Advertisement

ಡ್ರಗ್ಸ್‌ ಮುಕ್ತ ಕರ್ನಾಟಕಕ್ಕೆ ಸಂಕಲ್ಪ

05:58 PM Sep 19, 2020 | Suhan S |

ಚಿಕ್ಕಬಳ್ಳಾಪುರ: ಕರ್ನಾಟಕವನ್ನು ಡ್ರಗ್ಸ್‌ ಮುಕ್ತ ಮಾಡಲು ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ದೃಢಸಂಕಲ್ಪ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಹೇಳಿದರು.

Advertisement

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸಾದಲಿ ಶಕ್ತಿ ಕೇಂದ್ರದಲ್ಲಿ ಶಿಡ್ಲಘಟ್ಟ ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಮಂಡಲ ವತಿಯಿಂದ ಪ್ರಧಾನಮಂತ್ರಿ ಹುಟ್ಟು ಹಬ್ಬದ ಅಂಗವಾಗಿ ಹಿರಿಯರು ಮತ್ತು ಅಂಗವಿಕಲರಿಗೆ ಹಣ್ಣುಹಂಪಲು ಮತ್ತು ಸಿಹಿ ಹಂಚಿಕೆ ಮಾಡಿ ಮಾತನಾಡಿದ ಅವರು, ಯುವಕರನ್ನು ಮಾದಕ ವಸ್ತುಗಳಿಂದ ದೂರ ಇಡಲು ಮತ್ತು ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಎಲ್ಲರು ಸಹಕರಿಸಬೇಕೆಂದು ಮನವಿ ಮಾಡಿದರು. ಗ್ರಾಮಾಂತರ ಮಂಡಲ ವತಿಯಿಂದ ಸಾದಲಿ, ಬಶೆಟ್ಟಹಳ್ಳಿ ಸೇರಿದಂತೆ 6 ಹೋಬಳಿಯಲ್ಲಿ ಅಂಗವಿಕಲರಿಗೆ ಮತ್ತು ಹಿರಿಯರನ್ನು ಗುರುತಿಸಿ 70 ಜನಕ್ಕೆ ಹಣ್ಣು, ಸಿಹಿ ಹಂಚಿಕೆ ಮಾಡುವ ಮೂಲಕ ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬ ಆಚರಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಸುಜಾತಮ್ಮ, ಹಿರಿಯ ಮುಖಂಡರು ಚಿಕ್ಕದಾಸರಹಳ್ಳಿ ದಾಮೋಧರ್‌, ಮಂಡಲ ಉಪಾಧ್ಯಕ್ಷ ಅರಿಕೆರೆ ಮುನಿರಾಜು, ಸೀತಬೈರಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಸದ್ದಹಳ್ಳಿ ರಜನಿಕಾಂತ್‌ ಬಾಬು, ನಟರಾಜ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ಸದ್ದಹಳ್ಳಿ ಕಮಲಾ, ಪ್ರಧಾನ ಕಾರ್ಯದರ್ಶಿ ಕವಿತಾ, ಯುವ ಮೋರ್ಚಾ ಅಧ್ಯಕ್ಷ ಅಂಬರೀಶ್‌, ರೈತ ಮೋರ್ಚಾ ಅಧ್ಯಕ್ಷ ಬೈರಾರೆಡ್ಡಿ, ಪ್ರಧಾನ ಕಾರ್ಯದರ್ಶಿ ನರೇಂದ್ರ, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾದಲಿ ನವೀನ್‌, ಅಬ್ಲೂಡು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಗುಡಿಹಳ್ಳಿ ಮಂಜುನಾಥ್‌, ಚೀಮಂಗಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಗೊರಮಡುಗು ಡಿಶ್‌ ಮಂಜುನಾಥ್‌, ಮರಿಹಳ್ಳಿ ರಾಜು, ಸಾದಲಿ ತಿಪ್ಪಣ್ಣ, ಜಗದೀಶ್‌ಬಾಬು, ಸೊಣಗಾನಹಳ್ಳಿ ಮಂಜುನಾಥ, ನಾಗೇಂದ್ರ ಹಾಗೂ ಸಾದಲಿ ವ್ಯಾಪ್ತಿಯ ನಾಯಕರು, ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next