Advertisement

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

11:57 AM Nov 03, 2024 | Team Udayavani |

“ಜೀವನದ ಭಾಷೆ ಯಾವುದಾದರೇನು ಜೀವ ತುಂಬಿದ, ತುಂಬುವ ಭಾಷೆ ಕನ್ನಡವೇ’

Advertisement

ಕನ್ನಡ ಕೇವಲ ಭಾಷೆಯಲ್ಲ ಅದೊಂದು ವಿಶಿಷ್ಟ ಸಂಸ್ಕೃತಿ. ಕನ್ನಡ ಎಂದರೆ ಮಾತೃ ಭಾವ. ಕನ್ನಡ ನಾವಾಡುವ, ನಾವು ಉಸಿರಿಸುವ ಭಾಷೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಹಲವು ಒಳಿತು, ಶ್ರೇಷ್ಠತೆಗಳ ಸಂಗಮ ಕನ್ನಡ.

ಪ್ರತೀ ವರ್ಷ ಕರ್ನಾಟಕ ರಾಜ್ಯೋ ತ್ಸವವನ್ನು ಸಂಭ್ರಮದಿಂದ ಆಚರಿಸ ಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಕನ್ನಡ ದಿನದ ಆಚರಣೆಯ ಮಧ್ಯೆಯೇ ಕನ್ನಡ ಭಾಷೆಯ ಉಳಿವಿನ ಕುರಿತು ಹಾಗೂ ಕನ್ನಡ ಭಾಷೆಯ ಅಭಿಮಾನದ ಕುರಿತಂತೆ ಪ್ರಶ್ನೆಗಳು ಕೇಳಿ ಬರುತ್ತಲೆ ಇದೆ.

ಹಾಗಾದರೆ ಭಾಷೆಯ ಮೇಲಿನ ಅಭಿಮಾನವೆಂದರೆ ಏನು? ನನ್ನ ಪ್ರಕಾರ, ಕನ್ನಡ ಭಾಷೆಯ ಅಭಿಮಾನವೆಂದರೆ ಬೇರೆ ಭಾಷೆಯನ್ನು ಬಳಸದೆ ಕನ್ನಡ ಮಾತಾನಾಡುವುದಲ್ಲ ಅಥವಾ ಮೊಬೈಲ್‌,  ಇಂಟರ್ನೆಟ್‌,  ಇ-ಮೇಲ್‌ ಮುಂತಾದ ಪದಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಹೆಮ್ಮೆಪಡುವುದೂ ಅಲ್ಲ.

Advertisement

ಒಮ್ಮೆ ಯೋಚಿಸಿ ನೋಡಿ, ಇತ್ತೀಚಿನ ಕನ್ನಡ ಸಿನೆಮಾಗಳಲ್ಲಿ ನಟನೊಬ್ಬ ಇಂಗ್ಲಿಷ್‌ ಬಳಸದೆ ಪೂರ್ತಿ ಕನ್ನಡದಲ್ಲಿ ಸಂಭಾಷಣೆ ಹೇಳುವಾಗ ಅಭಿಮಾನದಿಂದ ಚಪ್ಪಾಳೆ ತಟ್ಟುವ ಜನರು ಹೆಚ್ಚೋ?  ಅಥವಾ ಹಾಸ್ಯಾಸ್ಪದವಾಗಿ ನಗುವ ಮನಸ್ಸುಗಳು ಹೆಚ್ಚೋ? ಹಾಗಂತ ಇಂಗ್ಲಿಷ್‌ ಮಿಶ್ರಿತ ಕಂಗ್ಲಿಷ್‌ ಭಾಷೆಗೆ ನನ್ನ ಸಹಮತವೇನಿಲ್ಲ. ಆದರೆ ಇದೆಲ್ಲದರಲ್ಲಿಯೂ ನಮ್ಮ ಭಾಷೆ, ನಮ್ಮ ಮೂಲಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಜವಾಬ್ದಾರಿ.

ಬಹುಭಾಷೆ, ಬಹು ಸಂಸ್ಕೃತಿ ಅನಿವಾರ್ಯವಾಗಿರುವ ಈಗಿನ ಕಾಲದಲ್ಲಿ ನಮ್ಮ ಭಾಷೆ,  ನಮ್ಮ ಸಂಸ್ಕೃತಿ,  ನಮ್ಮ ಪರಂಪರೆ ಎಂಬ ಮೂಲಗಳೇ ನಾಶವಾಗಬಾರದಲ್ಲವೇ?

ಜವಾಬ್ದಾರಿಯುತ ಕನ್ನಡಿಗರಾಗಿ, ಬರೀ ನವೆಂಬರ್‌ ಒಂದಕ್ಕೆ ಕನ್ನಡ ಅಭಿಮಾನ ತೋರದೆ,  ಮಾಹಿತಿ ತಂತ್ರಜ್ಞಾನದ ಹೊಸ ಸಾಧ್ಯತೆಗಳತ್ತ ಗಮನಹರಿಸಿ ಕನ್ನಡ ಪಸರಿಸುವ ಕಾರ್ಯದಲ್ಲಿ  ಪ್ರತಿಯೊಬ್ಬರೂ ತೊಡಗಿಕೊಳ್ಳಬೇಕು. ಕನ್ನಡದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಸಂಕಲ್ಪಿಸೋಣ.

-ಪೂರ್ಣಚಂದ್ರ ರಮೇಶ್‌,

ವಾರ್ಸಾ

Advertisement

Udayavani is now on Telegram. Click here to join our channel and stay updated with the latest news.

Next