Advertisement
ಸಾಕಷ್ಟು ಸಾಲ ಸೋಲ ಮಾಡಿ ಈರುಳ್ಳಿ ಬೆಳೆದು ಲಾಭ ಮಾಡಿಕೊಳ್ಳಬೇಕು. ತನ್ನ ಕುಟುಂಬವನ್ನು ನೆಮ್ಮದಿಯಿಂದ ಇರಿಸಬೇಕು ಎನ್ನುವ ಈ ರೈತರ ಕನಸು ನುಚ್ಚು ನೂರಾಗಿ ನಿರಾಸೆಯ ಕಾರ್ಮೋಡ ಅವರನ್ನಾವರಿಸಿದೆ.
Related Articles
Advertisement
ಈ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಪ್ರತಿನಿಧಿಗಳು ಕೂಡಲೇ ಇಂಥ ಹೊಲಗಳಿಗೆ ಭೇಟಿ ನೀಡಿ ಹಾನಿಯ ವರದಿ ತಯಾರಿಸಿ ಸರ್ಕಾರಕ್ಕೆ ಕಳಿಸಿಕೊಟ್ಟಲ್ಲಿ ಅಲ್ಪ ಸ್ವಲ್ಪ ಪರಿಹಾರ ಸಿಕ್ಕರೆ ಮುಂದಿನ ಯೋಜನೆ, ಯೋಚನೆಗೆ ಸಹಕಾರಿಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು : ಎತ್ತಿನಭುಜದಲ್ಲಿದೆ ಕಾಡಾನೆ ಹಿಂಡು, ಪ್ರವಾಸಿಗರೇ, ಎಚ್ಚರ
ನನ್ನ 3 ಎಕರೆ ಹೊಲದಲ್ಲಿನ ಈರುಳ್ಳಿ ಕೊಳೆ ರೋಗದಿಂದ ಸಂಪೂರ್ಣ ಹಾನಿಯಾಗಿದೆ. ಸಾಲ ಮಾಡಿ ಕಾಲ ಕಾಲಕ್ಕೆ ಗೊಬ್ಬರ, ಕೀಟನಾಶಕ ಕೊಟ್ಟರೂ ಬೆಳೆ ಫಲವತ್ತಾಗಿ ಬೆಳೆಯುತ್ತಿಲ್ಲ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು, ಅವರ ಪ್ರತಿನಿಧಿಗಳು ಕಾಲ ಕಾಲಕ್ಕೆ ಹೊಲಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಕಣ್ಣಾರೆ ಕಂಡು ನೆರವಿಗೆ ಧಾವಿಸಬೇಕು. ಇಲ್ಲವಾದಲ್ಲಿ ಬಡ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು. -ಮಲ್ಲಣ್ಣ ಗುರಡ್ಡಿ, ನೊಂದ ರೈತ, ಇಂಗಳಗೇರಿ
ನಮ್ಮ ಭಾಗದಲ್ಲಿ ಹೆಚ್ಚು ಮಳೆ ಆಗಿಲ್ಲ. ಈರುಳ್ಳಿ ಹಾನಿ ಬಗ್ಗೆ ವರದಿಯೂ ಆಗಿಲ್ಲ. ಈಗ ಬಂದಿರುವುದು ಕೊಳೆ ರೋಗ ಅಲ್ಲದಿರಬಹುದು. ಬಸವನಬಾಗೇವಾಡಿ ತಾಲೂಕಲ್ಲಿ ಹೊಸ ರೋಗ ಈರುಳ್ಳಿಗೆ ಬಂದಿದೆ. ಬಹುಶಃ ಇಂಗಳಗೇರಿಯಲ್ಲೂ ಅದೇ ಇರಬಹುದು. ಈ ಬಗ್ಗೆ ಸ್ಥಳಕ್ಕೆ ಸಂಬಂಧಿಸಿದವರನ್ನು ಕಳಿಸಿ ಪರಿಶೀಲನೆ ನಡೆಸಿ ವರದಿ ತರಿಸಿಕೊಂಡು ಮೇಲಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ಇಂಥ ಸಮಸ್ಯೆ ಎಲ್ಲಿಯಾದರೂ ಇದ್ದರೆ ರೈತರು ನನ್ನ (ಮೋ:9972719844) ಗಮನಕ್ಕೆ ಕೂಡಲೇ ತರಬೇಕು. -ಸುಭಾಷ್ ಟಾಕಳಿ ಸಹಾಯಕ ತೋಟಗಾರಿಕೆ ನಿರ್ದೇಶಕ, ಮುದ್ದೇಬಿಹಾಳ
ನಮ್ಮ ಭಾಗದಲ್ಲಿ 20 ದಿನಗಳಿಂದ ಮಳೆ ಇಲ್ಲ. ಹೀಗಾಗಿ ಮಳೆಯಿಂದ ಹಾನಿ ಸಂಭವಿಸಿಲ್ಲದಿರಬುಹುದು. ಬೇರೆ ಏನೋ ಕಾರಣ ಇರಬಹುದು. ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ವರದಿ ತರಿಸಿಕೊಂಡು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. -ಬಿ.ಎಸ್. ಕಡಕಭಾವಿ ತಹಶೀಲ್ದಾರ್, ಮುದ್ದೇಬಿಹಾಳ
-ಡಿ.ಬಿ. ವಡವಡಗಿ