Advertisement

ರಸ್ತೆ ಕಾನೂನು ಕಟ್ಟುನಿಟ್ಟು, ಕಟ್ಟುವ ದಂಡ ದುಪ್ಪಟ್ಟು ; ವಿದೇಶಗಳಲ್ಲೂ ಇದೆ ದುಬಾರಿ ದಂಡ!

10:26 AM Sep 06, 2019 | Hari Prasad |

ನವದೆಹಲಿ: ಮೋಟಾರ್‌ ವಾಹನಗಳ ತಿದ್ದುಪಡಿ ಕಾಯ್ದೆ 2019 ಸೆ. 1ರಂದು ಜಾರಿಗೆ ಬಂದಿದೆ. ಈ ಪರಿಷ್ಕೃತ ಕಾನೂನಿನಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಮೀರುವ ವಾಹನ ಸವಾರರಿಗೆ ದುಬಾರಿ ದಂಡ ವಿಧಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ಕೇಂದ್ರದ ಈ ಕಾನೂನು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕಾನೂನಿನ ಸಾಧಕ ಬಾಧಕಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು ಕೆಲವರು ಕಾನೂನಿನ ಪರವಾಗಿ ವಾದಿಸಿದರೆ ಇನ್ನು ಕೆಲವರು ಈ ದುಬಾರಿ ದಂಡ ಜನಸಾಮಾನ್ಯರಿಗೆ ಸಂಕಷ್ಟ ಉಂಟುಮಾಡುತ್ತದೆ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.


ಆದರೆ ಸಂಚಾರಿ ನಿಯಮಗಳ ಪಾಲನೆ ಮತ್ತು ಅರಿವು ಕಡಿಮೆ ಇರುವ ನಮ್ಮ ದೇಶದಲ್ಲಿ ದುಬಾರಿ ದಂಡಗಳ ಕಾರಣದಿಂದಾರೂ ಜನರು ಸಂಚಾರಿ ನಿಯಮಗಳ ಪಾಲನೆಯ ಕುರಿತು ಅರಿವು ಮೂಡಿಸಿಕೊಳ್ಳಬಹುದೆಂಬ ವಿಶ್ವಾಸ ಸರಕಾರದ್ದಾಗಿದೆ. ಸಂಚಾರಿ ನಿಯಮಗಳಿಗೆ ಸಂಬಂಧಿಸಿದಂತೆ ವಿದೇಶಗಳಲ್ಲೂ ಇಂತಹ ಕಠಿನ ಕಾನೂನುಗಳು ಮತ್ತು ದುಬಾರಿ ದಂಡ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ.

Advertisement

ನಮ್ಮ ದೇಶದಲ್ಲಿ ಪರಿಷ್ಕೃತಗೊಂಡ ದಂಡ ದರಗಳು

ಸಂಚಾರ ನಿಯಮ ಉಲ್ಲಂಘನೆ: 500 ರೂ. ಗರಿಷ್ಠ 10 ಸಾವಿರ ರೂ. (ಹಿಂದಿನ ದರ 100 ರೂ.)

ಸೀಟ್‌ ಬೆಲ್ಟ್ ಇಲ್ಲದೇ ಚಾಲನೆ: 1,000 ರೂ. (ಈಗಿನ ದರ 100 ರೂ.)

ವಾಹನಗಳ ದಾಖಲೆಗಳು ಮತ್ತು ವಿಮೆಗಳು ಇಲ್ಲದಿದ್ದರೆ: 2,000 ರೂ. (ಪ್ರತಿ ವರ್ಷ ಶೇ. 10 ಏರಿಕೆಯಾಗಲಿದೆ. ಅಂದರೆ 2019ರಲ್ಲಿ 2,000 ರೂ. ಇದ್ದರೆ 2020ರಲ್ಲಿ 2,200 ರೂ.)

Advertisement

ಲೈಸೆನ್ಸ್‌ ಇಲ್ಲದ ಚಾಲನೆ: 5,000 (ಹಿಂದಿನ ದರ 500 ರೂ.)

ನಿಯಮ ಉಲ್ಲಂಘಿಸಿ, ಅಪಾಯದ ಚಾಲನೆ: 5,000 ರೂ.

ಕುಡಿದು ವಾಹನ ಚಾಲನೆ: 10,000 ರೂ. (ಹಿಂದಿನ ದಂಡ 2,000 ರೂ.)

ತುರ್ತು/ಆ್ಯಂಬುಲೆನ್ಸ್‌ ವಾಹನಗಳಿಗೆ ದಾರಿ ಬಿಟ್ಟುಕೊಡದಿದ್ದರೆ: 10,000 ರೂ.

ವೇಗ ಮಿತಿಯನ್ನು ಮೀರಿ ಚಾಲನೆ: ಸಣ್ಣ ಗಾಡಿಗಳಿಗೆ 1,000 ರೂ.,ಕಾರುಗಳಿಗೆ 2,000 ರೂ. ದಂಡ ನಿಗದಿ.

ರೇಸ್‌ಗಳು ಕಂಡುಬಂದರೆ: 5,000 ರೂ.

ಓವರ್‌ ಲೋಡಿಂಗ್‌: 2000 ಸಾವಿರ (2 ಸಾವಿರ/ಟನ್‌)

ಗರಿಷ್ಠ ಮಿತಿ ಮೀರಿದ ಪ್ರಯಾಣಿಕರ ಸಾಗಾಟ: 1000/ ಹೆಚ್ಚುವರಿ ಪ್ರಯಾಣಿಕನಿಗೆ

ದ್ವಿಚಕ್ರದಲ್ಲಿ 2ಕ್ಕಿಂತ ಹೆಚ್ಚು ಜನ ಇದ್ದರೆ:  2000 (3 ತಿಂಗಳು ಲೈಸೆನ್ಸ್‌ ರದ್ದು)

ಭಾರೀ ಗಾತ್ರದ ವಾಹನಗಳ ಅನುಮತಿ ರಹಿತ ಪ್ರಯಾಣ: 5000

ಹಿಟ್‌ ಆ್ಯಂಡ್‌ ರನ್‌: ಸಾವು ಸಂಭವಿಸಿದರೆ 2 ಲಕ್ಷ (ಹಿಂದಿನ ದರ 25,000 ರೂ.)

ಗಾಯಗಳು ಉಂಟಾದರೆ: 12,5000 ರೂ. (50,000 ರೂ.)

ಅಪ್ರಾಪ್ತ ವಾಹನ ಚಾಲಕರಿಗೆ
18 ವರ್ಷ ಪ್ರಾಯಕ್ಕಿಂತ ಕೆಳಗಿನವರು ವಾಹನ ಚಾಲನೆ ಮಾಡುವಂತಿಲ್ಲ. ಒಂದು ವೇಳೆ ಅಪ್ರಾಪ್ತರು ವಾಹನ ಚಾಲನೆ ಮಾಡಿ ಅಪಘಾತ ಸಂಭವಿಸಿದರೆ ವಾಹನಗಳ ಮಾಲಕರನ್ನು ಹೊಣೆಗಾರನನ್ನಾಗಿ ಮಾಡಲಾಗುತ್ತದೆ.

ವಿದೇಶದಲ್ಲಿ ಹೇಗಿವೆ ದಂಡಗಳು (ರೂ.ಗಳಲ್ಲಿ)

ಸಿಗ್ನಲ್ ನಿಯಮದ ಉಲ್ಲಂಘನೆ


ಭಾರತ 5,000

ಹಾಂಕಾಂಗ್‌ 5,505

ಸಿಂಗಾಪುರ 25,877

ಇಂಗ್ಲೆಂಡ್‌ 8,677

ಜರ್ಮನಿ 7,101

ಜಪಾನ್‌ 6,094

ಅಮೆರಿಕ 3,598

ಓವರ್‌ ಸ್ಪೀಡ್‌


ಭಾರತ 2,000

ಹಾಂಕಾಂಗ್‌ 2,936

ಸಿಂಗಾಪುರ 7,736

ಇಂಗ್ಲೆಂಡ್‌ 8,667

ಜರ್ಮನಿ 789

ಜಪಾನ್ 23,699

ಅಮೆರಿಕ 10,794

ಕುಡಿದು ವಾಹನ ಚಾಲನೆ


ಭಾರತ 10,000

ಹಾಂಕಾಂಗ್‌ 2,29,376

ಸಿಂಗಾಪುರ 2,58,771

ಇಂಗ್ಲೆಂಡ್‌ 2,16,929

ಜರ್ಮನಿ 1,18,359

ಜಪಾನ್‌ 6,77,115

ಅಮೆರಿಕ 1,79,905

ನೋ ಪಾರ್ಕಿಂಗ್‌ ನಿಯಮ ಉಲ್ಲಂಘನೆ


ಭಾರತ 1,000

ಹಾಂಕಾಂಗ್‌ 18,350

ಸಿಂಗಾಪುರ ದಂಡ ಇಲ್ಲ

ಇಂಗ್ಲೆಂಡ್‌ 7,809

ಜರ್ಮನಿ 5,523

ಜಪಾನ್‌ 13,542

ಅಮೆರಿಕ 5,397

ಪರವಾನಿಗೆ ಇಲ್ಲದ ಚಾಲನೆ


ಭಾರತ 5,000

ಹಾಂಕಾಂಗ್‌ 91,750

ಸಿಂಗಾಪುರ 5,17,543

ಇಂಗ್ಲೆಂಡ್‌ 86,671

ಜರ್ಮನಿ –

ಜಪಾನ್‌ 2,03,134

ಅಮೆರಿಕ 21,588

ವಿಮೆ ಇಲ್ಲದ ಚಾಲನೆ


ಭಾರತ 2,000

ಹಾಂಕಾಂಗ್‌ 33,030

ಸಿಂಗಾಪುರ 51,754

ಇಂಗ್ಲೆಂಡ್‌ 26,031

ಜರ್ಮನಿ –

ಜಪಾನ್‌ –

ಅಮೆರಿಕ 1,07,943

( ವಿದೇಶಿ ಸಂಚಾರ ನಿಯಮಗಳ ಮಾಹಿತಿ: ಇಂಡಿಯಾ ಟುಡೆ)

Advertisement

Udayavani is now on Telegram. Click here to join our channel and stay updated with the latest news.

Next