Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಚಿತ ಮಾಹಿತಿ ಆಧರಿಸಿ ನಗರದ ಆಳಂದ ಚೆಕ್‌ಪೋಸ್ಟ್‌ನಲ್ಲಿ ರಾತ್ರಿ ಗಸ್ತಿನಲ್ಲಿದ್ದ ಡಿಸಿಐಬಿ ಪಿಐ ಸೋಮಲಿಂಗ ಕರದಳ್ಳಿ,ಅಶೋಕ ನಗರ ಪಿಐ ಕಪಿಲ್‌ದೇವ, ಬ್ರಹ್ಮಪುರ ಪಿಐ ಎಸ್.ಎಂ.ಯಾಳಗಿ, ಸ್ಟೇಷನ್ ಬಜಾರ್ ಠಾಣೆ ಪಿಐ ಶಕೀಲ ಅಂಗಡಿ, ರಾಘವೇಂದ್ರ ನಗರ ಠಾಣೆ ಪಿಎಸ್‌ಐ ಅಕ್ಕಮಹಾದೇವಿ ಹಾಗೂ ಸಿಬ್ಬಂದಿ ವಾಹನ ತಪಾಸಣೆ ಮಾಡಿದಾಗ ಪಿಸ್ತೂಲ್ ಹಾಗೂ ಗುಂಡುಗಳು ದೊರೆತಿದ್ದವು. ನಂತರ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಗರದ ವಿವಿಧೆಡೆ ನಡೆದ 16 ಮನೆಗಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾಗಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ವಿವರಿಸಿದರು. ಸೊಲ್ಲಾಪುರದ ಹುಸೇನ ಶಿವಾಜಿ ಗಾಯಕವಾಡ, ಶ್ರೀಕಾಂತ ಅಲಿಯಾಸ್ ವಿಜಯಚಂದ್ರಕಾಂತ ಸಿಂಧೆ, ಶಂಕರ ಜಾಧವ್, ಮಹಾಲಲಕ್ಷ್ಮೀ ಲೇಔಟ್ನ ನಾಗರಾಜ ಬಂಧಿತ ಆರೋಪಿಗಳು. ಇವರಿಂದ ಮನೆಯೊಡೆಯಲು ಬಳಸುತ್ತಿದ್ದ ರಾಡುಗಳು, ಮಾಸ್ಕ್, ಗ್ಲೌಸ್, ಖಾರದ ಪುಡಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.