Advertisement

ಆನೆ ಹಾವಳಿಯಿಂದ ವಿವಿಧ ಬೆಳೆ ನಾಶ

04:59 AM May 14, 2020 | Lakshmi GovindaRaj |

ಹುಣಸೂರು: ನೇರಳಕುಪ್ಪೆ ಗ್ರಾಮದ ತೋಟದ ಮನೆ ಮೇಲೆ ದಾಳಿ ಮಾಡಿರುವ ಆನೆ, ಛಾವಣಿ ಕಿತ್ತು ಹಾಕಿದೆ. ಅಲ್ಲದೆ, ಬಾಳೆ, ತೆಂಗು, ಅಡಿಕೆ ಮರ, ಮೆಣಸಿನ ಬಳ್ಳಿಯನ್ನು ನಾಶ ಮಾಡಿದೆ.

Advertisement

ತಾಲೂಕಿನ ನೇರಳಕುಪ್ಪೆ ಗ್ರಾಮದ ಗುರುರಾಜ್‌,  ಕಮಲಮ್ಮ, ಶಂಕರ ಗೀತಾ, ನಾಗರಾಜ್‌ರ ತೋಟಕ್ಕೆ ದಾಳಿ ಇಟ್ಟ ಆನೆ ಮಾವಿನಕಾಯಿಗಳನ್ನು ಕಿತ್ತು ತಿಂದು ಹಾಕಿದೆ. ಗುರುರಾಜ್‌ಗೆ ಸೇರಿದ ಬಾಳೆ, ಅಡಿಕೆ, ತೆಂಗಿನ ಸಸಿಗಳು, ಕಮಲಮ್ಮನವರ ಜಮೀನಿನಲ್ಲಿದ್ದ ಜೋಳ, ಮೇವಿನ ಹುಲ್ಲು,  ಶಂಕರ ಗೀತಾ ಅರವರ ತೋಟದಲ್ಲಿ ಬಾಳೆ, ಕಾಫಿ, ಹಲಸಿನ ಮರವನ್ನು ನಾಶ ಮಾಡಿದೆ.

ಅಲ್ಲದೆ, ಕಮಲಮ್ಮ ಅವರ ಜಮೀನಿನಲ್ಲಿದ್ದ ಪೈಪ್‌ ಗಳನ್ನು ಹಾಳು ಮಾಡಿದೆ. ಕಾಳಬೋಚನಹಳ್ಳಿಯ ರವಿಕುಮಾರ್‌ರ ಬಾಳೆ ಬೆಳೆ ಹಾಗೂ  ಜಮೀನಿಗೆ ಅಳವಡಿಸಿದ್ದ ತಂತಿಬೇಲಿಯನ್ನು ನಾಶಪಡಿಸಿದೆ.

ವಾಸದ ಮನೆ ಮೇಲೆ ದಾಳಿ: ನೇರಳಕುಪ್ಪೆ ಗ್ರಾಮದ ಕಮಲಮ್ಮ ಜಮೀನಿನಲ್ಲಿ ವಾಸವಿರುವ ಮನೆ ಮೇಲೆ ದಾಳಿ ಮಾಡಿದ್ದು, ಮನೆಗೆ ಹಾನಿಯಾಗಿದೆ. ಹಲಸಿನ ಕಾಯಿ ತಿನ್ನುತ್ತಿದ್ದ ವೇಳೆ ಮನೆ ಮುಂದೆ ನಾಯಿಯ ಶಬ್ಧ ಕೇಳಿ ಮನೆಯ  ಮೆಲ್ಚಾವಣಿಯನ್ನೇ ನಾಶ ಪಡಿಸಿದೆ. ಘಟನಾ ಸ್ಥಳಕ್ಕೆ ಹುಣಸೂರು ವಲಯದ ಡಿ.ಆರ್‌. ಎಫ್‌.ಒ ವೀರಭದ್ರಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next