ಯಾದಗಿರಿ: ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಸಂಕಲ್ಪ ಮಾಡಿದ್ದೇನೆ. ವಕೀಲರ ಯಾವುದೇ ಸಮಸ್ಯೆಗಳಿಗೆ ನಾನು ತಕ್ಷಣವೇ ಸ್ಪಂದಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು. ನಗರದ ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ನೀಡಿ, ವಕೀಲರ ಸಂಘದ ಸದಸ್ಯರಿಗೆ ಮತಯಾಚಿಸಿ ಅವರು ಮಾತನಾಡಿದರು.
ವಕೀಲರ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕಾಗಿ ಅತೀ ಹೆಚ್ಚು ಅನುದಾನ ನೀಡುವ ಮೂಲಕ ತಕ್ಷಣವೇ ಭವನ ನಿರ್ಮಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರ್ಕಾರದ ಯಾವುದೇ ಯೋಜನೆಗಳು ವಕೀಲರಿಗೆ ಸಂಬಂಧಿಸಿದಂತೆ ಅನುಕೂಲ ಮಾಡಿಕೊಡುತ್ತೇನೆ. ತಾವು ನನ್ನ ಗೆಲುವಿಗೆ ಮತ ನೀಡುವ ಮುಖಾಂತರ ಸಹಕರಿಸಬೇಕೆಂದು ಮನವಿ ಮಾಡಿದರು.
ವಕೀಲರ ಸಂಘದ ಹಿರಿಯ ಸದಸ್ಯ ಬಸವರಾಜ ಪಾಟೀಲ ಕ್ಯಾತನಾಳ ಮಾತನಾಡಿ, ನೇರ ನಡೆ ನುಡಿಗೆ ಹೆಸರುವಾಸಿ ಆಗಿರುವ ವೆಂಕಟರೆಡ್ಡಿಗೌಡರಿಗೆ ಮತ ನೀಡಬೇಕೆಂದು ಕೇಳಿಕೊಂಡರು.
ನಂತರ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ ಎಸ್.ಪಿ. ನಾಡೇಕರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಬಿ. ಕಿಲ್ಲನಕೇರಾ ಮಾತನಾಡಿದರು. ವೇದಿಕೆಯಲ್ಲಿ ಇನ್ನೊಬ್ಬ ಹಿರಿಯ ವಕೀಲ ಪಿ.ಸಿ. ದೇಶಮುಖ ಅವರು ಮತ ನೀಡುವಂತೆ ಮನವಿ ಮಾಡಿಕೊಂಡರು. ಸಂಘದ ಉಪಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವಕೀಲರಾದ ಎಮ್.ವಿ. ಕರೀಗೌಡ, ಅಮೀನರೆಡ್ಡಿ ಪಾಟೀಲ್, ಪಿ. ಶಿವರಾಜ, ಶರಣಗೌಡ ಅಲ್ಲಿಪುರ, ಮಾರುತಿ ಈಟೆ, ಮಹೇಶ ಕುರಕುಂಬಳ, ಶಿವಶರಣಪ್ಪ ದೊಡ್ಡಮನಿ, ಹಣಮಂತ ಇಟಗಿ, ಪ್ರಹ್ಲಾದ ಕುಲ್ಕರ್ಣಿ, ಶಿವಲಿಂಗಪ್ಪ ಗುರಶಿಣಗಿ, ಪುಷ್ಪಲತಾ ಪಾಟೀಲ, ಸಾವಿತ್ರಿ ಪಾಟೀಲ, ಸುಷ್ಮಾ ಜಾಧವ ಹಾಗೂ ಅನೇಕ ವಕೀಲರು ಹಾಜರಿದ್ದರು. ಜಿಲ್ಲಾ ವಕೀಲರ ಪ್ರಧಾನ ಕಾರ್ಯದರ್ಶಿ ನಿರಂಜನ ಯರಗೋಳ ಸ್ವಾಗತಿಸಿ, ನಿರೂಪಿಸಿದರು. ದೇವಿಂದ್ರ ಯರಗೋಳ ವಂದಿಸಿದರು.