Advertisement

ಕಹಿ ನೆನಪುಗಳ ಆಸ್ಫೋಟ

08:35 AM Feb 12, 2018 | Team Udayavani |

ಹೊಸದಿಲ್ಲಿ: ಟ್ವಿಟರ್‌ನಲ್ಲಿ “ಮಿ ಟೂ ಮುಮೆಂಟ್‌’ ಎಂಬ ಹ್ಯಾಶ್‌ಟ್ಯಾಗ್‌ನಡಿ ವಿಶ್ವದ ನಾನಾ ದೇಶಗಳ ಮಹಿಳೆಯರು ಅನುಭವಿಸಿದ ಲೈಂಗಿಕ ಶೋಷಣೆಗಳನ್ನು ಮುಕ್ತವಾಗಿ ಹಂಚಿಕೊಂಡ ಬೆನ್ನಲ್ಲೇ ಇದೀಗ ಮುಸ್ಲಿಂ ಮಹಿಳೆಯರು ಧಾರ್ಮಿಕ ಕ್ಷೇತ್ರ ಅಥವಾ ಪ್ರಾರ್ಥನಾ ಸ್ಥಳಗಳಲ್ಲಿ ತಾವು ಅನುಭವಿಸಿದ ಶೋಷಣೆಗಳನ್ನು ಇದೀಗ, ಮೋಸ್ಕ್ ಮೀ ಟೂ ಎಂಬ ಹ್ಯಾಶ್‌ಟ್ಯಾಗ್‌ನಡಿ ಹಂಚಿಕೊಳ್ಳಲಾರಂಭಿಸಿದ್ದಾರೆ. 

Advertisement

ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಮೆಕ್ಕಾದಲ್ಲಿ ತಾವು ಅನುಭವಿಸಿದ್ದ ಲೈಂಗಿಕ ಹಿಂಸೆಗಳ ಬಗ್ಗೆ 2013ರಲ್ಲಿ ಮೊದಲಿಗೆ ಮಾತನಾಡಿದ್ದ ಪತ್ರಕರ್ತೆ, ಲೇಖಕಿ ಮೋನಾ ಎಲಾ ಥಾವಿ ಅವರೇ ಈ “ಮೋಸ್ಕ್ ಮೀ ಟೂ’ ರೂವಾರಿ. ಈ ಹ್ಯಾಶ್‌ಟ್ಯಾಗ್‌ ಹುಟ್ಟುಹಾಕುವ ಮೂಲಕ, ಇದೀಗ ಅವರು, ಇಸ್ಲಾಂ ಮೂಲಭೂತವಾದದ ಭೀತಿಯಿಂದಲೋ ಇಸ್ಲಾಂ ಧರ್ಮದ ಘನತೆ ಕಾಪಾಡುವ ಅನಿವಾರ್ಯತೆಯಲ್ಲಿಯೋ ತಮ್ಮ ಹೃದಯಾಂತರಾಳದಲ್ಲಿ ಹುದುಗಿಹೋಗಿರುವ ದುಃಸ್ವಪ್ನಗಳನ್ನು ಹಂಚಿಕೊಳ್ಳಲು ಮುಸ್ಲಿಂ ಮಹಿಳೆಯರಿಗೊಂದು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಅವರ ಈ ವೇದಿಕೆಯಲ್ಲಿ ಅಸಂಖ್ಯ ಮಹಿಳೆಯರು ಕಳೆದ ನಾಲ್ಕೈದು ದಿನಗಳಿಂದ ತಮ್ಮ ನೋವು ಹಂಚಿಕೊಳ್ಳಲಾರಂ ಭಿಸಿದ್ದಾರೆ. 

ಒಬ್ಟಾಕೆ, ದಿಲ್ಲಿಯ ಮಸೀದಿಯಲ್ಲಿ ಒಬ್ಟಾತ ತನ್ನ ಎದೆ ಭಾಗವನ್ನು ಮುಟ್ಟಿದ್ದನ್ನು ಹೇಳಿಕೊಂಡಿದ್ದರೆ, ಮತ್ತೂಬ್ಟಾಕೆ ಬೇರೊಂದು ಸ್ಥಳದಲ್ಲಿ ತನ್ನ°ನ್ನು ಬರಸೆಳೆದಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಮಸೀದಿಯೊಂದರಲ್ಲಿ ಪ್ರಾರ್ಥನೆಗೆ ತೆರಳುತ್ತಿದ್ದ ತನ್ನನ್ನು ಕೆಲ ಗಂಡಸರು ಲೈಂಗಿಕ ಹಿಂಸೆ ನೀಡಲಾರಂಭಿಸಿದ್ದರಿಂದ ತಾನು ಪ್ರಾರ್ಥನೆಗೆ ಹೋಗುವುದನ್ನೇ ಬಿಟ್ಟೆ ಎಂದು ಮತ್ತೂಬ್ಬ ಮಹಿಳೆ ಹೇಳಿಕೊಂಡಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next