ಇಂಗ್ಲೆಂಡ್‌ನಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿ ಪ್ರವಾಸಗಳು ಸುಲಭವಾಗಿವೆ. ಕಳೆದ ವಾರ ಬರ್ಮಿಂಗಮ್‌ಗೆ ಕಾರಿನಲ್ಲಿ ಹೊರಟಿದ್ದೆ. ವಿರಾಮಕ್ಕೆಂದು ಮೋಟರ್ವೇದ ಸರ್ವಿಸಸ್‌ನಲ್ಲಿ ಇಳಿದು ಚಹಾದ ಜೋಡಿಯಾಗಿ ಕ್ರಿÓ³… ಪ್ಯಾಕೆಟ್ ಕೊಂಡೆ. ನಮ್ಮಲ್ಲಿ ಚಿ±Õ… ಎಂದು ಕರೆಯುವ ತೆಳುವಾಗಿ ಹರಿದು ಕರಿದ ಬಟಾಟೆಗೆ ಉಪ್ಪು, ಮೆಣಸಿನಪುಡಿ ಉದುರಿಸಿದ ಗರಿಗರಿಯಾದ ಬಿಲ್ಲೆಗಳಿಗೆ ಇಲ್ಲಿ ‘crಜಿsಟs’ ಎನ್ನುತ್ತೇವೆ. ಅಚ್ಚರಿಯೆಂದರೆ ನಾನು ಕೊಂಡ ಪ್ಯಾಕೆಟ್‌ನ ಮೇಲೆ ಕರ್ನಾಟಕದ ಹೆಸರು ಮತ್ತು ತುತ್ತೂರಿ ಹಿಡಿದವನ ಚಿತ್ರ ಇತ್ತು! ಅದನ್ನು ನೋಡಿದಾಗ ಮತ್ತು ಅದರ ಮೇಲಿನ ಬರಹ ಓದುತ್ತಿದ್ದಂತೆ ನನ್ನ ಮನಸ್ಸು “ಬೊಮ್ಮನಹಳ್ಳಿಯ ಕಿಂದರಿ ಜೋಗಿ’ಯ ನೆನಪಿಸಿತ್ತು. ಅದನ್ನು ಬರೆದ ಕವಿ ಹುಟ್ಟಿ ಬೆಳೆದದ್ದು ಸಹ್ಯಾದ್ರಿಯ ಮಡಿಲಲ್ಲಿಯ ಕುಪ್ಪಳ್ಳಿ ಎನ್ನುವುದನ್ನು ಮರೆಯುವಂತಿಲ್ಲ.
ಕುತೂಹಲದಿಂದ, ಪ್ಯಾಕೆಟ್‌ನಲ್ಲಿದ್ದ ಕ್ರಿÓ³… ಮತ್ತು ಅದರ ಹೆಸರಿನ ಬಗ್ಗೆ ಸಂಶೋಧನೆ ಮಾಡತೊಡಗಿದೆ. ಇಂಗ್ಲೆಂಡ್‌ನ ಪೂರ್ವಭಾಗದಲ್ಲಿಯ ಲಿಂಕನ್ ಶೈರ್‌ನಲ್ಲಿ ಬೆಳೆದ ಬಟಾಟೆಗಳನ್ನು ಉಪಯೋಗಿಸಿ, ಸಹ್ಯಾದ್ರಿಯಲ್ಲಿ ಬೆಳೆದ ತೆಲ್ಲಿಚೇರಿ ಮೆಣಸನ್ನು ಆಮದು ಮಾಡಿ ಪುಡಿ ಮಾಡಿ ಬೆರಸಿ ಅದರ ರುಚಿಯನ್ನು ಹೆಚ್ಚಿಸಲು ಸಮುದ್ರದ ಉಪ್ಪನ್ನು ಬಳಸಿ ಈ ಕ್ರಿÓ³…ಗಳನ್ನು ತಯಾರಿಸಿದ್ದೇವೆ ಎನ್ನುತ್ತಾರೆ ತಯಾರಕರು.
2004ರಲ್ಲಿ ಮೂವರು ಕೃಷಿಕರು ಕೂಡಿ ಆರಂಭಿಸಿದ ಸಂಸ್ಥೆ ಪೈಪರ್ಸ್. ಅವರ ಲಾಂಛನವಾದ ಕಹಳೆ (ಚಿತ್ರ ನೋಡಿ) ಆಂಗ್ಲ ಕವಿ ರಾಬರ್ಟ್ ಬ್ರೌನಿಂಗ್ ರಚಿಸಿದ “ಖಜಛಿ ಕಜಿಛಿಛ ಕಜಿಟಛಿr ಟf ಏಚಞಛಿlಜಿn’ ಎನ್ನುವ ಕವನವೂ ನೆನಪಾಗುತ್ತದೆ. ಪೈಪರ್ಸ್ ಕಂಪೆನಿಯ ಧ್ಯೇಯ ಮಂತ್ರ ಕನ್ನಡದ ಇನ್ನೊಬ್ಬ ವರಕವಿಯ ಸಾಲನ್ನು ನೆನಪಿಸಿ “ನಿನ್ನ ಜೀವನ ಸಮರಸ ತುಂಬಿದ ಬಾಳಾಗಿರಲಿ’ ಎಂದು ಕಹಳೆ ಊದುತ್ತಿದೆ. ಜರ್ಮನಿಯ ವೀಸjರ್ ನದಿ ದಂಡೆಯ ಮೇಲಿನ ಹ್ಯಾಮಲಿನ್ ಊರಿನಲ್ಲಿ ನಡೆದ ಘಟನೆಯಿಂದ ಹುಟ್ಟಿಕೊಂಡ ಅನೇಕ ದಂತ ಕಥೆಗಳÇÉೊಂದನ್ನು ಆಧರಿಸಿ ಬ್ರೌನಿಂಗ್ ಬರೆದ ನೀಳYವನ ಅದು. ಜನಪ್ರಿಯ “ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ಯ ಮಕ್ಕಳ ಕಥೆಯನ್ನು ಬಹುತೇಕ ಮಂದಿ ಕೇಳಿರಬಹುದು, ಓದಿರಬಹುದು.
13 ಅಥವಾ 14ನೇ ಶತಮಾನದ ಪ್ಲೇಗ್ ಪಿಡುಗಿನ ಕಾಲದಲ್ಲಿ ಹುಟ್ಟಿಕೊಂಡ ಕಥೆ ಅದರ ಮೂಲ. ಅದರಲ್ಲಿ ಕಳೆದು ಹೋದ ಮಕ್ಕಳು ಮತ್ತೂಂದು ಕಡೆ ಟ್ರಾನ್ಸಿಲ್ವೇನಿಯದಲ್ಲಿ ಉದ್ಭವವಾದರು ಎನ್ನುವ ಸೂಚನೆ ಆ ಕವಿತೆಯಲ್ಲಿದ್ದರೂ ಕುವೆಂಪು ಅವರ ಕವನದಲ್ಲಿ ಆ ಉಲ್ಲೇಖವಿಲ್ಲ. ಆದರೆ ರಾಬರ್ಟ್ ಬ್ರೌನಿಂಗ್ ಸಹ ವಿಲ್ಲಿ ಎಂಬ ಹುಡುಗನಿಗಾಗಿ 1842ರಲ್ಲಿ ಬರೆದ ಕವನದ ಕೊನೆಯಲ್ಲಿ ಈ ಕಥೆಯ ನೀತಿಯನ್ನು ಹೇಳಿದಂತೆ ಕುವೆಂಪು ಅವರೂ ಕವನದ ಕೊನೆಯ ಸಾಲುಗಳಲ್ಲಿ ಮೂರ್ತಿಯೆಂಬ ಬಾಲಕನಿಗೆ ಹೇಳಿದಂತಿದೆ. ಭಾಷೆಯ ಕೊಟ್ಟರೆ ಮೂರ್ತಿ, ನಾವು ಮೋಸವ ಮಾಡದೆ ಸಲ್ಲಿಸಬೇಕು/ ಆದುದರಿಂದ ಕೇಳು, ಮೂರ್ತಿ ಸತ್ಯವನೆಂದೂ ತ್ಯಜಿಸದೆ ಬಾಳು. ಹ್ಯಾಮ್ಲಿನ್ ಊರಲ್ಲಿ ಮಕ್ಕಳು ಕೊನೆಯ ಸಲ ಕಾಣಿಸಿದ ವೀಥಿಯನ್ನು ಈಗ ಹಾಡು ಕುಣಿತವಿಲ್ಲದ ದಾರಿ ಎಂದು ಕರೆಯುತ್ತಾರೆ.
ಸುಮಾರು 600 - 700 ವರ್ಷಗಳ ಹಿಂದಿನ ಘಟನೆಯಾದ ಆ ದಿನವನ್ನು “ರಾಟ್ ಕ್ಯಾಚರ್ಸ್ ಡೇ’ ಎಂದು ಪ್ರತಿ ವರ್ಷ ಜೂ. 26 ಅಥವಾ ಜು. 22ರಂದು (ದಾಖಲೆಗಳಲ್ಲಿ ಸ್ವಲ್ಪ ದಿನಾಂಕದ ವ್ಯತ್ಯಾಸವಿರುವುದರಿಂದ) ಆಚರಿಸುತ್ತಾರೆ.
ನಾನು ಮುಂದೆ ಮತ್ತೆ ಹೈವೇ ಸೇರಿ ನನ್ನ ಪ್ರವಾಸ ಮುಂದುವರಿಸುವಾಗ ಮೂರೂ ಲೇನುಗಳಲ್ಲಿ ಒಂದರ ಹಿಂದೆ ಒಂದು ವಿವಿಧ ಬಣ್ಣದ, ಪುಟ್ಟ, ದೊಡ್ಡ, ದೈತ್ಯಾಕಾರದ ವಾಹನಗಳು ಭರದಿಂದ ಸಾಗುವ ರ್ಯಾಟ್ ರೇಸ್ ಅನ್ನು ನೋಡಿದಾಗ ರಾಷ್ಟ್ರಕವಿಯ ಕವನದ ಸಾಲುಗಳೇ ನೆನಪಿಗೆ ಬಂದವು.. “ಜೋಗಿಯು ಬಾರಿಸೆ ಕಿಂದರಿಯ ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ..’
ಯಾವ ಕಾಣದ ಕೇಳದ ಜೋಗಿಯ ಕಿಂದರಿ ನಾದದ ಬೆನ್ನು ಹತ್ತಿ ಇವರೆಲ್ಲ ಧಾವಿಸುತ್ತಿ¨ªಾರೆ ಅನಿಸಿತು! ಆ ಕಾಲದ ಪ್ಲೇಗಿನಂತೆ ಈಗಿರುವ ಮಹಾಮಾರಿ ಕೋವಿಡ್ ಕಡಿಮೆಯಾದರೆ ಮತ್ತೆ ಊರಿಗೆ ಮರಳುವ ಆಸೆಯನ್ನು ಆ ದಿನ ಹೆಚ್ಚಿಸಿತ್ತು.
ಡಾ| ಶ್ರೀವತ್ಸ ದೇಸಾಯಿ,
ಡೊಂಕಾಸ್ಟರ್