Advertisement

ಹದಗೆಟ್ಟ ಶುದ್ಧ ನೀರಿನ ಘಟಕಗಳು!

08:09 PM Nov 06, 2020 | Suhan S |

ಕೂಡ್ಲಿಗಿ: ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಲುವಾಗಿ ಪಟ್ಟಣದ ವಿವಿಧ ಭಾಗಗಳಲ್ಲಿ ನಿರ್ಮಿಸಿರುವ ಶುದ್ಧ ನೀರು ಘಟಕಗಳು ಕೆಟ್ಟು ನಿಂತಿವೆ. ಇದರಿಂದಾಗಿ ಸಾರ್ವಜನಿಕರಿಗೆ ಶುದ್ಧ ನೀರು ದೊರೆಯದಾಗಿದೆ.

Advertisement

ಪಪಂ ಅಡಿಯಲ್ಲಿ ರಾಜ್ಯ ಹಣಕಾಸು ಆಯೋಗ ಮತ್ತು 14ನೆ ಹಣಕಾಸು ನಿಧಿ ಯಿಂದ ಅನುದಾನ ಬಳಸಿಕೊಂಡು ಶುದ್ಧೀಕರಣ ಘಟಕ ನಿರ್ಮಿಸಿ ಕೆಲವು ಏಜೆನ್ಸಿಗಳಿಗೆ ಘಟಕಗಳ ನಿರ್ಮಾಣ ಮತ್ತು ಎರಡು ವರ್ಷಗಳನಿರ್ವಹಣೆ ಮಾಡಲು ಷರತ್ತು ಮಾಡಿಕೊಂಡಿದೆ. ಆದರೆ ನಿರ್ಮಿಸಿದ ಕೆಲವೇ ತಿಂಗಳಲ್ಲಿ ಶುದ್ಧಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಬಂದಿವೆ. ಅದನ್ನು ನಿರ್ವಹಿಸುವ ಹೊಣೆಗಾರಿಕೆಹೊತ್ತಿರುವ ಏಜೆನ್ಸಿಗಳು ಇತ್ತ ತಲೆ ಹಾಕದೆಕೈಚೆಲ್ಲಿವೆ. ಪಪಂನಿಂದ 2 ರೂ.ಗೆ 20 ಲೀ. ನೀರನ್ನು ಕುಡಿಯುತ್ತಿದ್ದೆವು. ಆದರೆ ಇತ್ತೀಚೆಗೆ 20 ಲೀ. 5 ರೂ. ಮಾಡಿ ನಮಗೆ ಹೊರೆ ಮಾಡಿದ್ದಾರೆ ಎಂದು ನಿವಾಸಿಗಳಾದ ಬಸವರಾಜ್‌ ಸ್ವಾಮಿ, ಮುತ್ತು, ಬ್ಯಾಳಿರಾಜು ಬ್ಯಾಳಿಶರಣಪ್ಪ, ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಪಪಂ ಅಡಿಯಲ್ಲಿ ಕಳೆದ ಐದು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಹ್ಮದ್‌ ಬಾದ್‌ ಸಿನರೇಜ್‌ ಸಲ್ಯೂಷನ್‌ ಪ್ರç.ಲಿಮಿಟೆಡ್‌ ಪಟ್ಟಣ ಪಂಚಾಯಿತಿಗೆ ಒಟ್ಟು 18 ಆರ್‌.ಓ ಪ್ಲಾಂಟ್‌ಗೆ ಭದ್ರತಾ ಠೇವಣಿ ಮೊತ್ತ-2,20,000 ರೂ. ಈಗಾಗಲೇ 11 ಆರ್‌.ಓ ಪ್ಲಾಂಟ್‌ ಏಜೆನ್ಸಿ ನಿರ್ವಹಿಸುತ್ತಿದೆ. ಬಾಕಿಯಿರುವ ಆರು ಕುಡಿಯುವ ನೀರಿನ ಘಟಕ ನೀಡಬೇಕಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.

ಪ್ರತಿನಿತ್ಯದ ಬಳಕೆಗೆ ಶುದ್ಧ ಕುಡಿಯುವ ನೀರಿನ್ನೇ ಜನತೆ ಆಶ್ರಯಿಸಿದ್ದು, ಕೊಳವೆಬಾವಿ ನೀರನ್ನು ಕುಡಿಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಲು ಚುನಾಯಿತ ಪ್ರತಿನಿ ಧಿಗಳು, ಸಂಬಂ ಧಿಸಿದ ಏಜೆನ್ಸಿಗಳು ಇತ್ತ ಗಮನ ಹರಿಸಬೇಕು ಎಂಬುದು ವಾರ್ಡ್‌ ನಿವಾಸಿಗಳ ಒತ್ತಾಯವಾಗಿದೆ. ಪಟ್ಟಣದಲ್ಲಿ 18 ಆರ್‌ಓ ಪ್ಲಾಂಟ್‌ಗಳಲ್ಲಿ ಈಗಾಗಲೇ ಅಂಜನೇಯ ದೇವಸ್ಥಾನ ಹತ್ತಿರ, ವೆಂಕಟೇಶ್ವರ ದೇವಸ್ಥಾನ ಬಳಿ, ಗೋವಿಂದಗಿರಿ, ಹಳೆ ಚೌಡಿಯ, ಅಂಬೇಡ್ಕರ್‌ ನಗರ ಬಳಿ ಬೋರ್‌ವೆಲ್‌ಗ‌ಳಲ್ಲಿ ನೀರು ಇಲ್ಲ ಆದರೂ ಪಟ್ಟಣ ಪಂಚಾಯಿತಿ ಅಧಿಕಾರಿ ಗಮನಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ

ಆರು ತಿಂಗಳಿನಿಂದ ಶುದ್ಧೀಕರಣ ಘಟಕ ನನೆಗುದಿಗೆ ಬಿದ್ದಿದೆ. ಜನರ ಸಣ್ಣ ಪುಟ್ಟ ಸಮಸ್ಯೆ ಅರಿತು ವಾರ್ಡ್‌ ಜನರಿಗೆ ನೀರು ಕೊಡುವ ವ್ಯವಸ್ಥೆ ಮಾಡಬೇಕು. ಆದರೆ ಇತ್ತ ಯಾವುದೇ ರೀತಿಯಲ್ಲಿ ಅಧಿಕಾರಿ ವರ್ಗ ಕುಡಿಯುವ ನೀರಿನ ಘಟಕ ಸರಿಪಡಿಸಲು ಪ್ರಯತ್ನಕ್ಕೆ ಕೈ ಹಾಕುತ್ತಿಲ್ಲ. -ಸಿರಬಿ ಮಂಜು, 10ನೇ ವಾರ್ಡ್‌ ಪಪಂ ಸದಸ್ಯರು

Advertisement

ಈಗಾಗಲೇ ಎಲ್ಲಿ ಶುದ್ಧೀಕರಣ ಬಳಿ ಬೋರ್‌ ವೆಲ್‌ನಿಂದ ನೀರು ಕಡಿಮೆ ಬರುತ್ತಿದೆ ಎಂದು ಗಮನಹರಿಸಿದ್ದೇವೆ. ಇಲಾಖೆ ಮೂಲಕ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದೇವೆ. ನಂತರ ಟೆಂಡರ್‌ಪ್ರಕ್ರಿಯೆ ಆದ ಮೇಲೆ ಅಂತಹ ಶು ದ್ಧೀಕರಣ ಘಟಕದ ಬಳಿ ಮತ್ತೂಂದು ಬೋರ್‌ವೆಲ್‌ ಕೊರೆಸಿ ಏಜೆನ್ಸಿಯವರಿಗೆ ನೀಡುತ್ತೇವೆ. ಅದಕ್ಕಾಗಿ ಪಟ್ಟಣದ ಜನತೆ ಎಲ್ಲಿ ನೀರು ಬರುತ್ತವೆಯೋ ಅಲ್ಲಿಗೆ ತೆರಳಿ ನೀರನ್ನು ಹಿಡಿದುಕೊಳ್ಳಬೇಕು. – ಫಕ್ರುದ್ದೀನ್‌, ಮುಖ್ಯಾಧಿಕಾರಿ, ಪಪಂ ಕೂಡ್ಲಿಗಿ

 

­ ಕೆ.ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next