Advertisement

ಬಿರುಗಾಳಿ ಮಳೆಗೆ ಬಾಳೆ ಫ‌ಸಲು ನಾಶ

03:06 PM Apr 17, 2021 | Team Udayavani |

ಕನಕಪುರ: ಬಿರುಗಾಳಿ ಮಳೆಗೆ ರೈತಬೆಳೆದಿದ್ದ 3 ಎಕರೆ ಕಟಾವಿಗೆ ಬಂದಿದ್ದಬಾಳೆ ಫ‌ಸಲು ನೆಲಕಚ್ಚಿರುವ ಘಟನೆಸೀಗೆಕೋಟೆ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಕಸಬಾ ಹೋಬಳಿಯಸೀಗೆಕೋಟೆ ಗ್ರಾಮದ ಸುಜಯಮೂರ್ತಿಎಂಬುವರಿಗೆ ಸೇರಿದ ಬಾಳೆ ಫ‌ಸಲುಗುರುವಾರ ಸಂಜೆ ಬೀಸಿದ ಬಿರುಗಾಳಿಸಹಿತ ಮಳೆಗೆ ಸಮೃದ್ಧವಾಗಿ ಬೆಳೆದಿದ್ದಬಾಳೆ ಗಿಡಗಳು ಮುರಿದುಬಿದ್ದಿವೆ.

Advertisement

ಹೆಚ್ಚುಆದಾಯ ಬರುವ ನಿರೀಕ್ಷೆಇಟ್ಟುಕೊಂಡಿದ್ದ ರೈತ ಬೆಳೆ ಕಳೆದುಕೊಂಡುಕಂಗಾಲಾಗಿ ದಿಕ್ಕುತೋಚದಂತಾಗಿದೆ.ಸೀಗೆಕೋಟೆ ಗ್ರಾಮದ ರೈತ ಸುಜಯಮೂರ್ತಿ ತಮ್ಮ ಮೂರು ಎಕರೆಜಾಗದಲ್ಲಿ ಲಕ್ಷಾಂತರ ಬಂಡವಾಳ ಹೂಡಿಬಾಳೆ ಗಿಡಗಳನ್ನು ಹಾಕಿದ್ದರು ಬೇಸಿಗೆಆರಂಭವಾಗಿದ್ದು ನೀರಿನಕೊರತೆಯಿದ್ದರೂ ಅಕ್ಕಪಕ್ಕದ ರೈತರಪಂಪ್ಸೆಟ್‌ ಗಳಿಂದ ನೀರನ್ನು ಎರವಲುಪಡೆದು ಹೆಚ್ಚಿನ ಮುತುವರ್ಜಿವಹಿಸಿದ್ದರು.

ಬಾಳೆ ಗಿಡಗಳುಸಮೃದ್ಧವಾಗಿ ಬೆಳೆದು ಗೊನೆ ಬಿಟ್ಟಿದ್ದವುಕೆಲವೇ ದಿನಗಳಲ್ಲಿ ಬಾಳೆಗೊನೆಗಳನ್ನುಕಟಾವು ಮಾಡಿ ಸಾವಿರಾರು ರೂಆದಾಯ ಮಾಡುವ ನಿರೀಕ್ಷೆಯಲ್ಲಿದ್ದರೈತನ ಲೆಕ್ಕಾಚಾರವನ್ನು ಬಿರುಗಾಳಿ ಸಹಿತಮಳೆ ಎಲ್ಲವನ್ನು ತಲೆಕೆಳಗು ಮಾಡಿದೆಗುರುವಾರ ಸಂಜೆ ಏಕಾಏಕಿ ಬಂದಬಿರುಗಾಳಿಗೆ ಸುಮಾರು ಮೂರು ಎಕರೆಜಾಗದಲ್ಲಿ ಬೆಳೆದಿದ್ದ ಬಾಳೆಗಿಡಗಳುನೆಲಕ್ಕುರುಳಿವೆ ಬಾಳೆ ಬೆಳೆಯಿಂದಆದಾಯ ನಿರೀಕ್ಷಿಸುತ್ತಿದ್ದ ರೈತ ಸುಜಯಮೂರ್ತಿಗೆ ಹಾಕಿದ ಬಂಡವಾಳವೂ ಕೈತಪ್ಪಿದೆ.

ಇದರಿಂದ ರೈತ ಸುಜಯಮೂರ್ತಿ ಬೆಳೆ ಕಳೆದುಕೊಂಡುಕಂಗಾಲಾಗಿ ದಿಕ್ಕುತೋಚದಂತಾಗಿರುವರೈತ ಪರಿಹಾರದ ನಿರೀಕ್ಷೆಯಲ್ಲಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next