Advertisement
ಪಟ್ಟಣದ ಮೂಲಕ ಶ್ರೀರಂಗಪಟ್ಟಣ, ಅರಸೀಕೆರೆ ರಾಜ್ಯ ಹೆದ್ದಾರಿ(ಎನ್‌ಎಚ್ 7) ಹಾದು ಹೋಗಿದ್ದುಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರ ಎನ್ನುವುದಷ್ಟೇ ಭಾಗ್ಯವಾದಂತಿದೆ. ಮಳೆ ಇರಲಿ, ಬೇಸಿಗೆ ಇರಲಿಇಲ್ಲಿಗೆ ಗುಂಡಿಗೆ ಬರವಿಲ್ಲ. ಮೈಸೂರಿಗೆ ಮುಂಬೈಹತ್ತಿರದ ಹೆದ್ದಾರಿಯಾಗಿರುವುದರಿಂದ ನಿತ್ಯವೂ ಸಾವಿ ರಾರು ಸರ್ಕಾರಿ, ಖಾಸಗಿ ವಾಹನ ಸಂಚರಿಸುತ್ತವೆ. ಕೆ.ಆರ್.ಪೇಟೆಯಿಂದ ಚನ್ನರಾಯಪಟ್ಟಣದವರೆಗೆ ಲೆಕ್ಕವಿಲ್ಲದಷ್ಟು ಗುಂಡಿ, ಮೈಲಿ ಉದ್ದಕ್ಕೆ ರಸ್ತೆ ಹಂಪ್ ಗಳಿವೆ. ಬೇಸಿಗೆಯಲ್ಲಿ ದೂಳು, ಮಳೆಗಾಲದಲ್ಲಿ ಕೆಸರ ಮಜ್ಜನ, ಅಧಿಕ ತೂಕ ಹೊತ್ತು ಸಾಗುವ ಜಲ್ಲಿ ಕಲ್ಲು, ಕಬ್ಬಿಣದ ಲಾರಿ, ಟ್ರ್ಯಾಕ್ಟರ್ ಭಾರ ತಾಳಲಾರದೆ ರಸ್ತೆ ಗುಂಡಿ ಬಿದ್ದು ಹಾಳಾಗಿದೆ. ಪರಿಣಾಮ ವಾಹನಸವಾರರು ಗುಂಡಿ ತಪ್ಪಿಸಲು ರಸ್ತೆ ಮಗ್ಗಲಿಗೆ ಬರುವುದ ರಿಂದ ಅಪಘಾತಗಳಿಗೆ ಕೊರತೆ ಇಲ್ಲದಂತಿದೆ.
Related Articles
Advertisement
ಶ್ರೀರಂಗಪಟ್ಟಣದಿಂದ ಅರಸೀಕೆರೆಗೆ ಸಾಗುವ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ,ಅಗಲೀಕರಣ ಎಂದು ಸರ್ಕಾರಕ್ಕೆ ಮನವಿಮಾಡಿಕೊಂಡಿರುವ ಪತ್ರ ಎಲ್ಲೆಡೆ ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಬಿಟ್ಟರೆ ಅಧಿಕಾರಿಗಳು ಅಭಿವೃದ್ಧಿಗೆ ಮುಂದಾಗುತ್ತಿಲ್ಲ
ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಲು ರಸ್ತೆಗಳದ್ದೇ ಸಮಸ್ಯೆ :
ಹೊಯ್ಸಳರ ಕಾಲದ ಗೋವಿಂದನಹಳ್ಳಿಯ ಪಂಚಲಿಂಗೇಶ್ವರ, ತೆಂಗಿನಘಟ್ಟದ ಈಶ್ವರ, ಕಿಕ್ಕೇರಿ ಬ್ರಹ್ಮೇಶ್ವರ, ಯೋಗನರಸಿಂಹ ದೇಗುಲ, ಸಾಸಲುವಿನ ಸೋಮೇಶ್ವರ, ಶಂಭುಲಿಂಗೇಶ್ವರ, ಮಂದಗೆರೆ ಅಂಕನಾಥೇಶ್ವರ,ಮಾದಾಪುರದ ಪಶ್ಚಿಮವಾಹಿನಿ, ಗೋವಿನಕಲ್ಲು, ರಾಮೇಶ್ವರ ದೇಗುಲ, ಸೋಮವಾರಪೇಟೆ ಸಾಕಮ್ಮ ನಿರ್ಮಿಸಿರುವ ಚೌಡೇನಹಳ್ಳಿ ಅಣೆಗೆ ಸಾಗಲು ಡಾಂಬರು ರಸ್ತೆ ಇರಲಿ ಸಮರ್ಪಕವಾದ ಕಚ್ಚಾ ರಸ್ತೆಗಳೂ ಇಲ್ಲವಾಗಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಮುಖ ಮಾಡಬೇಕಿದೆ.
ಶಾಶ್ವತ ಕಾಮಗಾರಿ ನಡೆಸಿ :
ಜನಪ್ರತಿನಿಧಿಗಳು ನಿದ್ರೆಗೆ ಜಾರಿದರೆ, ಅಧಿಕಾರಿಗಳು ಜಾಣಕುರುಡರಾಗಿದ್ದಾರೆ.ಸರ್ಕಾರಕ್ಕೆ ಲಕ್ಷಾಂತರ ರೂ. ಈ ರಸ್ತೆಯಿಂದಲೇವರಮಾನವಿದೆ. ರಸ್ತೆಗೆ ತೇಪೆ ಹಾಕುವ ಬದಲುಶಾಶ್ವತ ಕಾಮಗಾರಿ ಮಾಡಬೇಕಿದೆ. ಜನ,ಜಾನುವಾರು, ರೈತರ ಸರಕು ಸಾಗಾಣಿಕೆಸಾಗಿಸಲು ತುರ್ತಾಗಿ ಅಧ್ವಾನವಾಗಿರುವರಸ್ತೆಗಳನ್ನು ದುರಸ್ತಿ ಮಾಡಿಸಲು ಜಿಲ್ಲಾಉಸ್ತುವಾರಿ ಸಚಿವರಾಗಿರುವ ನಮ್ಮ ಕ್ಷೇತ್ರದವರೇ ಆದ ಕೆ.ಸಿ. ನಾರಾಯಣಗೌಡರುಮುಂದಾಗಬೇಕು ಎಂದು ಆನೆಗೊಳದ ಸಾಮಾಜಿಕ ಸೇವಾಕರ್ತ ಪ್ರಸನ್ನ ತಿಳಿಸಿದರು.
ಹೆದ್ದಾರಿ ವಾರ್ಷಿಕ ನಿರ್ವಹಣೆಯಡಿಸಾಕಷ್ಟು ಗುಂಡಿಗಳನ್ನು ಮುಚ್ಚಲಾಗಿದೆ.ರಸ್ತೆ ಸಂಪೂರ್ಣ ರಿಪೇರಿಗೆ ಮೇಲಧಿಕಾರಿ,ಸರ್ಕಾರಕ್ಕೆ ಮನವಿ ಮಾಡಲಾಗಿದೆ. ತ್ವರಿತವಾಗಿಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು. –ರವಿಕುಮಾರ್, ಲೋಕೋಪಯೋಗಿ ಇಲಾಖೆ, ಅಭಿಯಂತರರು
– ತ್ರಿವೇಣಿ