Advertisement

ಲಾಕ್ ಡೌನ್ ದಿಂದಾಗಿ ದರ ಕುಸಿತ: ಕೋತಂಬರಿ ಬೆಳೆ ಮೇಲೆ ಟ್ರ್ಯಾಕ್ಟರ್ ಹಾಯಿಸಿದ ರೈತ

08:07 PM May 30, 2021 | Team Udayavani |

ಬೆಳಗಾವಿ: ಲಾಕ್‌ಡೌನ್‌ದಿಂದಾಗಿ ತರಕಾರಿ ಬೆಲೆ ಪಾತಾಳ ಕಂಡಿದ್ದು, ಕೋತಂಬರಿಗೆ ಸೂಕ್ತ ದರ ಸಿಗದೇ ರೈತರು ಕಂಗಾಲಾಗಿದ್ದಾರೆ.

Advertisement

ತಾಲೂಕಿನ ಕಣಬರ್ಗಿಯ ರೈತನೋರ್ವ ತಾನು ಬೆಳೆದ ಒಂದು ಎಕರೆ ಕೋತಂಬರಿ ಬೆಳೆಯ ಮೇಲೆ ಟ್ರ್ಯಾಕ್ಟರ್ ಹಾಯಿಸಿ ನಾಶಗೊಳಿಸಿ ತನ್ನ ಅಸಮಾಧಾನ, ಅಸಹಾಯಕತೆ ಹೊರ ಹಾಕಿದ್ದಾರೆ.

ಕಳೆದ ಒಂದು ತಿಂಗಳಿಂದ ಲಾಕ್‌ಡೌನ್‌ದಿಂದಾಗಿ ತರಕಾರಿಗಳನ್ನು ಕೊಂಡುಕೊಳ್ಳುವವರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ದರ ಕುಸಿತದಿಂದ ಕಣಬರ್ಗಿಯ ಶಿವಾಜಿ ಮಲಾಯಿ ಎಂಬ ರೈತರು ತಾವು ಬೆಳೆದಿದ್ದ ಕೋತಂಬರಿ ಬೆಳೆ ನೆಲಸಮ ಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ತರಕಾರಿಯ ದರ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆಗೆ ಕೃಷಿ ಉತ್ಪನನಗಳನ್ನು ತೆಗೆದುಕೊಂಡು ಹೋದರೆ ದರ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿಯೇ ತರಕಾರಿ ರಸ್ತೆಗೆ ಚೆಲ್ಲಿದ ಉದಾಹರಣೆಗಳು ಬಹಳಷ್ಟಿವೆ. ಹೀಗಾಗಿ ರೈತರು ನಿರಾಶರಾಗಿದ್ದಾರೆ. ಕೋತಂಬರಿ ಬೆಳೆಯಂತೂ ಕೇಳುವವರೂ ಇಲ್ಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next