ಹಾವೇರಿ: ಬಹುವೈಶಿಷ್ಟ್ಯತೆಗಳಿಂದ ಕೂಡಿದ ಲಂಬಾಣಿ ಸಮುದಾಯದ ಭಾಷೆ, ಸಾಹಿತ್ಯ, ಸಂಪ್ರದಾಯ, ಆಚರಣೆ ಸೇರಿ ಸಮುದಾಯದ ಜೀವನದ ಸಮಗ್ರ ವಿವರ ದಾಖಲೀಕರಿಸುವ ಕಾರ್ಯ ನಡೆದಿದ್ದು, ಶೀಘ್ರವೇ ಇದು ರಾಜ್ಯದ ದಾಖಲೆ ಭಂಡಾರ ಸೇರಲಿದೆ.
ಲಂಬಾಣಿಗರ ಸಮಗ್ರ ಆಚರಣೆ, ಸಂಪ್ರದಾಯ, ಹಬ್ಬದಾಚರಣೆ, ವೇಷಭೂಷಣ, ಮೌಖೀಕ ಸಾಹಿತ್ಯವನ್ನು ಅ ಧಿಕೃತವಾಗಿ ದಾಖಲೀಕರಿಸುವ ಕಾರ್ಯ ಈವರೆಗೆ ಆಗಿರಲಿಲ್ಲ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಲಂಬಾಣಿ ಸಮುದಾಯದ ಸಮಗ್ರ ವಿವರವನ್ನು ಆಡಿಯೋ, ವಿಡಿಯೋ ಹಾಗೂ ಲೇಖೀ ಮೂಲಕ ದಾಖಲಿಸಲು ಮುಂದಾಗಿದೆ. ದಾಖಲೀಕರಣ ಕಾರ್ಯವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ನಿರ್ವಹಿಸುತ್ತಿದೆ.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು “ಲಂಬಾಣಿ ಜನಪದ ಸಾಹಿತ್ಯ ಸಂಗ್ರಹ ಹಾಗೂ ಬಹುಮುಖೀ ದಾಖಲೀಕರಣ ಯೋಜನೆ’ಯಡಿ ಮೂರು ಕೋಟಿ ರೂ.ವೆಚ್ಚ ಮಾಡುತ್ತಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಎರಡು ವರ್ಷಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕ್ಷೇತ್ರ ಪ್ರತಿನಿಧಿ ಗಳು, ವಿಶೇಷ ತಂಡಗಳ ಮೂಲಕ ಲಂಬಾಣಿಗರ ಸಮಗ್ರ ಅಧ್ಯಯನ ನಡೆಸಿದೆ. ಈಗ ಮಾಹಿತಿ ದಾಖಲಿಸಿ ಅವುಗಳನ್ನು ಪ್ರತ್ಯೇಕ ಕೃತಿಗಳಾಗಿ ಸಿದ್ಧಪಡಿಸುವ ಕಾರ್ಯ ನಡೆದಿದೆ.
ಏನೆಲ್ಲ ದಾಖಲೆಯಾಗುತ್ತಿದೆ?:
ಲಂಬಾಣಿ ಗಾದೆಗಳು (ಕನ್ನಡ ಅರ್ಥಸಹಿತ), ಲಂಬಾಣಿಗರ ಒಗಟುಗಳು, ಭೀಮಾಸತಿ ಖಂಡ ಕಾವ್ಯ, ಹೂನಾಸತಿ ಖಂಡಕಾವ್ಯ, ಸಿತಾಸತಿ ಖಂಡಕಾವ್ಯ, ಸೇವಾಲಾಲರ ಮಹಾಕಾವ್ಯ, ಸೇವಾಲಾಲ್ ಬಯಲಾಟ, ಸಾಮಕಮಾತಾ ಬಯಲಾಟ ಕೃತಿಗಳು ಪ್ರಕಟಣೆಗೆ ಸಿದ್ಧಗೊಂಡಿವೆ.
ರಥನ ಗೀತೆಗಳು, ಸೇವಾಲಾಲರ ಕುರಿತ ಹಾಡುಗಳು, ಲಂಬಾಣಿ ಮಹಿಳೆಯರ ನೃತ್ಯದ ಹಾಡುಗಳು, ಲಂಬಾಣಿಗರ ವಿಶಿಷ್ಟ ಹೋಳಿ ಹಾಡುಗಳು, ಪ್ರಕೃತಿ ಕುರಿತ ಹಾಡುಗಳು, ಮೋಜಿನ ಹಾಗೂ ಇತರ ಹಾಡುಗಳು, ಲಂಬಾಣಿ ಕಥೆಗಳು ಪ್ರಕಟಣೆಗೆ ಸಿದ್ಧಗೊಳ್ಳುತ್ತಿವೆ. ಇವುಗಳ ಜತೆಗೆ ಲಂಬಾಣಿಗರ ವಿಶಿಷ್ಟ ದೀಪಾವಳಿ ಆಚರಣೆ, ಶಿತಳಾ (ಶಿತ್ಲಾ) ಹಬ್ಬ ಆಚರಣೆಗಳ ಸಾಕ್ಷ Âಚಿತ್ರಗಳು ಈಗಾಗಲೇ ಸಿದ್ಧಗೊಂಡಿವೆ. ಲಂಬಾಣಿಗರ ಶೈಲಿಯಲ್ಲಿನ ರಾಮಾಯಣ ಹಾಗೂ ಮಹಾಭಾರತ, ಲಂಬಾಣಿಗರ ವಿಶಿಷ್ಯ ತೀಜ್ ಆಚರಣೆಗಳ ಸಾಕ್ಷ ಚಿತ್ರಗಳು ಸಿದ್ಧಗೊಳ್ಳುತ್ತಿವೆ. ಲಂಬಾಣಿ ಸಮುದಾಯದ ಸಮಗ್ರ ಜನಪದ ಸಾಹಿತ್ಯ ಹಾಗೂ ಬಹುಮುಖೀ ದಾಖಲೀಕರಣ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಇದು ಮುಂದೆ ರಾಜ್ಯದಲ್ಲಿ ಲಂಬಾಣಿಗರ ಜೀವನದ ಮೇಲೆ ಬೆಳಕು ಚೆಲ್ಲುವ ಅ ಧಿಕೃತ ದಾಖಲೆಯಾಗಿ ಮಾರ್ಪಾಡಾಗಲಿದೆ.
ಲಂಬಾಣಿ ಜನಪದ ಸಾಹಿತ್ಯ ಸಂಗ್ರಹ ಹಾಗೂ ಬಹುಮುಖೀ ದಾಖಲೀಕರಣ ಕಾರ್ಯ ಅಂತಿಮ ಹಂತದಲ್ಲಿದೆ. ಇನ್ನು ಎರಡೂ¾ರು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸಮಗ್ರ ಸಂಪುಟಕ್ಕೆ ಬದಲಾಗಿ ವೈಶಿಷ್ಟÂತೆಗೆ ತಕ್ಕಂತೆ ಪ್ರತ್ಯೇಕ ಕೃತಿಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಇದು ಮುಂದೆ ಲಂಬಾಣಿಗರ ಸಮಗ್ರ ಜೀವನದ ಅ ಧಿಕೃತ ದಾಖಲೆಯಾಗಲಿದೆ.
– ಡಿ.ಬಿ.ನಾಯಕ, ಕುಲಪತಿಗಳು, ಕಜಾವಿವಿ.
– ಎಚ್.ಕೆ. ನಟರಾಜ