Advertisement
ಯೂನ್ ಅವರ ಬಂಧನಕ್ಕೆ ಹೊರಡಿಸಿರುವ ವಾರಂಟ್ ಅವಧಿ ಸೋಮವಾರ ಸಂಜೆ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ, ಅಧ್ಯಕ್ಷ ಯೂನ್ ಅವರನ್ನು ಬಂಧಿಸಲು ಸಹಕರಿಸುವಂತೆ ಭ್ರಷ್ಟಾಚಾರ ನಿಗ್ರಹ ಉನ್ನತ ತನಿಖಾಧಿಕಾರಿ ಪತ್ರ ಮುಖೇನ ಭಾನುವಾರ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
Related Articles
Advertisement
ಯೂನ್ಸ್ ವಿರುದ್ಧ ಹೊರಡಿಸಿದ್ದ ವಾರಂಟ್ ಕಾನೂನು ಬಾಹಿರ ಮತ್ತು ಅಸಿಂಧು ಎಂದು ಯೂನ್ಸ್ ಅವರ ಕಾನೂನು ತಜ್ಞರ ತಂಡ ತಿಳಿಸಿದೆ. ದೇಶದಲ್ಲಿ ಮಿಲಿಟರಿ ಆಡಳಿತ ಘೋಷಿಸಿದ್ದ ಯೂನ್ಸ್ ವಿರುದ್ಧ ತನಿಖೆ ನಡೆಸುವ ಅಧಿಕಾರ ಭ್ರಷ್ಟಾಚಾರ ನಿಗ್ರಹ ಪಡೆಗಿಲ್ಲ ಎಂದು ತಿರುಗೇಟು ನೀಡಿದೆ.
“ತನ್ನನ್ನು ಬಂಧಿಸಲು ಹಾಗೂ ಅಧ್ಯಕ್ಷರ ನಿವಾಸವನ್ನು ಶೋಧಿಸಲು ಹೊರಡಿಸಿರುವ ವಾರಂಟ್ ಗೆ ನಿರ್ಬಂಧ ಹೇರಬೇಕೆಂದು ಕೋರಿ ಯೂನ್ ಭಾನುವಾರ ಸಿಯೋಲ್ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು”.