Advertisement
ಬುಧವಾರ ಚೆನ್ನೈನಿಂದ ಮಲೇಷಿಯಾ ಹಾಗೂ ಕೌಲಾ ಲಂಪುರಕ್ಕೆ ಹೋಗುವ ಕೆಲ ಪಾರ್ಸಲ್‌ಗಳು ವಿಮಾನ ನಿಲ್ದಾಣ ಕಾರ್ಗೊ ಕೋರಿಯರ್ ವಿಭಾಗಕ್ಕೆ ಬಂದಿತ್ತು. ಈ ಪಾರ್ಸಲ್‌ಗಳ ಮೇಲೆ “ಪಾಮ್ ಶುಗರ್’ ಹಾಗೂ ಇದರ ಮೌಲ್ಯ 6 ಸಾವಿರ ಎಂದು ಬರೆಯಲಾಗಿತ್ತು. ಇದರಿಂದ ಅನುಮಾನಗೊಂಡ ವಿಮಾನ ನಿಲ್ದಾಣದ ಕೋರಿಯರ್ ವಿಭಾಗದ ಅಧಿಕಾರಿಗಳು, ಪರಿಶೀಲಿಸಿದಾಗ ನಿಷೇಧಿತ ಮೆಥಾಕ್ಯೂಲೋನ್ ಎಂಬ ಮಾದಕ ವಸ್ತು ಪತ್ತೆಯಾಗಿದೆ. ಇದರ ಮೌಲ್ಯ 6.45 ಕೋಟಿ ಎಂದು ಅಂದಾಜಿಸಲಾಗಿದೆ.ಚೆನ್ನೈ ಮೂಲದ ವ್ಯಕ್ತಿ ಫೆಡೆಕ್ಸ್ ಕೋರಿಯರ್ ಮೂಲಕ ಚೆನ್ನೈನಿಂದ ಬೆಂಗಳೂರು ಮಾರ್ಗವಾಗಿ ಮಲೇಷಿಯಾ ಹಾಗೂ ಕೌಲಾಂಪುರಕ್ಕೆ ಈ ಮಾದಕ ವಸ್ತು ಕಳುಹಿಸಲು ಸಂಚು ರೂಪಿಸಿದ್ದ. ಈ ಸಂಬಂಧ ಆ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶುಗರ್ ಎಂಬ ಪ್ಯಾಕೆಟ್‌ನಲ್ಲಿ ನಿಷೇಧಿತ ಮೆಥಾಕ್ಯೂಲೋನ್ ಅನ್ನು ಸಣ್ಣ-ಸಣ್ಣ ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿ ಪಾಮ್ ಶುಗರ್ ಜತೆ ಪ್ಯಾಕ್ ಮಾಡಿದ್ದರು. ಎರಡು ಪ್ರಕರಣ, ಒಂದೇ ಕೊರಿಯರ್ ಕಂಪನಿ: ಜನವರಿ ಮೊದಲ ವಾರದಲ್ಲಿ ಭಾರತೀಯ ಸಿಹಿ ತಿಂಡಿಗಳ ಪ್ಯಾಕೆಟ್‌ಗಳಲ್ಲಿ ಕೆಟಾಮಿನ್ ಎಂಬ ಮಾದಕ ವಸ್ತು ಇಟ್ಟು ಮಲೇಷಿಯಾ ಹಾಗೂ ಕೌಲಾಂಪುರಕ್ಕೆ ಕಳುಹಿಸಲು ಆರೋಪಿಗಳ ಸಂಚು ರೂಪಿಸಿದ್ದರು. ಈ ವೇಳೆ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಒಂದು ಕೋಟಿ ರೂ. ಮೌಲ್ಯದ ಕೆಟಾಮಿನ್ ವಶಪಡಿಸಿಕೊಂಡಿದ್ದರು. ಮತ್ತೂಂದು
ಪ್ರಮುಖ ವಿಷಯವೆಂದರೆ, ಈ ಎರಡು ಪ್ರಕರಣದಲ್ಲೂ ಚೆನ್ನೈನ ಫೆಡೆಕ್ಸ್ ಎಂಬ ಕೋರಿಯರ್ ಮೂಲಕವೇ ರಫ್ತು ಆಗುತ್ತಿದ್ದು, ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಸಂಬಂಧ ಚೆನ್ನೈನ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.