Advertisement

ಭಯೋತ್ಪಾದನೆಯ ಪ್ರಾಬಲ್ಯ ಶಾಶ್ವತವಲ್ಲ : ಪ್ರಧಾನಿ ನರೇಂದ್ರ ಮೋದಿ

02:32 PM Aug 20, 2021 | Team Udayavani |

ನವ ದೆಹಲಿ : ಭಯೋತ್ಪಾದನೆ ಶಾಶ್ವತವಲ್ಲ. ಭಯೋತ್ಪಾದನೆಗಳು ಕೆಲವು ಕಾಲ ಮಾತ್ರ ನಮ್ಮ ಪ್ರಾಬಲ್ಯವನ್ನು ಮೆರಯಬಹುದು ಅಷ್ಟೇ, ಆ ಮೇಲೆ ಅವುಗಳಿಗೆ ವಿನಾಶವೇ ಗತಿ ಎಂದು ಇಂದು(ಶುಕ್ರವಾರ, ಆಗಸ್ಟ್ 20) ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಇದನ್ನೂ ಓದಿ : ಕಾತ್ರಜ್‌ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ: ನಾಗರ ಪಂಚಮಿ ಆಚರಣೆ

ಗುಜರಾತ್‌ ನ ಪ್ರಸಿದ್ಧ ಸೋಮನಾಥ್ ಮಂದಿರದ ವಿವಿಧ ಯೋಜನೆಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಸೋಮನಾಥ್‌ ದೇವಾಲಯವನ್ನು ಹಲವು ಬಾರಿ ನಾಶಗೊಳಿಸಲಾಗಿತ್ತು. ಇಲ್ಲಿನ ವಿಗ್ರಹಗಳನ್ನು ವಿರೂಪಗೊಳಿಸಲಾಗಿತ್ತು. ಆದರೆ, ದೇವಾಲಯ ಮತ್ತೆ ತನ್ನ ವೈಭವವನ್ನು ಪಡೆದುಕೊಂಡಿದೆ. ಇದು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ’ ಎಂದು ಅವರು ಹೇಳಿದ್ದಾರೆ.

ಇನ್ನು, ಪ್ರವಾಸೋದ್ಯಮದ ಬಗ್ಗೆ ಉಲ್ಲೇಖಿಸಿದ ಅವರು, ‘ಜಗತ್ತಿನ ಪ್ರವಾಸೋದ್ಯಮದ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ 2013ರಲ್ಲಿ 65ನೇ ಸ್ಥಾನದಲ್ಲಿತ್ತು. ಆದರೆ, 2019ರಲ್ಲಿ 34ನೇ ಸ್ಥಾನ ಪಡೆಯಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಚೆಕ್‌ಗೆ ನಕಲಿ ಸಹಿ ಬಳಸಿ 2.50 ಕೋಟಿ ರೂ. ವಂಚಿಸಲೆತ್ನಿಸಿದ ಇಬ್ಬರ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next