ ಕನಿಷ್ಠ 6 ತಿಂಗಳು 7500 ರೂ. ಧನಸಹಾಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ನಂತರ ತಹಶೀಲ್ದಾರ್ ಆಶಪ್ಪ ಪೂಜಾರ್‌ಗೆ ಮನವಿ ಸಲ್ಲಿಸಲಾಯಿತು. ಸಂಘದ ಮುಖಂಡರಾದ ಹುಲಿಗೆಮ್ಮ, ಹನುಮಂತಪ್ಪ ರತ್ನಮ್ಮ, ಹನುಮಕ್ಕ, ಪುಷ್ಪಾ ಇದ್ದರು.