Advertisement

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼ ಹೊಸ ರಿಲೀಸ್‌ ಡೇಟ್‌ ಅನೌನ್ಸ್  

02:55 PM Oct 24, 2024 | Team Udayavani |

ಹೈದರಾಬಾದ್:‌ ವರ್ಷದ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ʼಪುಷ್ಪ-2ʼ (Pushpa 2: The Rule) ಸಿನಿಮಾದ ಹೊಸ ರಿಲೀಸ್‌ ಡೇಟ್‌ ಅನೌನ್ಸ್ ಆಗಿದೆ.

Advertisement

ಅಲ್ಲು ಅರ್ಜುನ್ (Allu Arjun‌) ‌ ಅವರ ಅವರ ಖಡಕ್‌ ಲುಕ್‌ವುಳ್ಳ ಹೊಸ ಪೋಸ್ಟರ್‌ ರಿಲೀಸ್‌ ಮಾಡಿ ಚಿತ್ರತಂಡ ನ್ಯೂ ರಿಲೀಸ್‌ ಡೇಟ್‌ ರಿವೀಲ್‌ ಮಾಡಿದೆ.

ಹಾಡು ಹಾಗೂ ಟೀಸರ್‌ನಿಂದ ಸಖತ್‌ ಸದ್ದು ಮಾಡಿದ ʼಪುಷ್ಪ-2ʼ ಈಗ ಒಂದೊಂದೇ ರಿಲೀಸ್‌ ಪೋಸ್ಟರ್‌ ಬಿಟ್ಟು ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸುತ್ತಿದೆ.

ಇದನ್ನೂ ಓದಿ: ‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

ಸುಕುಮಾರ್‌ (Sukumar) ನಿರ್ದೇಶನದ ʼಪುಷ್ಪ-2ʼ ರಿಲೀಸ್‌ಗೂ ಮುನ್ನ ಡಿಜಿಟಲ್ ಹಕ್ಕುಗಳು ,ಸ್ಯಾಟ್‌ ಲೈಟ್ ಹಕ್ಕುಗಳು, ಥಿಯೇಟ್ರಿಕಲ್ ಹಕ್ಕುಗಳಿಂದ ಒಟ್ಟು 1000 ಕೋಟಿ ರೂ.ಗಳಿಸಿದೆ ಎಂದು ವರದಿಯಾಗಿದೆ.

Advertisement

ಈ ನಡುವೆ ಗುರುವಾರ (ಅ.24ರಂದು) ಹೈದರಾಬಾದ್‌ನಲ್ಲಿ ಪ್ರೆಸ್‌ ಮೀಟ್‌ ನಡೆಸಿದ ಚಿತ್ರತಂಡ ಸಿನಿಮಾ ಡಿಸೆಂಬರ್‌ 5 ರಂದು ವರ್ಲ್ಡ್‌ ವೈಡ್‌ ರಿಲೀಸ್‌ ಆಗಲಿದೆ ಎಂದು ಹೇಳಿದೆ. ಡಿಸೆಂಬರ್‌ 4 ರಂದು ವಿದೇಶದಲ್ಲಿ ಪ್ರಿಮಿಯರ್‌ ಶೋ ನಡೆಯಲಿದೆ ಎಂದು ಚಿತ್ರತಂಡ ಹೇಳಿದೆ.

ಪುಷ್ಪ-2 ಮೊದಲು ಇದೇ ವರ್ಷದ ಏಪ್ರಿಲ್‌ ನಲ್ಲಿ ರಿಲೀಸ್‌ ಆಗಬೇಕಿತ್ತು. ಆದಾದ ಬಳಿಕ ಆಗಸ್ಟ್‌ 15ರಂದು ರಿಲೀಸ್‌ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಅಲ್ಲಿಂದಲೂ ಮುಂದೂಡಿಕೆ ಆಗಿ ಡಿಸೆಂಬರ್‌ 6 ರಂದು ರಿಲೀಸ್‌ ಆಗುತ್ತದೆ ಎಂದು ಹೇಳಲಾಗಿತ್ತು. ಇದೀಗ ಡಿಸೆಂಬರ್‌ 5 ಅಂದರೆ ಮೊದಲಿನ ದಿನಕ್ಕಿಂತ ಒಂದು ದಿನ ಮೊದಲೇ ಸಿನಿಮಾ ರಿಲೀಸ್‌ ಆಗಲಿದೆ.

ಅಂದಾಜು 500 ಕೋಟಿ ರೂ. ಬಜೆಟ್‌ ನಲ್ಲಿ ತಯರಾಗಿರುವ ʼಪುಷ್ಪ-2ʼ ಸಿನಿಮಾದಲ್ಲಿ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ, ಫಾಹದ್‌ ಫಾಸಿಲ್‌, ಸುನೀಲ್‌, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು ಮತ್ತು ಪ್ರಕಾಶ್ ರಾಜ್ ಮುಂತಾದವರು ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next