Advertisement
ಕನ್ನಡ ಭಾಷೆಯಲ್ಲಿ ಚಲಾವಣೆಯಲ್ಲಿರುವ ಅನೇಕ ಗಾದೆ ಮಾತುಗಳು ನಮ್ಮ ಜೀವನ ಯಾವುದೋ ಒಂದು ಸಂದರ್ಭಕ್ಕೆ ಹೋಲು ವಂತಿದೆ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಈ ಗಾದೆ ನಮ್ಮ ಬದುಕಿದೆ ಮಾರ್ಗದರ್ಶನದಂತೆ ಕಾಣುತ್ತದೆ. ಯಾಕೆಂದರೆ ಕೆಲವೊಂದು ವಿಚಾರ ಆಗಿರಬಹುದು ಅಥವಾ ವಸ್ತುವೇ ಆಗಿರಬಹುದು, ಅದನ್ನು ನಾವು ಕಣ್ಣಾರೆ ಕಂಡು ಅದು ಅದೇ ವಸ್ತು ಎಂದು ನಿರ್ಧ ರಿಸುವುದು ಸರಿಯಲ್ಲ. ಬೆಳ್ಳಗಿರುವುದೆಲ್ಲಾ ಹಾಲಲ್ಲವಲ್ಲ… ಬೆಳ್ಳಗಿರುವ ನೀರನ್ನು ಕಂಡು ಹಾಲು ಎಂದು ಭಾವಿಸಿ ಹಾಲಾಹಲವನ್ನು ಸೇವಿಸಿದ ಪ್ರಸಂಗವನ್ನು ನಾವೆಲ್ಲಾ ಗಮನಿಸಿದ್ದೇವೆ. ಹಾಗೆಯೇ ದೂರದಲ್ಲಿ ಒಂದು ಹಗ್ಗ ಬಿದ್ದಿದ್ದರೆ ಅದನ್ನ ಹಾವು ಎಂದು ಭಾವಿಸಿ ಊರೆಲ್ಲಾ ಕಿರುಚಾಡಿ ಬೆಚ್ಚಿ ಬೀಳುವುದು ಸರಿಯೇ? ಅಥವಾ ಸರಿಯಾಗಿ ಸ್ವಲ್ಪ ಹತ್ತಿರದಿಂದ ನೋಡಿ ಅದೇನೆಂದು ಸ್ಪಷ್ಟೀಕರಿಸಿಕೊಳ್ಳುವುದು ಸರಿಯೇ? ಇಂತಹ ಪ್ರಸಂಗಗಳು ಎದೆಷ್ಟೋ ನಮ್ಮ ಸುತ್ತಮುತ್ತ ನಡೆದಿದೆ.
Related Articles
Advertisement
ಅದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎಂದು ಪತ್ತೆ ಹಚ್ಚಿ ದೃಢೀಕರಿಸಿಕೊಳ್ಳಬೇಕು ಎಂಬುದೇ ಈ ಗಾದೆಯ ಆಶಯವಾಗಿದೆ. ಕೆಲವೊಮ್ಮೆ ಹಲವಾರು ಕಾರಣಗಳಿಂದ ಎದುರಿಗಿರುವ ವಸ್ತುಗಳ ನೈಜ ಸ್ವರೂಪವನ್ನು ಗ್ರಹಿಸಲಾಗದ ಸಂದರ್ಭ ಎದುರಾಗುತ್ತದೆ. ತಾಳ್ಮೆ, ಸಹನೆ ಇದ್ದರೆ ಇವೆಲ್ಲವೂ ಸಾಧ್ಯ, ಅಸಾಧ್ಯವಾದುದು ಯಾವುದೂ ಇಲ್ಲ.
-ದೀಪ್ತಿ ಅಡ್ಡಂತ್ತಡ್ಕ
ವಿವೇಕಾನಂದ ಕಾಲೇಜು
ಪುತ್ತೂರು