Advertisement

World Cup: ರೋಚಕ ಪಂದ್ಯದಲ್ಲಿ ಸೋತರೂ ಅಫ್ಘಾನ್‌ಗಿದೆ ಸೆಮೀಸ್‌ ಅವಕಾಶ; ಹೀಗಿದೆ ಲೆಕ್ಕಚಾರ

10:33 AM Nov 08, 2023 | Team Udayavani |

ಮುಂಬಯಿ: ಮಂಗಳವಾರ ನಡೆದ ಆಸೀಸ್‌ – ಅಘ್ಘಾನ್ ವಿಶ್ವಕಪ್‌‌ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ತನ್ನ ಕ್ರಿಕೆಟ್‌ ವೃತ್ತಿ ಜೀವನದಲ್ಲೇ ಸರ್ವಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಗ್ಲೆನ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ವಿಶ್ವಕಪ್‌ ಟೂರ್ನಿಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಆ ಮೂಲಕ ತನ್ನ ತಂಡವನ್ನು ಸೆಮೀಸ್‌ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ.

Advertisement

ಮಹತ್ವದ ಪಂದ್ಯದಲ್ಲಿ ಮೊದಲು ಟಾಸ್‌ ಗೆದ್ದು ಅಫ್ಘಾನ್‌ ತಂಡ ಬ್ಯಾಟಿಂಗ್‌ ಮಾಡಿತು. ಇಬ್ರಾಹಿಂ ಜದ್ರಾನ್‌ ಅವರ ಭರ್ಜರಿ 129 ರನ್‌ ಗಳ ಸಹಾಯದಿಂದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 291 ರನ್‌ ಗಳಿಸಿತು. ಚೇಸ್‌ ಮಾಡಲು ಕ್ರಿಸ್‌ ಗಿಳಿದ ಆಸೀಸ್‌ ಬ್ಯಾಟರ್‌ ಗಳಿಗೆ ಅಫ್ಘಾನ್‌ ವೇಗಿಗಳು ಅಕ್ಷರಶಃ ಆಘಾತವನ್ನೀಡಿದರು. 10 ಓವರ್‌ ಗಳ ಒಳಗೆ ಆಸೀಸ್‌ ವಿಕೆಟ್‌ ಗಳ ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. 91 ರನ್‌ ಗಳಿಗೆ 7 ವಿಕೆಟ್‌ ಕಳೆದುಕೊಂಡ ಕಾಂಗರೂ ಪಡೆಗೆ ಒಂಟಿ ಸಲಗದಂತೆ ಆಸರೆಯಾಗಿ ನಿಂತದ್ದು ಮ್ಯಾಕ್ಸ್‌ ವೆಲ್.‌

ಒಂದು ಕಡೆ ಗಾಯದಿಂದ ಬಳಲುತ್ತಿದ್ದರೂ ಮ್ಯಾಕ್ಸ್‌ವೆಲ್‌ ಬ್ಯಾಟ್‌ ಮಾತ್ರ ಯಾವ ಕಷ್ಟವನ್ನು ಅನುಭವಿಸಿಲ್ಲ. ಮ್ಯಾಕ್ಸ್‌ವೆಲ್‌ 128 ಎಸೆತಗಳಲ್ಲಿ 201 ರನ್‌ ಚಚ್ಚಿದರು. ಇದರಲ್ಲಿ 21 ಬೌಂಡರಿಗಳು, 10 ಸಿಕ್ಸರ್‌ಗಳು ಸೇರಿದ್ದವು. ಅಂತಿಮವಾಗಿ ಆಸೀಸ್‌ 46.5 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 293 ರನ್‌ ಗಳಿಸಿ, ಸೆಮಿಫೈನಲ್‌ ಹಂತಕ್ಕೇರಿತು.

ಗೆಲ್ಲಲೇ ಬೇಕಾದ ಪಂದ್ಯವನ್ನು ಸೋತ ಅಫ್ಘಾನ್‌ ಪಡೆಯ ಸೆಮಿಫೈನಲ್‌ ಹಾದಿ ಬಹುತೇಕ  ಕಲ್ಲುಮುಳ್ಳಿನಂತಾಗಿದೆ. ಆದರೆ ಪಂದ್ಯವನ್ನು ಸೋತರೂ ಆಘ್ಘಾನ್‌ ಪಡೆ ಇನ್ನು ಉಪಾಂತ್ಯಕ್ಕೇರುವ ಸಾಧ್ಯತೆಯಿದೆ.

ಅಘ್ಘಾನಿಸ್ತಾನ ಮುಂದಿನ ಹಾಗೂ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಇಲ್ಲಿ ಗೆಲ್ಲಬೇಕು. ಅದು ಸಾಧಾರಣ ಗೆಲ್ಲುವಾಗಿರಬಾರದು. ದೊಡ್ಡ ಅಂತರದ ಗೆಲುವಾಗಿರಬೇಕು. ರನ್‌ ರೇಟ್‌ ನಲ್ಲಿ ಭಾರೀ ಏರಿಕೆ ಕಾಣಬೇಕಾದರೆ ಸೆಮಿಫೈನಲ್‌ ನಿರೀಕ್ಷೆಯಲ್ಲಿರುವ ಮತ್ತೆರೆಡು ತಂಡಗಳಾಗಿರುವ ನ್ಯೂಜಿಲೆಂಡ್‌ ಹಾಗೂ ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ಸೋಲಬೇಕು. ಒಂದು ವೇಳೆ ಅದು ಸಾಧ್ಯವಾಗಲಿಲ್ಲವೆಂದರೆ ಆಫ್ಘಾನ್‌ ವಿಶ್ವಕಪ್‌ ಪಯಣ ಮುಕ್ತಾಯವಾಗಲಿದೆ.

Advertisement

ಮುಂದಿನ ಪಂದ್ಯಗಳು:

ಆಘ್ಘಾನಿಸ್ತಾನ – ದಕ್ಷಿಣ ಆಫ್ರಿಕಾ (ನ.10 – ಅಹಮದಾಬಾದ್)‌  

ನ್ಯೂಜಿಲೆಂಡ್‌ – ಶ್ರೀಲಂಕಾ (ನ.9 -ಬೆಂಗಳೂರು)

ಪಾಕಿಸ್ತಾನ – ಇಂಗ್ಲೆಂಡ್‌ (ನ.11 – ಕೋಲ್ಕತ್ತಾ)

 

Advertisement

Udayavani is now on Telegram. Click here to join our channel and stay updated with the latest news.

Next