Advertisement
ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ನಾಗೇಶ್ ಎಂ. ಅಂಚನ್ ಅಧ್ಯಕ್ಷತೆಯಲ್ಲಿ ಜರ ಗಿ ದ ಗ್ರಾಮ ಸಭೆಗೆ ವಿವಿಧ ಇಲಾಖೆಗಳ ಸುಮಾರು 22 ಅಧಿಕಾರಿಗಳು ಹಾಜ ರಾ ಗಬೇಕಿತ್ತು. ಆದರೆ ಕೇವಲ 6 ಇಲಾಖೆಯ ಅಧಿಕಾರಿಗಳು ಮಾತ್ರ ಹಾಜರಾಗಿದ್ದರಿಂದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಬರೆಯುವಂತೆ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ತಿಳಿಸಿದರು.
ಕೆಮ್ರಾಲ್ ಪೇಟೆಯ ರಿಕ್ಷಾ ಪಾರ್ಕ್ ಸಮೀ ಪ ಚರಂಡಿ ಹಾಗೂ ಮೋರಿ ಬ್ಲಾಕ್ ಆಗಿ ಕೆಸರು ನೀರು, ಪ್ಲಾಸ್ಟಿಕ್ ತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿದ್ದು, ಎರಡು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೊಸಕಾಡು ರಸ್ತೆ ಹಾಗೂ ಕೆಮ್ರಾಲ್ ಚರ್ಚ್ ಶಾಲೆಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅದನ್ನು ದುರಸ್ತಿ ಮಾಡಬೇಕು ಎಂದು ರಾಬರ್ಟ್ ಡಿ’ ಸೋಜಾ ಆಗ್ರಹಿಸಿದರು. ಪಕ್ಷಿಕೆರೆ ಪೇಟೆಯ ಖಾಸಗಿ ಜಾಗದಲ್ಲಿ ಚರಂಡಿ ಬ್ಲಾಕ್ ಮಾಡಿರುವ ಬಗ್ಗೆ ನೋಟಿಸ್ ನೀಡಲಾಗಿದೆ ಎಂದು ಪಿಡಿಒ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯೆ ಕಸ್ತೂರಿ ಪಂಜ, ತತ್‌ಕ್ಷಣ ಮೋರಿಯನ್ನು ದುರಸ್ತಿ ಮಾಡಿಸಬೇಕು. ರಸ್ತೆ ದುರಸ್ತಿಗಾಗಿ ತನ್ನ ಅನುದಾನದಲ್ಲಿ 1 ಲ. ರೂ. ನೀಡಲಾಗುವುದು ಎಂದು ಭರವಸೆ ನೀಡಿದರು.
Related Articles
ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಖಾಯಂ ವೈದ್ಯರು ರಜೆಯಲ್ಲಿ ರುವುದರಿಂದ ಕಟೀಲು ಕೇಂದ್ರದ ವೈದ್ಯರು ವಾರದಲ್ಲಿ ಮೂರು ದಿನ ಬರುತ್ತಿ ದ್ದಾರೆ. ಈ ಸಮಸ್ಯೆಯನ್ನು ಕೂಡಲೇ ಸರಿ ಪಡಿಸಬೇಕು ಎಂದು ಗ್ರಾಮಸ್ಥ ಹರೀಶ್ ಆಗ್ರಹಿಸಿದಾಗ, ಬೇರೆ ವೈದ್ಯರನ್ನು ನೇಮಕ ಮಾಡುವಂತೆ ಜಿ.ಪಂ.ಗೆ ಮನವಿ ಮಾಡಲಾಗುವುದು ಎಂದು ಅಧ್ಯಕ್ಷ ನಾಗೇಶ್ ಅಂಚನ್ ತಿಳಿಸಿದರು.
Advertisement
ಕೋರªಬ್ಬು ದೈವಸ್ಥಾನ ಬಳಿಯಲ್ಲಿ ಕಾಂಕ್ರೀಟ್ ರಸ್ತೆ ಅಂಚಿಗೆ ಸರಿಯಾಗಿ ಮಣ್ಣು ತುಂಬಿಸದೆ ಸಮಸ್ಯೆಯಾಗಿದೆ ಎಂದು ದಯಾನಂದ ದೂರಿದರು.
ಕೆಮ್ರಾಲ್ ಅಂಗನವಾಡಿ ಕೇಂದ್ರ ಸಮಾ ಜ ಕಂಟ ಕರ ಅಡ್ಡೆಯಾಗಿದೆ ಎಂಬ ದೂರು ಕೇಳಿ ಬಂತು.ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಟಿ. ಜಯಚಂದ್ರಯ್ಯ ನೋಡಲ್ ಅಧಿಕಾರಿಯಾಗಿದ್ದರು. ತಾ.ಪಂ. ಸದಸ್ಯರಾದ ವಜ್ರಾಕ್ಷಿ ಶೆಟ್ಟಿ , ಶುಭಲತಾ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಸಮಾಜ ಕಲ್ಯಾಣ ಇಲಾಖೆಯ ಅಶ್ವಿನಿ, ಮೆಸ್ಕಾಂ ಇಲಾಖೆಯ ಶ್ರೀನಿವಾಸ ಮೂರ್ತಿ, ದಾಮೋದರ್, ಕಂದಾಯ ಇಲಾಖೆ ಸಂತೋಷ್, ಪಂಚಾಯತ್ ರಾಜ್ಯ ಇಲಾಖೆಯ ಹರೀಶ್‌ರಾಜ್, ಆರೋಗ್ಯ ಇಲಾಖೆಯ ಚಂದ್ರ ಪ್ರಭಾ ಸಹಿತ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಪಿಡಿಒ ರಮೇಶ್ ರಾಥೋಡ್ ವಂದಿಸಿದರು.
ಭಟ್ರಕೋಡಿ ರಸ್ತೆಯಲ್ಲಿ ನೀರು
ಭಟ್ರಕೋಡಿ ನಡುಗೋಡು ಸಂಪರ್ಕ ರಸ್ತೆಯಲ್ಲಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗದಂತೆ ಖಾಸಗಿಯವರು ತಡೆಯೊಡ್ಡಿದ್ದಾರೆ. ರಸ್ತೆಯಲ್ಲಿ ದೊಡ್ಡ ಹೊಂಡಗಳು ಎದ್ದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಐದು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಪಂಚಾಯತ್ ಯಾಕೆ ಮೌನ ವಹಿಸುತ್ತಿದೆ ಎಂದು ನಿತಿನ್ ವಾಸ್ ಪ್ರಶ್ನಿಸಿದಾಗ, ಈ ಬಗ್ಗೆ ವಾರ್ಡ್ ಸದಸ್ಯರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕಾಗಿದೆ ಎಂದು ಕಸ್ತೂರಿ ಪಂಜ ತಿಳಿಸಿದರು.