Advertisement
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿ 4 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಇಂಜಿನ್ ಮತ್ತು ಚಾರ್ಸಿ ನಂಬರ್ ಬದಲಾಯಿಸಿ ನಕಲಿ ದಾಖಲೆ ಸೃಷ್ಟಿಸಿ, ಹಲವಾರು ವಾಹನಗಳನ್ನು ಮಾರಾಟ ಮಾಡಲಾಗಿದೆ. ಇದಕ್ಕೆ ಸ್ಥಳೀಯ ಕೆಲವು ಗ್ಯಾರೇಜ್‌ಗಳ ಸಹಕಾರವೂ ಇರುವುದು ತನಿಖೆಯಲ್ಲಿ ತಿಳಿದುಬಂದಿದೆ. ನಗರದ 60 ಅಡಿ ರಸ್ತೆಯಲ್ಲಿ ಬಿಳಿಬಣ್ಣದ ಜೀಪ್‌ವೊಂದು ಪತ್ತೆಯಾಗಿದ್ದು, ಅದನ್ನು ಅತ್ತಿಗುಂಡಿ ವಾಸಿ ಮಕ್ಸೂದ್ ಬೇರೆ ಎಲ್ಲಿಂದಲೋ ತಂದು ಇಂಜಿನ್ ಮತ್ತು ಚಾರ್ಸಿಗಳನ್ನು ಬದಲಿಸಿ ಮಾರಾಟ ಮಾಡಲು ಪ್ರಯತ್ನಿಸಿದ ಪ್ರಕರಣದ ಮೂಲಕ ಈ ಸಂಗತಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಪೊಲೀಸರು ಜೀಪನ್ನು ಪರಿಶೀಲಿಸಿದಾಗ ದಾಖಲೆಗಳು ಸಿಗದೆ ನೆಪಗಳನ್ನು ಹೇಳಿದ್ದು, ನಂತರ ಈ ಜೀಪನ್ನು ಎರಡು ತಿಂಗಳ ಹಿಂದೆ ಕಲುºರ್ಗಿಯ ಆಳಂದದ ಸುಶೀಲ್‌ಕುಮಾರ್ ಅವರಿಂದ ಖರೀದಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನಿಖೆಯನ್ನು ತೀವ್ರಗೊಳಿಸಿದಾಗ ಮಹೀಂದ್ರ ಪಿಕಪ್ ವಾಹನದ ಚಾರ್ಸಿಯನ್ನು ಕಳವು ಮಾಡಿ ಈ ಜೀಪಿಗೆ ಜೋಡಿಸಲಾಗಿತ್ತು. ನಂತರ 1.30 ಲಕ್ಷ ರೂ. ನೀಡಿ, ಈ ವಾಹನ ಖರೀದಿಸಿ, ರಾಮನಹಳ್ಳಿಯ ಅಪ್ಸರ್ ಅವರ ಮೂಲಕ ರಿಪೇರಿ ಮಾಡಿಸಿ ಅಜ್ಜು ಅವರಿಂದ ನಂಬರ್ ಬದಲಾವಣೆ ಮಾಡಿಸಲಾಗಿದೆ ಎಂದು ತಿಳಿದುಬಂತೆಂದು ಪೊಲೀಸರು ವಿವರಿಸಿ, ಇದೇ ರೀತಿ ನಾಲ್ಕೈದು ವಾಹನಗಳನ್ನು ಮಾರಾಟ ಮಾಡಿರುವುದು ಪತ್ತೆಯಾಯಿತೆಂದು ಹೇಳಿದ್ದಾರೆ. ಈ ಪ್ರಕರಣವನ್ನು ದಾಖಲಿಸಿಕೊಂಡು ಮಕ್ಸೂದ್, ಅಹಮದ್, ಸುಶೀಲ್‌ಕುಮಾರ್, ಫೈರೋಜ್, ಕರುಅಣ್ಣ, ಅಪ್ಸರ್ ಮತ್ತು ಅಜ್ಜು ಅವರು ಆರೋಪಿಗಳೆಂದು ತೀರ್ಮಾನಿಸಿ ಅವರಲ್ಲಿ ಮಕ್ಸೂದ್, ಅಹಮದ್, ಅಪ್ಸರ್ ಮತ್ತು ಅಜ್ಜು ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.