Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಾರಿಗೆ ಇಲಾಖೆಯು ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ವ್ಯಾಪ್ತಿಗೆ 2018-19ನೇ ಆರ್ಥಿಕ ವರ್ಷಕ್ಕೆ ಒಟ್ಟು 140.21 ಕೋ.ರೂ. ರಾಜಸ್ವ ಸಂಗ್ರಹದ ಗುರಿ ನಿಗದಿಪಡಿಸಿತ್ತು. ಇದುವರೆಗೆ ಶೇ. 90ರಷ್ಟುಚxಸಾಧನೆಯಾಗಿದೆ. ಶೇ. 100ರಷ್ಟು ಸಾಧನೆಯಾಗಬೇಕಾದರೆ ಮಾರ್ಚ್ ಅಂತ್ಯಕ್ಕೆ ಇನ್ನೂ 19 ಕೋ.ರೂ. ರಾಜಸ್ವ ಸಂಗ್ರಹಿಸಬೇಕಾಗಿದೆ. 2017-18ನೇ ಆರ್ಥಿಕ ವರ್ಷದಲ್ಲಿ ಕಳೆದ ವರ್ಷ 136.5 ಕೋ.ರೂ. ರಾಜಸ್ವ ಸಂಗ್ರಹದ ಗುರಿ ನೀಡಲಾಗಿತ್ತು. ಶೇ. 100.1 ಸಾಧನೆ ಮಾಡಲಾಗಿತ್ತು’ ಎಂದು ತಿಳಿಸಿದರು.
ವಿರುದ್ಧ ಆರೋಪಪಟ್ಟಿ
ತೆರಿಗೆ ಪಾವತಿ ಬಾಕಿ ಇರುವ ಮಾಲಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. 900ರಷ್ಟು ವಾಹನಗಳ ಬಗ್ಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಪರವಾನಿಗೆ ನಿಬಂಧನೆ ಉಲ್ಲಂ ಸಿ ಸಂಚರಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ಮತ್ತು ತೆರಿಗೆ ವಸೂಲಿ ಮಾಡಲಾಗುವುದು. ಮೋಟಾರು ವಾಹನ ಕಾಯಿದೆ ಮತ್ತು ನಿಯಮಗಳ ಪ್ರಕಾರ ಇತರ ಕಠಿನ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. 250 ವಾಹನ ಮುಟ್ಟುಗೋಲು
2 ತಿಂಗಳಲ್ಲಿ 8 ಬಸ್, 50 ಮೋಟಾರ್ ಕ್ಯಾಬ್, 35 ಲಾರಿ, ಆ್ಯಂಬುಲೆನ್ಸ್, ಶಾಲಾ ವಾಹನ ಸೇರಿದಂತೆ ಒಟ್ಟು 250 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪರವಾನಿಗೆ ನಿಬಂಧನೆಗಳನ್ನು ಉಲ್ಲಂ ಸಿ ಸಂಚರಿಸುವ ವಾಹನಗಳ ಮೇಲೆ ಪ್ರಕರಣ ದಾಖಲಿಸಿ ದಂಡ ಹಾಗೂ ತೆರಿಗೆ ವಸೂಲಿ ಮಾಡಲಾಗುತ್ತಿದ್ದು ಜನವರಿಯಲ್ಲಿ 181 ಪ್ರಕರಣಗಳು ದಾಖಲಾಗಿವೆ. ಒಟ್ಟು 18,56,525 ರೂ. ತೆರಿಗೆ ಸಂಗ್ರಹ ಮತ್ತು 5,79, 500 ರೂ. ದಂಡ ವಸೂಲಿ ಮಾಡಲಾಗಿದೆ ಎಂದವರು ತಿಳಿಸಿದರು.
Related Articles
ಕಾರು ಮುಟ್ಟುಗೋಲು
ಬಿಲ್ಲಾಡಿ ಗ್ರಾ.ಪಂ. ಅಧ್ಯಕ್ಷರು ಬೇರೊಂದು ಕಾರಿನ ನಂಬರ್‌ನ್ನು ತನ್ನ ಕಾರಿಗೆ ಅಳವಡಿಸಿರುವ ಕುರಿತಾಗಿ ದೂರು ಬಂದಿದ್ದು ಆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಆರ್‌ಟಿಒ ತಿಳಿಸಿದರು
Advertisement
ಬೇರೆ ರಾಜ್ಯದಲ್ಲಿನೋಂದಣಿಯಾದರೂ…
ಯಾವುದೇ ವಾಹನ ಯಾವ ರಾಜ್ಯದಲ್ಲಿ ನೋಂದಾವಣೆಗೊಂಡರೂ ಇನ್ನೊಂದು ರಾಜ್ಯದಲ್ಲಿ 30 ದಿನಗಳಿಗಿಂತ ಅಧಿಕ ದಿನ ಸಂಚರಿಸಿದರೆ ಆ ವಾಹನ ಸಂಚರಿಸುತ್ತಿರುವ ರಾಜ್ಯಕ್ಕೆ ತೆರಿಗೆ ಪಾವತಿಸಲೇಬೇಕು ಎಂದು ಆರ್‌ಟಿಒ ತಿಳಿಸಿದರು.