Advertisement

ಹಳೇಸೊರಬದಲ್ಲಿ ಜೀವ ವೈವಿಧ್ಯ ತಾಣ ನಿರ್ಮಾಣಕ್ಕೆ ನಿರ್ಣಯ

11:45 AM Jul 27, 2020 | mahesh |

ಸೊರಬ: ತಾಲೂಕಿನ ಹಳೇಸೊರಬ ಗ್ರಾಮದಲ್ಲಿರುವ 600 ಎಕರೆ ದೇವರ ಕಾಡನ್ನು ರಾಜ್ಯದಲ್ಲಿ ಪಾರಂಪರಿಕ ಜೀವವೈವಿಧ್ಯ ತಾಣ ವನ್ನಾಗಿ ನಿರ್ಮಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಜೀವವೈವಿಧ್ಯ ಮಂಡಳಿ ರಾಜ್ಯಾಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

Advertisement

ತಾಲೂಕಿನ ಹಳೇಸೊರಬ ಗ್ರಾಪನಲ್ಲಿ ಜೀವ ವೈವಿಧ್ಯ ಸಮಿತಿ ಸಭೆ ನಡೆಸಿ, ನಂತರ ಹಳೇಸೊರಬ ದೇವರ ಕಾಡು ಹಾಗೂ ಬರಗಿ ಗ್ರಾಮದಲ್ಲಿ ಜೇಡು ಕಾಡುಗಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬ್ರಿಟಿಷರ ಕಾಲದಿಂದಲೂ ಹಳೇಸೊರಬ ಗ್ರಾಮದಲ್ಲಿ ದೇವರ ಕಾಡು ಮೀಸಲಾಗಿದ್ದು, ಈ ಬಗ್ಗೆ ಜೀವ ವೈವಿಧ್ಯ ಮಂಡಳಿಯು ಕಳೆದ 10 ವರ್ಷಗಳಿಂದಲೂ ಅಧ್ಯಯನ, ಸಮೀಕ್ಷೆ ನಡೆಸಿ ಕಾಡಿನ ಸಂರಕ್ಷಣೆ, ಗಡಿ ಗುರುತು ಮಾಡಿ ಯಾವುದೇ ರೀತಿಯಲ್ಲಿ ಅರಣ್ಯ ಪ್ರದೇಶದಲ್ಲಿ ಭೂಮಿ ಹಾಗೂ ಜೀವ ಸಂಕುಲಗಳಿಗೆ ನಷ್ಟವಾಗದಂತೆ ಭದ್ರತೆ ಮಾಡಿರುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಪ್ರಾಣಿ-ಪಕ್ಷಿಗಳ ಸಂಕುಲಕ್ಕೆ ಪೂರಕವಾಗಿರುವ ದೇವರ ಕಾಡನ್ನು ರಾಜ್ಯದಲ್ಲಿ ಪ್ರಸಿದ್ಧವಾದ ಪಾರಂಪರಿಕ ಜೀವವೈವಿಧ್ಯ ತಾಣವಾಗಿ ನಿರ್ಮಿಸಲು ಹಾಗೂ ದೇವರ ಕಾಡನ್ನು ಪರಿಸರ ಪ್ರವಾಸೋದ್ಯಮಕ್ಕೆ ಸೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದರು.

ತಾಲೂಕಿನ ಬರಗಿ ಗ್ರಾಮದಲ್ಲಿ ಸುಮಾರು 25 ಎಕರೆ ಪ್ರದೇಶದಲ್ಲಿರುವ ಜೇನು ಕಾಡು ಅಭಿವೃದ್ಧಿಗಾಗಿ ಸಂಶೋಧನೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಸರ್ಕಾರದಿಂದ ಪ್ರದೇಶದಲ್ಲಿ ಅಭಿವೃದ್ಧಿ ಕೈಗೊಳ್ಳುವ ಬಗ್ಗೆ ವರದಿ ನೀಡಿ ಅಭಿವೃದ್ಧಿ  ಪಡಿಸಲಾಗುವುದು ಎಂದರು. ಜೀವವೈವಿಧ್ಯ ಸಮಿತಿ ಆಡಳಿತಾ ಧಿಕಾರಿ ಕೆ. ಕುಮಾರ್‌, ವಲಯ ಸಂರಕ್ಷಣಾಧಿ ಕಾರಿ ಮಂಜುನಾಥ್‌, ವಲಯ ಅರಣ್ಯಾ ಧಿಕಾರಿ ಗಣೇಶ್‌, ಶ್ರೀಪಾದ ಬಿಚ್ಚುಗತ್ತಿ, ಈರೇಶಗೌಡ, ಮೋಹನ್‌ ಸುರಭಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next