Advertisement

ವಿಜ್ಞಾನಲೋಕದ ಕಲ್ಪವೃಕ್ಷ

07:45 PM Jul 17, 2021 | Team Udayavani |

ಇತ್ತೀಚೆಗಷ್ಟೇ  ಬಾಹ್ಯಾಕಾಶ ವಿಜ್ಞಾನಿ ಆಗಲು ಏನು ಮಾಡಬೇಕು? ಎಂಬ ಲೇಖನವನ್ನು ಓದಿದ್ದೆ.ಅದನ್ನು ಬರೆದಿದ್ದದ್ದು ಬೇರಾರೂ ಅಲ್ಲ, ಕಬ್ಬಿಣದ ಕಡಲೆಯಂತಹ ಸಾವಿರಾರು ಕ್ಲಿಷ್ಟಕರ ವೈಜ್ಞಾನಿಕ ಲೇಖನಗಳನ್ನು ಬಲು ಸುಲಲಿತವಾದ ಕನ್ನಡದಲ್ಲಿ ದಶಕಗಳ ಕಾಲ ಅನೇಕ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಸುಧೀಂದ್ರ ಹಾಲೊªಡ್ಡೇರಿಯವರು. ಕೋಟ್ಯಂತರ ಜನರಿಗೆ ಕತೆಗಳು, ಸುಲಭ ಉದಾಹರಣೆಗಳ ಮೂಲಕ ವಿಜ್ಞಾನವನ್ನು ಹೇಳಿಕೊಟ್ಟಿದ್ದ ಅವರು ದೇವಕಣದ ಬಗ್ಗೆ ಹತ್ತಾರು ಲೇಖನಗಳನ್ನು ಬರೆದು ಆ ದೇವನÇÉೇ ಒಂದು ಕಣವಾಗಿ ಜು. 2ರಂದು ಲೀನವಾದರು.

Advertisement

ಕನ್ನಡ ಪತ್ರಿಕೆಗಳಲ್ಲಿ ಕನ್ನಡ ಭಾಷೆಯ ಮೂಲಕ ವಿಜ್ಞಾನದ ಲೇಖನಗಳನ್ನು ಬರೆಯುವ ಪರಂಪರೆ ಆರಂಭಿಸಿದ ಸುಧೀಂದ್ರ ಹಾಲೊªಡ್ಡೇರಿ ಅವರ ಪರಿಚಯವಾದದ್ದೇ ಒಂದು ಆಕಸ್ಮಿಕ. ನನ್ನ ಕಾದಂಬರಿಯೊಂದು ಸೆಲ#… ಪಬ್ಲಿಶ್‌ನ ಅಡಿಯಲ್ಲಿ ಪ್ರಕಟವಾಗಿತ್ತು. ಸುಧೀಂದ್ರ ಅವರಿಗೂ ತಮ್ಮ ಲೇಖನಗಳನ್ನು ಸೆಲ#… ಪಬ್ಲಿಶ್‌ ಅಡಿಯಲ್ಲಿ ಪ್ರಕಟಿಸುವ ಆಸೆ ಇತ್ತು. ಇದಕ್ಕಾಗಿ ಸೆಲ#… ಪಬ್ಲಿಶಿಂಗ್‌ ಮಾಡುವುದು ಹೇಗೆ ಎಂದು ಕೇಳಲು ಅವರು ನನ್ನನ್ನು ಸಂಪರ್ಕಿಸಿದ್ದರು. ಆಗ ಅವರೊಡನೆ ಫೋನ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮಾತನಾಡಿ ನನಗೆ ತಿಳಿದಿದ್ದ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದೆ. ಆ ರೀತಿ ಶುರುವಾದ ನಮ್ಮ ಸ್ನೇಹ ಅವರ ಫೋಟೋವೊಂದು ನನ್ನ “ಚಿತ್ರೋದ್ಯಮದ ಚಿತ್ತಾರಗಳು- 2′ ಪುಸ್ತಕದ ಮೇಲೆ ಪ್ರಿಂಟ್‌ ಆಗುವವರೆಗೂ ಬೆಳೆದಿತ್ತು. ಅವರ ಮನೆಗೆ ಹೋಗಿ ಈ ಪುಸ್ತಕವನ್ನು ಕೊಟ್ಟು ಅವರ ಆಶೀರ್ವಾದ ಪಡೆದು ಬರಬೇಕೆಂಬ ಯೋಚನೆ ಇತ್ತು. ಆದರೆ ಅದು ಈಡೇರಲೇ ಇಲ್ಲ.

ಕನ್ನಡದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುವವರಲ್ಲಿ ಸುಧೀಂದ್ರ ಅವರದ್ದು ಎತ್ತಿದ ಕೈ. “ಚಿತ್ರೋದ್ಯಮದ ಚಿತ್ತಾರಗಳು – 1′ ಪುಸ್ತಕ ಬಿಡುಗಡೆಯಾದಾಗ, ಅದರ ಒಂದು ಪ್ರತಿಯನ್ನು ಸುಧೀಂಧ್ರ ಅವರಿಗೆ ಕೊಡಬೇಕೆಂದಿದ್ದೆ. ಆದರೆ ನಾನು ಮಲೇಷ್ಯಾದಲ್ಲಿದ್ದೆ. ಹೀಗಾಗಿ ಸ್ನೇಹಿತ ಘನಶ್ಯಾಮ್‌ ಅವರು ಖುದ್ದು ಹಾಲೊªಡ್ಡೇರಿ ಅವರ ಮನೆಗೆ ಹೋಗಿ ಪುಸ್ತಕವನ್ನು ಕೊಟ್ಟು ಬಂದಿದ್ದರು. ಘನಶ್ಯಾಮ್‌ ಅವರನ್ನು ಸುಮಾರು ಅರ್ಧಗಂಟೆ ಕಾಲ ಮಾತನಾಡಿಸಿ, ಇದು ಸಿನೆಮಾ ಇಂಡಸ್ಟ್ರಿಗೆ ಸಂಬಂಧಿಸಿದ ಪುಸ್ತಕ ಎಂದು ತಿಳಿದ ಸುಧೀಂದ್ರ ಅವರು, ಸಿನೆಮಾ ಬಗ್ಗೆ ಈಗಾಗಲೇ ಎಲ್ಲರೂ ಬರೆದಾಗಿದೆ. ಅದರÇÉೇನಿದೆ ಹೊಸದು ಬರೆಯೋಕೆ? ಎಂದು ಘನಶ್ಯಾಮ್‌ ಅವರನ್ನು ಕೇಳಿದರು. ಆಗ ಘನಶ್ಯಾಮ್‌ ಅವರು, ಸರ್‌ ಜನಗಳಿಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳಿವೆ. ಅವುಗಳನ್ನು ಎಲ್ಲರಿಗೂ ತಿಳಿಸುವುದಕ್ಕಾಗಿಯೇ ಸಮಾನ ಮನಸ್ಕ ಸ್ನೇಹಿತರು ಸೇರಿ ವೆಬ್‌ಸೈಟ್‌ವೊಂದನ್ನು  ಮಾಡಿದ್ದೇವೆ. ಉದಾಹರಣೆಗೆ ಬೆಂಗಳೂರಿನ ಮಿನರ್ವ ಟಾಕೀಸ್‌ ಗೊತ್ತಲ್ವಾ ಸರ್‌? ಆ ಟಾಕೀಸಿನ ಹೆಸರಿನ ಬಗ್ಗೆ ಹೇಳ್ತೀನಿ ಕೇಳಿ. ಮಿನರ್ವ ಎಂಬುದು ಗ್ರೀಕ್‌ ದೇವತೆಯ ಹೆಸರು. ಕಲೆ ಅಥವಾ ವಿದ್ಯೆಯನ್ನು ಕೊಡುವ ದೇವತೆ ಎಂದು ಗ್ರೀಕ್‌ನ ಜನ ನಂಬಿ¨ªಾರೆ. ಒಂದು ರೀತಿಯಲ್ಲಿ ನಮಗೆ ನಟರಾಜ ಅಥವಾ ಸರಸ್ವತಿ ಇದ್ದಂತೆ. ಹಾಗಾಗಿ ಆ ಕಲಾದೇವತೆಯ ಹೆಸರನ್ನು ಟಾಕೀಸಿಗೆ ಇಟ್ಟಿ¨ªಾರೆ ಎಂದು ಮಿನರ್ವ ಹೆಸರಿನ ಬಗ್ಗೆ ಹೇಳತೊಡಗಿದರು.

ಚಿಕ್ಕ ಮಗುವೊಂದು ಪಂಚತಂತ್ರ ಕತೆ ಕೇಳುವಂತೆ ಸುಧೀಂದ್ರ ಅವರು ತುಂಬಾ ಶ್ರದ್ಧೆಯಿಂದ ಕೇಳಿ, ಮುಂದಿನ ನನ್ನ ಲೇಖನದಲ್ಲಿ ಇದನ್ನು ಬಳಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ಡಿಆರ್‌ಡಿಒದಂತಹ ಉನ್ನತ ಸಂಸ್ಥೆಯಲ್ಲಿ ದಶಕಗಳ ಕಾಲ ಕೆಲಸ ಮಾಡಿದ್ದ ದೊಡ್ಡ ವಿಜ್ಞಾನಿಯೊಬ್ಬರು ಪ್ರತಿಯೊಂದು ವಿಷಯವನ್ನು ಕೂಡ ಎಷ್ಟು ಕುತೂಹಲದಿಂದ ತಿಳಿದುಕೊಳ್ಳುತ್ತಾರೆ, ಹೊಸ ವಿಷಯವನ್ನು ತಿಳಿಯಬೇಕೆಂಬ ತುಡಿತ ಅವರಲ್ಲಿ ಎಷ್ಟಿತ್ತು ಎಂಬುದಕ್ಕೆ ಇದು ಒಂದು ಉದಾಹರಣೆ.

ಅದಾದ ಕೆಲವು ದಿನಗಳ ಬಳಿಕ ಸುಧೀಂಧ್ರ ಅವರೊಡನೆ ಫೋನ್‌ನಲ್ಲಿ ಮಾತಾಡುವಾಗ “ಚಿತ್ರೋದ್ಯಮದ ಚಿತ್ತಾರಗಳು-1′ ಪುಸ್ತಕವನ್ನು ಓದಿ ಹರಸಿದ ಒಂದಷ್ಟು ಹಿರಿಯ ಸೆಲೆಬ್ರಿಟಿಗಳ ಫೋಟೋಗಳನ್ನು “ಚಿತ್ರೋದ್ಯಮದ ಚಿತ್ತಾರಗಳು -2′ ಪುಸ್ತಕದ ಹಿಂಭಾಗದಲ್ಲಿ ಪ್ರಿಂಟ್‌ ಮಾಡಿಸುವ ಐಡಿಯಾ ಇದೆ. ನಿಮ್ಮ ಫೋಟೋ ಕೂಡ ಹಾಕುತ್ತಿದ್ದೀವಿ ಸರ್‌ ಅಂದಾಗ, ನಾನು ವಿಜ್ಞಾನಿ ರೀ. ಸೆಲೆಬ್ರಿಟಿ ಅಲ್ಲ. ಎಷ್ಟೋ ಸೆಮಿನಾರುಗಳನ್ನು ಕೊಟ್ಟಿದ್ದೇನೆ. ಎಲ್ಲ ಸಭೆಗಳಲ್ಲೂ ನನ್ನನ್ನು ಹಿರಿಯ ವಿಜ್ಞಾನಿ, ಲೇಖಕ ಎನ್ನುತ್ತಿದ್ದರೇ ವಿನಃ ಸೆಲೆಬ್ರಿಟಿ ಎಂದು ಯಾರೂ ಅಂದಿರಲಿಲ್ಲ. ನೀವೇ ಮೊದಲು ನನ್ನನ್ನು ಸೆಲೆಬ್ರಿಟಿ ಎಂದು ಕರೆದದ್ದು. ವಿಜ್ಞಾನಿಗಳನ್ನು ಸೆಲೆಬ್ರೆಟಿ ಎಂದು ಗುರುತಿಸುವ ಹಂತಕ್ಕೆ ದೇಶದ ಜನತೆ ಬಂದಿದೆ ಅಂದರೆ ಅದು ವಿಜ್ಞಾನ ಲೋಕಕ್ಕೆ ಸಿಗುತ್ತಿರುವ ಮರ್ಯಾದೆ. ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲಿ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ಇನ್ನೂ ಒಳ್ಳೆಯ ದಿನಗಳು ಬರಬಹುದೆಂಬ ಶುಭ ಸೂಚನೆ. ಇದಕ್ಕಿಂತ ಖುಷಿಯ ಸಂಗತಿ ಏನಿದೆ? ಸಿನೆಮಾರಂಗಕ್ಕೆ ಸಂಬಂಧಿಸಿದ ಪುಸ್ತಕದಲ್ಲಿ ವಿಜ್ಞಾನಿಯ ಫೋಟೋ ಹಾಕ್ತಾ ಇರೋದಕ್ಕೆ ನಾನೇ ಥ್ಯಾಂಕÕ… ಹೇಳಬೇಕು ಎಂದು ಆಶೀರ್ವಾದ ಮಾಡಿದ್ದರು.

Advertisement

ಕನ್ನಡ ಮೇಷ್ಟ್ರು ಮಾತನಾಡಿದ ಹಾಗಿತ್ತು

ಜೂ. 16ರಂದು  ಸ್ನೇಹಿತರಾದ ನಿವೃತ್ತ ಸೈನಿಕ ಜಯರಾಮ್‌ ಅವರು ಡಿಆರ್‌ಡಿಓಗೆ ಸಂಬಂಧಿಸಿದ ಕೋರ್ಸ್‌ನ ಬಗ್ಗೆ ನನ್ನನ್ನು ಕೇಳಿದರು. ಸುಧೀಂಧ್ರ ಅವರನ್ನು ಸಂಪರ್ಕಿಸಿ ಎಂದು ಅವರ ನಂಬರ್‌ ಕೊಟ್ಟಿ¨ªೆ. ಸುಧೀಂಧ್ರ ಅವರೊಡನೆ ಮಾತನಾಡಿದ ಮೇಲೆ ಜಯರಾಮ್‌ ಅವರು ನನ್ನೊಡನೆ ಹೇಳಿದ್ದು..

ತುಂಬಾ ದೊಡ್ಡ ವಿಜ್ಞಾನಿ, ದೊಡ್ಡ ದೊಡ್ಡ ಪದಗಳನ್ನು ಬಳಸಿ ಮಾತಾಡುತ್ತಾರೇನೋ ಅಂತ ಅಂದುಕೊಂಡಿ¨ªೆ. ಆದರೆ ತುಂಬಾ ಸುಲಭದ ಕನ್ನಡದಲ್ಲಿ ಸರಳವಾಗಿ ಅರ್ಥವಾಗುವ ಹಾಗೆ ಹೇಳಿದರು. ಕನ್ನಡ ಮೇಷ್ಟ್ರು ಒಬ್ಬರು ಮಾತಾಡಿದ ಹಾಗಿತ್ತು ಅವರ ಭಾಷೆ. ಅಷ್ಟು ಸಿಂಪಲ್‌ ವ್ಯಕ್ತಿ. ನಾನು ನಿವೃತ್ತ ಸೈನಿಕ ಅಂತ ಗೊತ್ತಾಗಿ, ಕೊರೋನಾ ಲಾಕ್‌ಡೌನ್‌ ಮುಗಿದ ಮೇಲೆ ಒಮ್ಮೆ ಭೇಟಿಯಾಗೋಣ ಅಂದರು. ನಿಮ್ಮಿಂದಾಗಿ ನನಗೊಬ್ಬ ಒಳ್ಳೆಯ ಹೊಸ ಸ್ನೇಹಿತರು ಸಿಕ್ಕಿದರು ಎಂದರು.

ಟಿ.ಎ. ಅನಂತರಾಮ…, ನಾಗೇಶ್‌ ಹೆಗಡೆ, ಸುಧೀಂಧ್ರ ಹಾಲೊªಡ್ಡೇರಿ, ಯು.ಬಿ. ಪವನಜ ಇಂತಹವರ ಲೇಖನಗಳನ್ನು ಓದುತ್ತಲೇ ಬಾಲ್ಯವನ್ನು ಕಳೆದವರು ನಾವು. ಪುಸ್ತಕ ಬಿಡುಗಡೆಯ ಸಮಾರಂಭವೊಂದರಲ್ಲಿ ನಾಗೇಶ್‌ ಹೆಗಡೆ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಭೂಕಂಪಕ್ಕೆ ಸಂಬಂಧಪಟ್ಟ ಪ್ರಾಜೆಕr… ವಿಷಯವಾಗಿ ಒಮ್ಮೆ ಕುಮಾರಸ್ವಾಮಿ ಬಡಾವಣೆಯಲ್ಲಿ ಅನಂತರಾಮು ಅವರನ್ನು ಭೇಟಿ ಮಾಡಿ¨ªೆ. ಸುಧೀಂಧ್ರ ಹಾಲೊªಡ್ಡೇರಿ ಅವರನ್ನು ನೇರವಾಗಿ ಭೇಟಿ ಮಾಡುವ ಅವಕಾಶ ಕಡೆಗೂ ಸಿಗಲಿಲ್ಲ.

ಟಿಎನ್ನೆಸ್‌, ಮಲೇಷ್ಯಾ

Advertisement

Udayavani is now on Telegram. Click here to join our channel and stay updated with the latest news.

Next