Advertisement

ರೈತನಿಂದ ಮೆಕ್ಕೆಜೋಳ ನೆಲಸಮ

09:55 AM Jun 28, 2020 | Suhan S |

ಭರಮಸಾಗರ: ಬಿತ್ತನೆ ಮಾಡಿದ ಒಂದು ತಿಂಗಳ ಅವಧಿಯಲ್ಲೇ ಮೆಕ್ಕೆಜೋಳ ಬೆಳೆಗೆ ಬಿದ್ದ ಲದ್ದಿಹುಳು ನಿಯಂತ್ರಣ ಆಗದ ಕಾರಣ ರೈತ ಫಸಲನ್ನು ನೆಲಸಮಗೊಳಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಬೀರಾವರ ಗ್ರಾಮದಲ್ಲಿ ಶನಿವಾರ ನಡೆದಿದೆ.

Advertisement

ರೈತ ಕುಬೇಂದ್ರ ಗೌಡ ಎಂಬುವವರು ಕಳೆದ ತಿಂಗಳ ಹದ ಮಳೆಗೆ ಎರಡೂವರೆ ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಅಲ್ಲೊಂದು ಇಲ್ಲೊಂದು ಹುಳು ಭಾದೆ ಕಾಣಿಸಿಕೊಂಡಿತ್ತು. ಕೃಷಿ ಇಲಾಖೆ ಸಲಹೆಯಂತೆ ಕೀಟನಾಶಕ ಸಿಂಪಡಣೆ ಮಾಡಲಾಗಿತ್ತು. ಆದರೂ ಹುಳು ಬಾಧೆ ಜಾಸ್ತಿಯಾಯಿತು. ಸಂಪೂರ್ಣ ಹೊಲ ಹಾಳಾಗುತ್ತಿರುವುದನ್ನು ಕಂಡ ರೈತ, ಎರಡೂವರೆ ಎಕರೆ ಜಮೀನಿನಲ್ಲಿನ ಸಂಪೂರ್ಣ ಮೆಕ್ಕೆಜೋಳ ಫಸಲನ್ನು ಟ್ರ್ಯಾಕ್ಟರ್‌ ಕುಂಟೆ ಬಳಸಿ ನೆಲಸಮಗೊಳಿಸಿದ್ದಾರೆ.

ಎರಡೆರಡು ಬಿತ್ತನೆ ಮಾಡುತ್ತಿರುವ ತಮಗೆ ಸಾಲದ ಶೂಲಕ್ಕೆ ತಳ್ಳುವಂತೆ ಮಾಡಿದೆ. ಸರಿಯಾದ ಕೀಟನಾಶಕಗಳು ಸಿಗುತ್ತಿಲ್ಲ.ಬೆಳೆ ನಾಶಪಡಿಸಿದರೂ ಏನಾಗಿದೆ ನಿನಗೆ ಎಂದು ಕೇಳುವವರೇ ಇಲ್ಲದಂತಾಗಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ಮೆಕ್ಕೆಜೋಳ ಬೆಳೆ ಬೆಳೆಯುವುದೇ ದುಬಾರಿಯಾಗಿದೆ ಎಂದು ರೈತ ಕುಬೇಂದ್ರ ಗೌಡ ಅಳಲು ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next