Advertisement
ಶಿಕ್ಷಣ ಮತ್ತು ಶಿಕ್ಷಕರು ದೇಶದ ಅತ್ಯಂತ ಅಮೂಲ್ಯವಾದ ಆಸ್ತಿಗಳು. ಭಾರತವು ನಿರಂತರವಾಗಿ ಶಿಕ್ಷಣ ಮತ್ತು ಗುರುಗಳನ್ನು ವಿಶೇಷ ಗೌರವದಿಂದ ಕಾಣುತ್ತಿದೆ, ಮತ್ತು ಶ್ರೇಷ್ಠ ಗುರು ಪರಂಪರೆಯನ್ನು ಹೊಂದಿದೆ. ಜೀವನದಲ್ಲಿ ಗುರು-ಗುರಿಯಿರಬೇಕು ಎಂಬ ಮಾತನ್ನು ಕೇಳಿರಬಹುದು. ಗುರಿಯ ಬೃಹಾದಾಕಾರವು ಸಾಧಿಸಲು ಗುರುವಿನ ಮಾರ್ಗದರ್ಶನದಿಂದ ಗುಲಗುಂಜಿಯಾಗುವುದೇ. ಗುರು ಎಲ್ಲವನ್ನೂ ಹೇಳಿಕೊಡುವ ವ್ಯಕ್ತಿ. ನಾವು ಸಾಧ್ಯವಾದರೆ ಸಬಲವನ್ನೂ ಕಲಿಸಲು ತಯಾರಿರುವ ವ್ಯಕ್ತಿ ಹಾಗೂ ಮಾರ್ಗವನ್ನು ಬೆಳಗಿಸುವ ದೀಪದಂತೆ ಗುರುಗಳು ನಮ್ಮನ್ನು ಯಶಸ್ಸಿನತ್ತ ಕರೆದೊಯ್ಯುತ್ತಾರೆ. ನಾವು ಅನುಸರಿಸುವ ಮೊದಲ ವ್ಯಕ್ತಿಯೂ ಗುರು.
Related Articles
Advertisement
ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯದ ಒಳನುಸುಳುವಿಕೆಯು ಅದರ ಪಥದಲ್ಲಿ ಆಳವಾದ ಬದಲಾವಣೆಯನ್ನು ಉಂಟುಮಾಡಿದೆ. ಬದಲಾಗುತ್ತಿರುವ ಈ ಶೈಕ್ಷಣಿಕ ದೃಷ್ಟಿಕೋನಗಳ ನಡುವೆ, ಶಿಕ್ಷಕರು ನಿಜವಾದ ಹೊರೆಯನ್ನು ಹೊರುತ್ತಾರೆ. ಶಿಕ್ಷಕನಾಗಿರುವುದು ಖಂಡಿತ ಅತ್ಯಂತ ಕಠಿನ ಮತ್ತು ಸವಾಲಿನ ಪಾತ್ರ.
ಸಮಕಾಲೀನ ಶಿಕ್ಷಣ ವ್ಯವಸ್ಥೆಯು ಶಿಕ್ಷಕರನ್ನು ನಿಷ್ಕ್ರಿಯ ಸ್ಥಿತಿಯಲ್ಲಿರಿಸಿದೆ. ಮೊದಲೆಲ್ಲಾ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷಕರು ಪೆಟ್ಟು ನೀಡಿ ತಿದ್ದಿದರೆ ಯಾರು ಏನು ಹೇಳುತ್ತಿರಲಿಲ್ಲ. ಆದರೆ ಈಗ ಪೆಟ್ಟು ಕೊಡುವುದೇ ಅಪರಾಧವೆಂಬಂತೆ ಆಗಿದೆ.
ಒಟ್ಟಾರೆಯಾಗಿ ಆಧುನಿಕ ಶಿಕ್ಷಣದ ಚೌಕಟ್ಟು ಶಿಕ್ಷಕರನ್ನು ವಿದ್ಯಾರ್ಥಿಗಳ ಕೈಗೊಂಬೆಗಳಾಗಿ ಪರಿವರ್ತಿಸಿದೆ.
ಒಂದೆರಡು ತಿಂಗಳ ಹಿಂದೆ, ಇಂಗ್ಲೆಂಡ್‌ನ ಗ್ಲೌಸೆಸ್ಟನರ್‌ಲ್ಲಿರುವ ಶಾಲೆಯೊಂದರಲ್ಲಿ 15 ವರ್ಷದ ಹದಿಹರೆಯದ ಹುಡುಗನು ತನ್ನ ಗಣಿತ ಶಿಕ್ಷಕನಿಗೆ ಚೂರಿಯಿಂದ ಇರಿದ ಘಟನೆಯು ನಡೆದಿತ್ತು. ಇಂತಹ ಘಟನೆಗಳು ಇಲ್ಲಿ ಸಾಮಾನ್ಯವಾಗಿ ನಡೆಯುತ್ತವೆ. ಕುತೂಹಲದಿಂದ ಇಲ್ಲಿರುವ ಅದೇ ಶಾಲೆಯಲ್ಲಿ ಓದುವ ವಿದ್ಯಾರ್ಥಿಯ ಹೆತ್ತವರಲ್ಲಿ ಈ ವಿಚಾರದ ಕುರಿತು ಚರ್ಚಿಸಿದಾಗ ತಿಳಿಯಿತು ಇಂತಹ 4-5 ಘಟನೆಗಳು ಇಂಗ್ಲೆಂಡ್‌ನಲ್ಲಿ ವರುಷಕ್ಕೆ ನಡೆಯುತ್ತಲೇ ಇರುತ್ತದೆ. ಶಿಕ್ಷಕರ ಮೇಲೆ ಪೋಷಕರಿಗೆ ಇರುವ ಅಭಿಪ್ರಾಯಗಳೂ ಈಗ ಬದಲಾಗಿರುವುದನ್ನೂ ನೋಡಬಹುದು. ಇಂತಹುದೇ ಘಟನೆಗಳು ಭಾರತದಲ್ಲೂ ಚಿಗುರೊಡೆಯಲು ಆರಂಭಿಸಿದರೆ ನೈತಿಕತೆಯ ಅಧಃಪತನಕ್ಕೆ ಇನ್ನೇನು ಬೇಕು? ಈ ನಿಟ್ಟಿನಲ್ಲಿ ಶಿಕ್ಷಕ-ಪೋಷಕ ಹಾಗೂ ಇವರನ್ನೊಳಗೊಂಡ ಸಮಾಜ ಆಲೋಚಿಸಬೇಕಾಗಿದೆ.
ಇಂದಿನ ಕಾಲಘಟ್ಟದಲ್ಲಿ ಶಿಕ್ಷಕರು ತಪ್ಪನ್ನು ನೋಡಿ ಸುಮ್ಮನೆ ಕೂರುವಂತಹ ಪರಿಸ್ಥಿತಿಯಲ್ಲಿದ್ದಾರೆ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆಯಲ್ಲಿ ಅನಗತ್ಯ ಗೊಂದಲಗಳು ಎಡತಾಕುವುದೂ ಸಾಮಾನ್ಯವಾಗಿಬಿಟ್ಟಿದೆ. ನಮ್ಮ ನಡವಳಿಕೆಗಳು, ಜೀವನಶೈಲಿ ಮತ್ತು ಇನ್ನೂ ಹೆಚ್ಚಿನವುಗಳ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಶಿಕ್ಷಕರು ಹೊಂದಿದ್ದಾರೆ. ಬದಲಾಗುತ್ತಿರುವ ಜಗತ್ತಿನಲ್ಲಿ ಗುರುವಿನ ಪಾತ್ರ ಮಹತ್ತರದ್ದು. ಚ್ಯಾಟ್ ಎಕಖಗಳು ಗುರುವಾಗಿರುವ ಸನ್ನಿವೇಶದಲ್ಲಿ ಶಿಕ್ಷಕರ ಮುಂದಿರುವ ಸವಾಲುಗಳು ಬೆಟ್ಟದಷ್ಟು.
ಉತ್ತಮ ಶಿಕ್ಷಣ ಮಾತ್ರವಲ್ಲ, ಸಂಸ್ಕಾರ, ದೇಶಭಕ್ತಿ, ಹಿರಿಯರು ಮತ್ತು ಮಾರ್ಗದರ್ಶಕರಿಗೆ ಗೌರವ ಮತ್ತು ಪೋಷಕರ ಮೇಲಿನ ವಾತ್ಸಲ್ಯದಂತಹ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ- ಇವು ನಮ್ಮ ರಾಷ್ಟ್ರದ ಭವಿಷ್ಯದ ಮೂಲಾಧಾರಗಳಾಗಿವೆ. ವಿಜ್ಞಾನ, ಕ್ರೀಡೆ ಮತ್ತು ಜ್ಞಾನದ ಕ್ಷೇತ್ರಗಳಲ್ಲಿ ಭಾರತದ ಯುವಕರನ್ನು ಪೋಷಿಸುವ ಜವಾಬ್ದಾರಿಯನ್ನು ಶಿಕ್ಷಕರು ಹೊರುತ್ತಾರೆ. ಅಂತೆಯೇ ಶಿಕ್ಷಕರು ಮತ್ತು ಶಾಲೆಗಳಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವ ಕರ್ತವ್ಯವು ಸರಕಾರದ್ದಾದೆ. ಹಾಗೆಯೇ, ಪೋಷಕರು ತಮ್ಮ ಮಕ್ಕಳಲ್ಲಿ ಶಿಕ್ಷಕರ ಬಗ್ಗೆ ಮೆಚ್ಚುಗೆ ಮತ್ತು ಪ್ರೀತಿಯನ್ನು ಬೆಳೆಸುವಲ್ಲಿ ಅನಿವಾರ್ಯ ಪಾತ್ರ ವಹಿಸಲೇಬೇಕು.
ಪ್ರಸ್ತುತ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ನೆಚ್ಚಿನ ಶಿಕ್ಷಕರ ಪ್ರೀತಿಯ ನೆನಪುಗಳಿರುತ್ತವೆ, ಅವರ ಪಾಠಗಳು ಮತ್ತು ಜೀವನವು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಸಪ್ಟೆಂಬರ್ 5ರ ಶಿಕ್ಷಕರ ದಿನದಂದು ನಮಗೆ ಮಾರ್ಗದರ್ಶನ ನೀಡಿದ, ಪ್ರೇರೇಪಿಸಿದ ಮತ್ತು ಉನ್ನತೀಕರಿಸಿದ ಶಿಕ್ಷಕರನ್ನು ಸ್ಮರಿಸುವ ಮತ್ತು ಈ ಉದಾತ್ತ ವೃತ್ತಿಗೆ ನಮ್ಮ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸೋಣ.
-ವಿಟ್ಲ ತನುಜ್ ಶೆಣೈ,
ಚೆಲ್ಟೆನ್ಹ್ಯಾಮ್