Advertisement

ಉತ್ತಮ ಒರತೆ ಇದ್ದರೂ ಬಳಕೆಯಾಗದ ನೀರು: ಬೇಕಿದೆ ತಡೆಬೇಲಿ

12:36 PM Apr 28, 2017 | Team Udayavani |

ತೆಕ್ಕಟ್ಟೆ (ಕುಂಭಾಶಿ): ಕುಂಭಾಶಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ  ವಿನಾಯಕ ನಗರದ ಆಶ್ರಯ ಕಾಲನಿಯ ಸಾರ್ವಜನಿಕ ಸ್ಥಳದಲ್ಲಿ ತಡೆಗೋಡೆಗಳಿಲ್ಲದ ತೆರೆದ ಬಾವಿ ಅಪಾಯ ಸೃಷ್ಟಿಸುತ್ತಿದೆ. ಅಲ್ಲದೆ  ಈ ಬಾವಿಯಲ್ಲಿ  ಬೇಸಿಗೆಯಲ್ಲಿ  ಅಪಾರ ನೀರಿನ ಸೆಲೆಯನ್ನು ಹೊಂದಿದ್ದರೂ ಸಮರ್ಪಕವಾಗಿ ಬಳಕೆಯಾಗದೆ  ತೀವ್ರ ನಿರ್ಲಕ್ಷéಕ್ಕೆ ಒಳಗಾಗಿದೆ.

Advertisement

ಯಾವುದೇ ತಡೆಗೋಡೆಗಳಿಲ್ಲ 
ಸುಮಾರು 25 ವರ್ಷಗಳ ಹಿಂದೆ  ಜಿಲ್ಲಾ ಪಂಚಾಯತ್‌ ಅನುದಾನದಲ್ಲಿ  ಸಂಪೂರ್ಣ ಶಿಲೆಕಲ್ಲಿನ ಗೋಡೆಯಿಂದ ನಿರ್ಮಾಣಗೊಂಡಿರುವ  ಬಾವಿ ಈ ಹಿಂದೆ ಗೋಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಪಂಪ್‌ಗ್ಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು ಪ್ರಸ್ತುತ ಗೋಪಾಡಿ ಗ್ರಾಮದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ .

ಅಪಾಯದ ಮಟ್ಟದಲ್ಲಿದೆ ಬಾವಿ
ಪ್ರಸ್ತುತ ಈ ಬಾವಿಯಲ್ಲಿ ಅಪಾರ ಪ್ರಮಾಣದ ನೀರುಗಳಿದ್ದರೂ ಸಮರ್ಪಕ ಬಳಕೆ ಹಾಗೂ ನಿರ್ವಹಣೆಗಳಿಲ್ಲದೇ ಇರುವುದರಿಂದ  ಬಾವಿಯ ಕಲ್ಲು ಜರಿಯುತ್ತಿದ್ದು  ಅಪಾಯದ ಮಟ್ಟವನ್ನು ತಲುಪಿದೆ ಅಲ್ಲದೆ ಮಳೆಗಾಲದ ಸಂದರ್ಭದಲ್ಲಿ ಸುತ್ತಮುತ್ತಲಿನ ಮನೆಗಳಿಗೂ ತೊಂದರೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಬಾವಿಯ ಪುನಶ್ಚೇತನ ಕಾರ್ಯಕ್ಕೆ  ಮುಂದಾಗಬೇಕಾದ ಅನಿವಾರ್ಯತೆ ಇದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಮರ್ಪಕವಾಗಿ ಬಳಕೆಯಾಗದ ನೀರು
ಹೆಚ್ಚಿದ ತಾಪಮಾನ ಅಂತರ್ಜಲ ಕುಸಿತವಾಗಿದ್ದರೂ  ಕೂಡ ವಿನಾಯಕ ನಗರದ ಆಶ್ರಯ ಕಾಲನಿಯ ಭೌಗೋಳಿಕವಾಗಿ ಅಧ್ಯಯನಗೈದು ಸುಮಾರು 30 ಅಡಿ ಆಳದ 15 ಅಡಿ ವಿಸ್ತೀರ್ಣದಲ್ಲಿ ಸಂಪೂರ್ಣ ಶಿಲೆಗಲ್ಲಿನಿಂದ ನಿರ್ಮಾಣಗೊಂಡಿರುವ ಈ ಬಾವಿಯಲ್ಲಿ  ಬೇಸಿಗೆಯಲ್ಲಿಯೂ ಅಪಾರ ನೀರು ಸಂಗ್ರಹವಾಗಿದ್ದರೂ ಸಮೀಪದ ನಾಲ್ಕೈದು ಮನೆಯವರು ಮಹಿಳೆಯರು ಅಪಾಯದ ನಡುವೆ ನೀರು ಸೇದಿಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಸುಮಾರು 20 ವರ್ಷಗಳಿಂದಲೂ ಈ ಬಾವಿಯ ನೀರನ್ನು ದಿನ ಬಳಕೆಗಾಗಿ ಬಳಸುತ್ತಿದ್ದೇವೆ. ಆದರೆ ಬಾವಿಯ ಕಲ್ಲು ಜರಿತದಿಂದಾಗಿ  ಅಪಾಯದ ಸ್ಥಿತಿಯಲ್ಲಿದ್ದು ಅನತಿ ದೂರದಲ್ಲಿರುವ ನಮ್ಮ ಮನೆೆ ಮಳೆಗಾಲ ಸಂದರ್ಭದಲ್ಲಿ ಸಂಭವನೀಯ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ . ಬಾವಿಗೆ ಯಾವುದೇ ತೆ‌ರನಾದ ತಡೆಗೋಡೆಗಳಿಲ್ಲದ ಕಾರಣ ಈ ಪರಿಸರದಲ್ಲಿ ನಿತ್ಯ ಸಂಚರಿಸುವ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಅಪಾಯದ ನಡುವೆ ಸಂಚರಿಸಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟ  ಸ್ಥಳೀಯಾಡಳಿತ ತತ್‌ಕ್ಷಣವೇ ಕ್ರಮ ಕೈಗೊಳ್ಳಬೇಕು.
– ಪ್ರೇಮಾ ಮೊಗವೀರ, ಸ್ಥಳೀಯ ನಿವಾಸಿಗಳು

Advertisement

– ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next