ಆರಂಭವಾಗಿದೆ. ಅಲ್ಲದೆ, ಮೃತ ಮಕ್ಕಳ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದ್ದು, ಆಹಾರದಲ್ಲಿ ವಿಷ ಬೆರೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸೋಮವಾರದವರೆಗೂ ಶಾಲೆಗೆ ರಜೆ ಘೋಷಿಸಲಾಗಿದೆ. ಈ ಮಧ್ಯೆ, ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಚಿಕ್ಕನಾಯಕನಹಳ್ಳಿಯ ಒಂದನೇ ಜೆಎಂಎಫ್ಸಿ ನ್ಯಾಯಾಲಯ ಬಂಧಿತ ನಾಲ್ವರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Advertisement
ಶುಚಿತ್ವವಿಲ್ಲದ ಹಾಸ್ಟೇಲ್: ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆ ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ಮೊದಲನೆಯದಾಗಿ ಹಾಸ್ಟೇಲ್ ಗೆ ಅನುಮತಿಯೇ ಇಲ್ಲ. ಹಾಸ್ಟೇಲ್‌ನಲ್ಲಿ ಶುಚಿತ್ವ ಇಲ್ಲವಾಗಿದ್ದು, ಇಲಿ, ಹೆಗ್ಗಣ, ಜಿರಲೆಗಳ ಆವಾಸ ತಾಣವಾಗಿದೆ. ಒಳಗಿರುವವರಿಗೆ ತಿಳಿಯದಂತೆ ಅಪರಿಚಿತರು ಅಡಿಗೆ ಕೋಣೆಯೊಳಗೆ ಸುಲಭವಾಗಿ ಬಂದು ಹೋಗಬಹುದಾಗಿದೆ. ಅಲ್ಲದೆ, ಪ್ರತಿ ದಿನ ಮಕ್ಕಳು ಪೋಷಕರಿಗೆ ದೂರವಾಣಿ ಕರೆ ಮಾಡಲು ಹಾಸ್ಟೇಲ್‌ನಲ್ಲಿ ಪೋನ್ ಇಡಲಾಗಿದೆ.
ಮ್ಯಾನ್ ಗುಣಮುಖರಾದ ನಂತರ ಅವರಿಂದ ಮಾಹಿತಿ ಪಡೆದು ಸ್ಕೂಟಿಯಲ್ಲಿ ಬಂದವರಾರು ಎಂಬುದನ್ನು ಪತ್ತೆ ಹಚ್ಚಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ವಿಷಕಾರಿ ಅಂಶ ಪತ್ತೆ: ಇದೇ ವೇಳೆ, ಮೃತ ಮಕ್ಕಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು, ಸಾರಿನಲ್ಲಿ ವಿಷ ಜಂತು ಬಿದ್ದಿಲ್ಲ. ಉದ್ದೇಶ ಪೂರ್ವಕವಾಗಿಯೇ ಸಾರಿಗೆ ವಿಷ ಹಾಕಿರುವ ಬಗ್ಗೆ ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
Related Articles
ಕೊಡಿಸದೆ, ಮೃತ ದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆಂದು ಆರೋಪಿಸಿ ಮೃತ ಮಕ್ಕಳ ರಕ್ತ ಸಂಬಂಧಿಕರು ಹುಳಿಯಾರು ಠಾಣೆಗೆ ಮುತ್ತಿಗೆ ಹಾಕಿದರು. ತಿಪಟೂರು ಡಿವೈಎಸ್‌ಪಿ ವೇಣುಗೋಪಾಲ್, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದೇ ವೇಳೆ, ಸೋಮವಾರದವರೆಗೂ ಶಾಲೆಗೆ ರಜೆ ಘೋಷಿಸಲಾಗಿದ್ದು, ಈ ಸಂಬಂಧ ಪೋಷಕರ ಮೊಬೈಲ್‌ಗೆ ಮೆಸೇಜ್ ಕಳುಹಿಸಲಾಗಿದೆ.
Advertisement
ವಿಷಾಹಾರ ಸೇವನೆ: ವಿದ್ಯಾರ್ಥಿಗಳು ಅಸ್ವಸ್ಥ ಯಾದಗಿರಿ: ವಿಷಾಹಾರ ಸೇವಿಸಿದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಇಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಾಲೇಜು ವಸತಿ ನಿಲಯದಲ್ಲಿ ಶುಕ್ರವಾರ ನಡೆದಿದೆ. ವಸತಿ ನಿಲಯದಲ್ಲಿಶುಕ್ರವಾರ ಮಧ್ಯಾಹ್ನ ಚಪಾತಿ, ಅನ್ನ, ಸಾಂಬಾರ್ ಸೇವಿಸಿದ ನಂತರ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ತಲೆಸುತ್ತು ಬಂದಿದ್ದರಿಂದ ವಸತಿ ನಿಲಯ ಸಿಬ್ಬಂದಿ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಡಿಸಿ ಖುಷೂº ಗೋಯಲ್ ಚೌಧರಿ, ಜಿಪಂ ಸಿಇಒ ಡಾ. ಅವಿನಾಶ ಮೆನನ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ,ವಿಷಾಹಾರ ಕುರಿತು ಪರೀಕ್ಷೆ ನಡೆಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು. ವಿದ್ಯಾರ್ಥಿನಿಯರು ಅಸ್ವಸ್ಥ: ಯಾದಗಿರಿಯ ಮಾತಾ ಮಾಣಿಕೇಶ್ವರಿ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಂದಿರಾ ಗಾಂಧಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನಿಲಯದಲ್ಲಿ ವಿಷಾಹಾರ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.