Advertisement
ತಾಲೂಕಿನ ಮದ್ದೂರು ಮಾರ್ಗದಿಂದ ಬೆಸಗರ ಹಳ್ಳಿ, ಕೊಪ್ಪ, ಕೌಡ್ಲೆ, ನಾಗಮಂಗಲ ಗ್ರಾಮಗಳಿಗೆ ತೆರಳುವ ಪ್ರಮುಖ ರಸ್ತೆಯು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರೂ ಯಾವೊಬ್ಬಅಧಿಕಾರಿಯು ಇತ್ತ ತಲೆ ಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ.ನೂರಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಯು ಹಳ್ಳಕೊಳ್ಳ ಹಾಗೂ ಆಳೆತ್ತರದ ಗುಂಡಿಗಳಿಂದ ಆವೃತವಾಗಿದ್ದು, ಮಳೆ ಬಂದರೆ, ಕೆಸರು ಗದ್ದೆಯಾಗಿ ಮಾರ್ಪ ಡುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಸ್ಥಳೀ ಯ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಆದರೂ, ಜನಪ್ರತಿನಿಧಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
Related Articles
Advertisement
ಕೊಪ್ಪ ಮಾರ್ಗದುದ್ದಕ್ಕೂ ಕಿತ್ತು ನಿಂತಿರುವ ರಸ್ತೆಯಿಂದಾಗಿ ರಾತ್ರಿ ವೇಳೆ ಸಂಚರಿಸುವ ಪ್ರಯಾ ಣಿಕರು ಭಯದ ವಾತಾವರಣದಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಡಾಂಬರ್ ಕಾಣದ ರಸ್ತೆ, ಬೀದಿ ದೀಪದ ವ್ಯವಸ್ಥೆ ಹಾಗೂ ಒಣಗಿನಿಂತಿರುವಮರಗಳ ನಡುವೆಯೇ ಸಂಚರಿಸಬೇಕಾಗಿದೆ.
ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ: ಎರಡು ವರ್ಷಗಳ ಹಿಂದೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ರಸ್ತೆ ಕಾಮಗಾರಿಗೆ
ಚಾಲನೆ ನೀಡಿದ್ದರೂ ಕಾಮಗಾರಿ ಪೂರ್ಣಗೊಳ್ಳದೆ ಅಪೂರ್ಣಗೊಂಡಿದೆ. ಡಾಂಬರೀಕರಣ ಕಾಣದ ರಸ್ತೆಯಿಂದಾಗಿ ಸುತ್ತಮುತ್ತಲಿನ ಮನೆಗಳು ಧೂಳಿನಿಂದ ಆವರಿಸುವುದರಿಂದ ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ.
ನಾಗಮಂಗಲ ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ರಸ್ತೆಯಾಗಿರುವುದರಿಂದ ಚುನಾಯಿತಪ್ರತಿನಿಧಿಗಳು ದುರಸ್ತಿಗೊಳಿಸುವ ಗೋಜಿಗೆ ಹೋಗದೆಮೌನಕ್ಕೆ ಶರಣಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಾರ್ಗವಾಗಿ ಶಾಸಕರು ಸಂಚರಿಸುತ್ತಾರೆ. ಆದರೂ ಇದರ ಬಗ್ಗೆ ಗಮನಹರಿಸಿಲ್ಲದಿರುವುದು ಅವರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ತಟಸ್ಥ ನಿಲುವು: ತಾಲೂಕಿನ ಬೆಸಗರಹಳ್ಳಿ ಅಡ್ಡರಸ್ತೆ, ಚಾಮನಹಳ್ಳಿ, ನಿಲುವಾಗಿಲು ಗೇಟ್, ಬೆಳತೂರು, ಕೋಡಿಹಳ್ಳಿ, ಕುಂಟನಹಳ್ಳಿ, ಗೊಲ್ಲರದೊಡ್ಡಿ ಇನ್ನಿತರೆ ಗ್ರಾಮಗಳಲ್ಲಿ ರಸ್ತೆ ಮಧ್ಯದಲ್ಲಿ ಗುಂಡಿ ಬಿದ್ದು ಸಂಚಾರಕ್ಕೂ ಅಡಚಣೆ ಉಂಟಾಗಿದ್ದರೂ ಗುಂಡಿ ಮುಚ್ಚುವ ಕಾರ್ಯಕ್ಕೂ ಅಧಿಕಾರಿಗಳು ಮುಂದಾಗದೆ ತಟಸ್ಥ ನಿಲುವು ತಾಳಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಿ, ಮದ್ದೂರು ಮಾರ್ಗದಿಂದ ಕೊಪ್ಪ ಮಾರ್ಗಕ್ಕೆ ತೆರಳುವ ರಸ್ತೆಯನ್ನು ದುರಸ್ತಿಗೊಳಿಸಿ ಪ್ರಯಾಣಿಕರ ಹಾಗೂ ಸಾರ್ವಜನಿಕರ ಹಿತ ಕಾಯಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಅಪೂರ್ಣಗೊಂಡಿರುವ ಕೊಪ್ಪ ಮಾರ್ಗದ ರಸ್ತೆಯನ್ನು ದುರಸ್ತಿಗೊಳಿಸಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರನಿಗೆ ಸೂಚಿಸಿದ್ದು, ಶೀಘ್ರವೇ ರಸ್ತೆ ಕಾಮಗಾರಿ ಆರಂಭಿಸಿ ಸುಗಮ ಸಂಚಾರ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು. – ಕೆ.ಸುರೇಶ್‌ಗೌಡ, ಶಾಸಕ, ನಾಗಮಂಗಲ ವಿಧಾನಸಭಾ ಕ್ಷೇತ
ಕೊಪ್ಪ ಮಾರ್ಗದ ರಸ್ತೆಯನ್ನು ದುರಸ್ತಿಗೊಳಿಸದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಸಾರ್ವಜನಿಕರ ಹಿತ ಕಾಯಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ. – ಅಶೋಕ್, ರೈತಸಂಘದ ಮುಖಂಡ, ಗೊಲ್ಲರದೊಡ್ಡಿ, ಮದ್ದೂರು ತಾಲೂಕು
–ಎಸ್.ಪುಟ್ಟಸ್ವಾಮಿ