Advertisement
ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷೆ ಮಮತಾ ಅವರ ನೇತೃತ್ವದಲ್ಲಿ ಸಂಘದ ಕಾರ್ಯ ಕಾರಿ ಸಮಿತಿ ಸದಸ್ಯರು ಸಭಾಂಗಣ ವನ್ನು ತಳಿರು ತೋರಣ ಗಳಿಂದ, ಹಲವಾರು ಬಗೆಯ ಆಲಂಕೃತ ವಸ್ತುಗಳಿಂದ ಅಲಂಕರಿ ಸಿದ್ದರು. ಮುಖ್ಯ ಮಂಟಪದ ಅಲಂ ಕಾರ ಅಲ್ಲಿ ನೆರೆದ ಜನರನ್ನು ಆಕರ್ಷಿಸಿತ್ತು.
Related Articles
Advertisement
ವಿನಾಯಕನಿಗೆ ಪ್ರಿಯವಾದ ಕಡಲೆ ಕಾಳು ಉಸುಳಿ, ಕಡುಬು, ಪಾಯಸ ವಿಶೇಷವಾಗಿತ್ತು. ರುಚಿರುಚಿಯಾದ ಊಟದ ಅನಂತರ ದಾಸ ವೈಭವ ಕಾರ್ಯಕ್ರಮಕ್ಕೆ ಅಲ್ಲಿ ನೆರೆದ ಜನರು ಅಣಿಯಾದರು.
ಪ್ರತೀ ವರ್ಷದಂತೆ ಈ ವರ್ಷವೂ ದಾಸ ವೈಭವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಡಾ| ನವೀನ್ ಉಲಿ ಅವರು ಎಂದಿನಂತೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರ ವೇರಿಸಿದರು. ಕನ್ನಡ ಸಾರಸ್ವತ ಲೋಕಕ್ಕೆ ಹರಿದಾಸರ ಕೊಡುಗೆ ಅಪಾರ. ಇಂದಿನ ಪೀಳಿಗೆಯ ಮಕ್ಕಳನ್ನು ಪ್ರೋತ್ಸಾ ಹಿಸಿ, ಅವರಲ್ಲಿ ಸಂಗೀತದ ಜ್ಞಾನ ಭಂಡಾರ ವನ್ನು ಬೆಳೆಸುವ ಸದ್ದುದ್ದೇಶದಿಂದ ಡಾ| ನವೀನ್ ಉಲಿಯವರು ಸಂಗೀತ ವಿದ್ವಾಂಸ ರಿಂದ ತರಬೇತಿ ಪಡೆದ ಮಕ್ಕಳು ಹಾಗೂ ಗುರುಗಳನ್ನು ಆಹ್ವಾನಿಸಿ, ಅವರಿಂದ ದಾಸರ ಕೀರ್ತನೆಗಳನ್ನು ಹಾಡಿಸು ತ್ತಾರೆ. ದಾಸರಿಗೆ ನಮಿಸುವ ಹಾಗೂ ಗೌರವ ಸೂಚಿಸುವ ಕಾರ್ಯ ಕ್ರಮ ಇದಾಗಿದೆ. ಮಕ್ಕಳ ಮತ್ತು ಗುರುಗಳ ಕೀರ್ತನೆಗಳನ್ನೂ, ಸಂಗೀತವನ್ನೂ ಆಲಿಸಿ ಅಲ್ಲಿ ನೆರೆದಿದ್ದ ಜನಸಮೂಹ ತಲೆದೂಗಿದರು. ಸಂಗೀ ತದಲ್ಲಿ ಮೈಮರೆತ ಪ್ರೇಕ್ಷಕರಿಗೆ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಸಂಗೀತದ ಗುಂಗಿನಲ್ಲೇ ಎಲ್ಲರೂ ಸಂಜೆಯ ಚಹಾ ಮತ್ತು ತಿಂಡಿಗಳನ್ನು ಸವಿದರು.
ಕಸ್ತೂರಿ ಕನ್ನಡ ಸಂಘವು ತಮ್ಮ ಭಾಷೆ, ಸಂಸ್ಕೃತಿ, ಹಬ್ಬದಾಚರಣೆಗಳನ್ನು ಉಳಿಸಿ ಬೆಳೆಸುವ ನಿಲುವನ್ನು ಹೊಂದಿದೆ ಮತ್ತು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿ ಹೆಜ್ಜೆಯನ್ನು ಇಡುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದುಗೂಡಿ ಈ ಪರಂಪರೆಯನ್ನು ಉಳಿಸಿ ಬೆಳೆಸೋಣ.
ವರದಿ: ರಶ್ಮಿ, ಸಲೋನ್