Advertisement
ರಾಜಕೀಯ ಜೀವನ: 1990ರಲ್ಲಿ ನಾಗ್ಪುರ ಮುನ್ಸಿಪಾಲಿಟಿಯಲ್ಲಿ ಸದಸ್ಯರಾಗುವ ಮೂಲಕ ರಾಜಕೀಯ ರಂಗ ಪ್ರವೇಶಿಸಿದ ಅವರು, 1992, 1997ರ ಮುನ್ಸಿಪಲ್ ಚುನಾವಣೆಗಳಲ್ಲೂ ಜಯ ಸಾಧಿಸಿ ಅತಿ ಚಿಕ್ಕ ವಯಸ್ಸಿನಲ್ಲಿ ಅಲ್ಲಿನ ಮೇಯರ್ ಆದ ಹೆಗ್ಗಳಿಕೆ ಪಡೆದಿದ್ದರು.
ಎರಡನೇ ಬಾರಿಗೆ ಮಹಾರಾಷ್ಟ್ರದ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್ ಅವರನ್ನು ಪತ್ನಿ ಅಮೃತಾ ಫಡ್ನವೀಸ್ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ‘ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಅವರೇ ಅಭಿನಂದನೆಗಳು. ನೀವು ಸಾಧಿಸಿಬಿಟ್ಟಿರಿ’ ಎಂದು ಬರೆದುಕೊಂಡಿದ್ದಾರೆ.
Related Articles
ಹಠಾತ್ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾದ ಬಿಜೆಪಿಯ ತಂತ್ರಗಾರಿಕೆಯ ಬಗ್ಗೆ ಟ್ವೀಟರಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು, ಬಿಜೆಪಿಯ ಈ ನಡೆಯನ್ನು ಎಚ್‌ಬಿಒ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರೋಮಾಂಚಕ ಧಾರಾವಾಹಿ, ‘ಗೇಮ್ ಆಫ್ ಥ್ರೋನ್ಸ್’ಗಿಂತಲೂ ಹೆಚ್ಚು ರೋಮಾಂಚಕವಾಗಿತ್ತೆಂದು ಬಣ್ಣಿಸಿದರೆ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಅಮಿತ್ ಶಾ ಅವರನ್ನು ‘ಬೆಸ್ಟ್ ಫಿನಿಶರ್’ ಹಾಗೂ ‘ಚಾಣಕ್ಯ’ ಎಂದು ಕೊಂಡಾಡಿದ್ದಾರೆ.
Advertisement
ಸೃಷ್ಟಿ ಶರ್ಮಾ ಎಂಬವರು, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಹಾಗೂ ಅಮಿತ್ ಶಾ ಅವರ ಭಾವಚಿತ್ರಗಳನ್ನು ಒಟ್ಟಿಗೆ ಟ್ವೀಟ್ ಮಾಡಿ, ಇವರಿಬ್ಬರೂ ಬೆಸ್ಟ್ ಫಿನಿಶರ್‌ಗಳು ಎಂದಿದ್ದಾರೆ. ಇನ್ನೂ ಕೆಲವರು, ಅಮಿತ್ ಶಾ ಅವರ ರಾಜಕೀಯ ಲೆಕ್ಕಾಚಾರ ಮಹಾರಾಷ್ಟ್ರದಲ್ಲಿ ತಲೆಕಳಗಾಗಿದೆ ಎಂದು ಶನಿವಾರದ ಸಂಚಿಕೆಯಲ್ಲಿ ಬರೆದಿದ್ದ ಅನೇಕ ಪತ್ರಿಕೆಗಳು, ಮಾಧ್ಯಮಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಜನರು, ಮಹಾರಾಷ್ಟ್ರದ ರಾಜಕೀಯ ಬಿಗ್ ಬಾಸ್‌ಗಿಂತಲೂ ಹೆಚ್ಚು ಕುತೂಹಲಕಾರಿಯಾಗಿದೆ ಎಂದಿದ್ದಾರೆ.
ಹೇಳಿದ್ದನ್ನು ಈಗ ಅರ್ಥೈಸಿಕೊಳ್ಳಿಕ್ರಿಕೆಟ್ ಹಾಗೂ ರಾಜಕೀಯದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂದು ನಾನು ನಿಮಗೆ ಮೊದಲೇ ಹೇಳಿದ್ದೆ. ಈಗ ನೀವು ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬಹುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಎನ್‌ಸಿಪಿ ದಿಢೀರ್ ಸರಕಾರ ರಚಿಸಿರುವ ಕುರಿತು ಮುಂಬಯಿನಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಮಾಡುವ ನಿಟ್ಟಿನಲ್ಲಿ ಕಸರತ್ತು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಹಿಂದೆ ಎರಡು ಸಂದರ್ಭಗಳಲ್ಲಿ ಇದೇ ಮಾತುಗಳನ್ನಾಡಿದ್ದರು. 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ದೇವೇಂದ್ರ ಫಡ್ನವೀಸ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಗಡ್ಕರಿ, ನಿಗದಿಪಡಿಸಿದ ಅವಧಿಯಲ್ಲಿ ಬಿಜೆಪಿ ವಿಶ್ವಾಸಮತ ಸಾಬೀತುಪಡಿಸಲಿದೆ ಎಂದರು.