ಬಂಧನಕ್ಕೆ ಒಳಗಾಗಿರುವ ಎಲ್ಲ ರಾಜಕೀಯ ನಾಯಕರನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುತ್ತದೆ. ಹೀಗೆಂದು ಗೃಹ ಸಚಿವ ಅಮಿತ್ ಶಾ ಅಪ್ನಿ ಪಾರ್ಟಿಯ ಅಧ್ಯಕ್ಷ ಅಲ್ತಾಫ್ ಬುಖಾರಿಗೆ ರವಿವಾರ ಭರವಸೆ ನೀಡಿದ್ದಾರೆ.
Advertisement
24 ಮಂದಿ ನೂತನವಾಗಿ ಸ್ಥಾಪನೆಗೊಂಡ ಪಕ್ಷದ ಸದಸ್ಯರ ನಿಯೋಗ ಗೃಹ ಸಚಿವರನ್ನು ಭೇಟಿಯಾಗಿದ್ದ ವೇಳೆ ರಾಜಕೀಯ ಕೈದಿಗಳ ಬಿಡುಗಡೆ ಬಗ್ಗೆ ಮನವಿ ಮಾಡಿತು. ಇದರ ಜತೆಗೆ ಗೃಹ ಖಾತೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಕೇಂದ್ರಾಡಳಿತ ಪ್ರದೇಶದ ಪರಿಸ್ಥಿತಿಯ ಬಗ್ಗೆಯೂ ಚರ್ಚೆ ನಡೆಸಿತು.