Advertisement

ಚೀನ ವಸ್ತುಗಳ ರದ್ದತಿಗೆ ಪತ್ರ ಬರೆಯಲು ನಿರ್ಣಯ

06:30 AM Aug 22, 2017 | Team Udayavani |

ಕುಂಬ್ರ : ಚೀನಿ ವಸ್ತುಗಳ ಆಮದು ರದ್ದುಗೊಳಿಸುವಂತೆ ಸರಕಾರಕ್ಕೆ ಬರೆಯಲು ಒಳಮೊಗ್ರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ.

Advertisement

ಚೀನದಲ್ಲಿ ಉತ್ಪಾದಿಸಿದ ವಸ್ತುಗಳ ಮಾರಾಟದ ಶೇ. 7 ರೂಪಾಯಿಯಷ್ಟು  ದೇಶದ  ರಕ್ಷಣೆಗೋಸ್ಕರ ಹೋಗುತ್ತದೆ. ಇದರಿಂದ ಅಲ್ಲಿನ ರಕ್ಷಣೆ ಬಲಿಷ್ಠವಾಗಿದೆ. ಆದ್ದರಿಂದ ನಮ್ಮ ದೇಶ, ರಾಜ್ಯ, ಜಿಲ್ಲೆಗಳಲ್ಲಿ ಚೀನಿ ವಸ್ತುಗಳನ್ನು ಬಳಸದಂತೆ, ಖರೀದಿಸದಂತೆ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯ ಮಹೇಶ್‌ ರೈ ತಿಳಿಸಿದರು. 

ಈ ಬಗ್ಗೆ ಧ್ವನಿಗೂಡಿಸಿದ ಪಿ.ಎಂ.ಅಬ್ದುಲ್‌ ರಹಿಮಾನ್‌, ಸರಕಾರವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ನಾವು ಜನರಲ್ಲಿ ತೆಗೆದುಕೊಳ್ಳಬೇಡಿ ಎಂದರೆ ಯಾರೂ ಮಾತು ಕೇಳುವುದಿಲ್ಲ. ಚೀನ ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕಷ್ಟೆ ಎಂದರು. 

ಈ ಬಗ್ಗೆ ಅಧ್ಯಕ್ಷ ಯತಿರಾಜ್‌ ರೈ ಮಾತನಾಡಿ, ಸರಕಾರವೇ ಚೀನಿ ವಸ್ತುಗಳ ಆಮದು ಮಾಡಿಕೊಳ್ಳುವುದನ್ನು ರದ್ದು ಪಡಿಸುವಂತೆ ಸರಕಾರಕ್ಕೆ ಬರೆಯೋಣ ಎಂದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು. 

ಪರ್ಪುಂಜದಿಂದ ಕುಂಬ್ರದ ವರೆಗಿನ ಫ್ಲೆಕ್ಸ್‌ ಬ್ಯಾನರ್‌ ಕಂಬಗಳನ್ನು ತೆರವು ಗೊಳಿಸುವಂತೆ ಸದಸ್ಯ ಮಹೇಶ್‌ ರೈ ಅಗ್ರಹಿಸಿದರು.

Advertisement

ಕಾರ್ಯಕ್ರಮ ಮುಗಿದ ಮರುದಿನವೇ  ಡೆಪೊಸಿಟ್‌ ನೀಡಿದ ಹಣವನ್ನು ತಗೆದುಕೊಂಡು ಹೋಗಲು ಬರುತ್ತಾರೆ. ಫ್ಲೆಕ್ಸ್‌ ತೆಗೆಯುತ್ತಾರೆ. ಕಂಬವನ್ನು ಹಾಗೇ ಉಳಿಸುತ್ತಾರೆ. ಇದರಿಂದ ವಾಹನ ಸಂಚಾರಕ್ಕೆ ಅಪಾಯ ಉಂಟಾಗುತ್ತದೆ ಎಂದರು. ಈ ಬಗ್ಗೆ ಚರ್ಚಿಸಿ ತೆರವುಗೊಳಿಸುಲು ನಿರ್ಣಯ ಮಾಡಲಾಯಿತು. ಫ್ಲೆಕ್ಸ್‌ ಬ್ಯಾನರಿಗೆ ಚ.ಮೀ.ಗೆ  3ರೂ. ಹಾಗೂ ಡೆಪೊಸಿಟ್‌ 500ರೂಪಾಯಿ  ದರ ಪರಿಷ್ಕರಣೆ ಮಾಡಿ ನಿಗದಿ ಮಾಡಲಾಯಿತು. ದೇವಾಲಯ, ಮಸೀದಿ ಹಾಗೂ ಸಂಘಸಂಸ್ಥೆಗಳು ಕಾರ್ಯಕ್ರಮದ ಬಗ್ಗೆ ಲಿಖೀತ ಬರವಣಿಗೆ ಮೂಲಕ ಪತ್ರ ನೀಡಬೇಕು. ಈ ಬಗ್ಗೆ ನಿರ್ಣಯ ಮಾಡಲಾಯಿತು.

ಮಹಿಳಾ ಗ್ರಾಮ ಸಭೆ 
ಆ. 29ರಂದು ಮಹಿಳಾ ಗ್ರಾಮ ಸಭೆ ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಸಭೆಯು ಗ್ರಾಮ ಪಂಚಾಯತ್‌ಅಧ್ಯಕ್ಯ ಯತಿರಾಜ್‌ ರೈ ನಿಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ  ಆ. 19ರಂದು ಪಂಚಾಯತ್‌  ಸಭಾಂಗಣದಲ್ಲಿ ನಡೆಯಿತು. ಉಪಾಧ್ಯಕ್ಷೆ ಸುನಂದಾ ಉಪಸ್ಥಿತರಿದ್ದರು

ಗ್ರಾ.ಪಂ. ಸದಸ್ಯರಾದ, ವಿಶ್ವನಾಥ ಪಿ, ಶೀವಪ್ಪ ನಾಯ್ಕ,  ಸುಂದರಿ, ಪಿ.ಎಂ.ಅಬ್ದುಲ್‌ ರಹಿಮಾನ್‌, ವಸಂತಿ ಡಿ.,  ತ್ರಿವೇಣಿ ಕೆ., ಭಾಗೀರಥಿ ಬಿ., ಮಹೇಶ್‌ ರೈ, ವಸಂತಿ ಆರ್‌. ಶೆಟ್ಟಿ, ಶಶಿಕಿರಣ್‌ ರೈ ಎನ್‌. ಉಪಸ್ಥಿತರಿದ್ದರು.

ಪಂಚಾಯತ್‌ ಕಾರ್ಯದರ್ಶಿ, ದಾಮೋದರ ಸ್ವಾಗತಿಸಿ, ವಂದಿಸಿದರು. ಪಿಡಿಒ ಗೀತಾ ಬಿ.ಎಸ್‌. ವರದಿ ಮಂಡಿಸಿದರು. ಗುಮಾಸ್ತ ಜಯಶೀಲಾ ರೈ, ನೀರು ನಿರ್ವಾಹಕ ಕೇಶವ ಕೆ., ಬಿಲ್‌ ಕಲೆಕ್ಟರ್‌ ಗುಲಾಬಿ ಸಹಕಾರಿಸಿದರು.

ದಾರಿ ದೀಪ ವ್ಯವಸ್ಥೆಯಾಗಲಿ
ಪ್ರತಿ ವಾರ್ಡ್‌ ನಲ್ಲಿಯೂ ದಾರಿ ದೀಪ ವ್ಯವಸ್ಥೆ ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗಬೇಕು ಎಂದು ಸದಸ್ಯ ಪಿ.ಎಂ. ಅಬ್ದುಲ್‌ ರಹಿಮಾನ್‌ ತಿಳಿಸಿದರು. ಈ ಬಗ್ಗೆ ಅಧ್ಯಕ್ಷ ಯತಿರಾಜ್‌ ರೈ ಮಾತನಾಡಿ,  ಪಂಚಾಯತ್‌ ಮಟ್ಟದಲ್ಲಿ ದಾರಿ ದೀಪ ವ್ಯವಸ್ಥೆ ನಿರ್ವಹಣೆಗೆ ಒಬ್ಬರಿಗೆ  ಜವಾಬ್ದಾರಿ ನೀಡುವುದು ಆತ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಇಲ್ಲಿ ಅಪಾಯ ಇದೆ. ಲೈನ್‌  ಕಡಿತಗೊಳಿಸಿ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next