Advertisement
ಪ್ರಜ್ಞಾವಂತರು ಖಂಡಿಸಬೇಕುವಿಜಯಪುರದಲ್ಲಿ ಶೋಷಿತ ವರ್ಗದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಈ ಘಟನೆಗೆ ಕಾಂಗ್ರೆಸ್ ಖಂಡನೆ ವ್ಯಕ್ತಪಡಿಸುತ್ತದೆ. ಇದನ್ನು ಖಂಡಿಸ ಬೇಕಾಗಿರುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ. ಶೋಷಣೆಗೆ ಅವಕಾಶ ನೀಡಬಾರದು ಎಂದು ಕರೆ ಕೊಟ್ಟರು.
ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ, ದಲಿತ ಬಾಲಕಿಯ ಹತ್ಯೆ ಮಾಡಿರುವುದು ಬಿಜೆಪಿ ಕಾರ್ಯಕರ್ತ ಎನ್ನುವುದು ಮಾಧ್ಯಮದಲ್ಲಿ ಪ್ರಕಟವಾಗಿದೆ. ಇದನ್ನು ಮುಚ್ಚಿ ಹಾಕುವ ಕೆಲಸ ನಡೆಯುತ್ತಿದೆ. ಆರೋಪಿಗೆ ಕಠಿನ ಶಿಕ್ಷೆ ವಿಧಿಸಬೇಕು. ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಬೊಬ್ಬಿಡುವ ಬಿಜೆಪಿ, ಮುಸ್ಲಿಂ ಯುವಕರ ಹತ್ಯೆಯ ಬಗ್ಗೆ ಏಕೆ ಮಾತನಾಡುವುದಿಲ್ಲ? ಇಲ್ಲಿ ಕೆಎಫ್‌ಡಿ ಎನ್ನುವುದು ವಿಚಾರವೇ ಅಲ್ಲ ಎಂದರು. ಅಲ್ಪಸಂಖ್ಯಾಕ ವಿಭಾಗದ ಇಸಾಕ್ ಸಾಲ್ಮರ ಮಾತನಾಡಿ, ಸಂಪ್ಯ ಠಾಣೆಯಲ್ಲಿ ದೌರ್ಜನ್ಯ ನಡೆದಿದ್ದರೆ ದೂರು ನೀಡಬೇಕು. ಅದು ಬಿಟ್ಟು ಕಾಂಗ್ರೆಸ್‌ನ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.
Related Articles
ಮದ್ಯಪಾನ ಸಂಯಮ ಮಂಡಳಿ ರಾಜ್ಯ ಸದಸ್ಯ ಭಾಸ್ಕರ ಕೋಡಿಂಬಾಳ ಮಾತನಾಡಿ, ದಲಿತ ವರ್ಗವನ್ನು ಮುಖ್ಯ
ವಾಹಿನಿಗೆ ತರಲು ಕಾಂಗ್ರೆಸ್ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದೀಗ ಕೇಂದ್ರ ಸರಕಾರ ಸಂವಿಧಾನವನ್ನು
ಬದಲಾಯಿಸಲು ಹೊರಟಿರುವುದು ಜನತೆಗೆ ಮಾಡುತ್ತಿರುವ ಅಪಚಾರ. ಕೋಮುವಾದ ಮಾಡಿದರೆ ದೊಡ್ಡ ಹುದ್ದೆ ನೀಡುತ್ತಾರೆ ಎಂಬುದು ಯೋಗಿ ಆದಿತ್ಯನಾಥ್ ಅವರ ವಿಚಾರದಲ್ಲಿ ರುಜುವಾತಾಗಿದೆ. ಇದನ್ನೇ ಪ್ರೇರಣೆಯಾಗಿಟ್ಟುಕೊಂಡು, ಅನಂತ ಕುಮಾರ್ ಹೆಗಡೆ ಮುಂದುವರಿಯುತ್ತಿದ್ದಾರೆ. ಅವರಿಗೂ ಸಿಎಂ
ಪಟ್ಟದ ಮೇಲೆ ಕಣ್ಣಿರಬೇಕು ಎಂದು ಅಭಿಪ್ರಾಯಿಸಿದರು.
Advertisement
ಪುತ್ತೂರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಮನವಿ ಪತ್ರ ವಾಚಿಸಿದರು. ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಕಾಂಗ್ರೆಸ್ ಜಿಲ್ಲಾ ಪ್ರ. ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ನಗರ ಅಧ್ಯಕ್ಷೆ ವಿಲ್ಮಾ ಡಿಸೋಜಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯಾಕೂಬ್ ದರ್ಬೆ ಉಪಸ್ಥಿತರಿದ್ದರು. ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ರಾಮ ಮೇನಾಲ ಕಾರ್ಯಕ್ರಮ ನಿರೂಪಿಸಿದರು.
ಪಟ್ಟಿ ಏಕೆ ನೀಡುತ್ತಿಲ್ಲ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು ಮಾತನಾಡಿ, ಶೋಭಾ ಕರಂದ್ಲಾಜೆ ವಿಜಯಪುರ ಘಟನೆಯ
ಬಗ್ಗೆ ಮೌನ ವಹಿಸಿದ್ದಾರೆ. ದುಡ್ಡು ಕೊಟ್ಟು ಕುಟುಂಬದವರಿಗೆ ಸಾಂತ್ವನ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಅವರು ಅರಿತು ಕೊಳ್ಳಬೇಕು. ಹಿಂದೂ ಹತ್ಯೆಯ ಪಟ್ಟಿ ನೀಡುವ ನೀವು, ಮುಸ್ಲಿಮರ ಹತ್ಯೆಯ ಪಟ್ಟಿ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.