Advertisement

ಹರಟೆ ಸವಾಲುಗಳ ಸಂಜೆ

08:49 PM Jun 19, 2021 | Team Udayavani |

ಆಕಾಶದ ನೀಲಿಯಲ್ಲಿ, ಹಸುರುಟ್ಟ ಬೆಟ್ಟಗಳಲಿ, ಮರಗಿಡಗಳ ತಂಗಾಳಿಯಲ್ಲಿ, ಮನೆ ಮನೆಗಳಲಿ ದೀಪವನ್ನು ಹಚ್ಚಿ ಮನೆಮನಗಳನ್ನು ಬೆಳಗುವಂತವಳು ಒಬ್ಬ ಸ್ತ್ರೀ !

Advertisement

ಈ ಶಕ್ತಿಯನ್ನು ನಮ್ಮ ನಾಡಿನ ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರು ತಮ್ಮ ಕವಿತೆಯಲ್ಲಿ ಚೆನ್ನಾಗಿ ವರ್ಣಿಸಿದ್ದಾರೆ. ಈ ಕವಿತೆಯನ್ನು ಮೊಟ್ಟಮೊದಲ ಬಾರಿಗೆ ಕೇಳಿದಾಗ ಈ ಹೆಣ್ಣಿನ ಜನ್ಮ ಎಷ್ಟೊಂದು ಸಾರ್ಥ ಕತೆಯನ್ನು ಮೆರೆದಿದೆ ಎನ್ನಿಸಿತು. ಪ್ರಪಂಚದಲ್ಲಿ ನಾರಿಯರಿಗೆ ವಿಶೇಷ ಸ್ಥಾನವನ್ನು ಕೊಡಲಾಗಿದೆ. ಲೇಡಿಸ್‌ ಫ‌Ór…! ಅನ್ನುವುದನ್ನು ನಾವು ಎಲ್ಲೆಡೆ ಕೇಳಬಹುದಾಗಿದೆ.

ಸಿಂಗಾಪುರ ಕನ್ನಡ ಸಂಘವು ಇದಕ್ಕೆ ಹೊರತಲ್ಲ. ಜೂ. 5ರಂದು  ವಿಶೇಷವಾಗಿ ಮಹಿಳೆಯರಿಗಾಗಿ ರೂಪುಗೊಳಿಸಿದ್ದ ಸುಂದರ ಕಾರ್ಯ ಕ್ರಮ “ಸ್ತ್ರೀ ಎಂದರೆ ಅಷ್ಟೇ ಸಾಕೆ?’  ಶೀರ್ಷಿಕೆಯೇ ಹೇಳುವಂತೆ ನಾರಿಗೆ ಹತ್ತು ಕೈಗಳು, ಹತ್ತಾರು ಜವಾಬ್ದಾರಿ ಗಳು.ಯಾವುದಕ್ಕೂ ಹಿಂಜರಿಯದೆ ನಿಭಾಯಿಸುವವಳು ಸ್ತ್ರೀ!

ಕಾರ್ಯಕ್ರಮದ ಉದ್ದೇಶದಂತೆ ಎಲ್ಲ ಸಿಂಗನ್ನಡತಿಯರನ್ನು ಒಂದೆಡೆ ಸೇರಿಸಿ ಹರಟೆ, ಆಟಗಳ ಮೂಲಕ ಪರಸ್ಪರ ಆತ್ಮೀಯತೆ ಮೂಡಿಸುವುದಾಗಿತ್ತು. ಈ ಆಟದಲ್ಲಿ ಸುಮಾರು 50 ಮಂದಿ ಮಹಿಳೆಯರು ಪಾಲ್ಗೊಂಡಿದ್ದರು. ಕೋವಿಡ್‌ ಮಹಾಮಾರಿಯ ಕಾರಣ ಮುಖತಃ ಭೇಟಿಯಾಗದಿದ್ದರೂ, ತಮ್ಮ ತಮ್ಮ ಮಾಯಪರದೆಯ ಮುಂದೆ ಮನೆಗಳಲ್ಲೆ ಕುಳಿತು  ಅಂತರ್ಜಾಲದ ಮುಖಾಂತರ ಈ ಆಟವನ್ನು ಆಡಿ ಸಂಭ್ರಮಿಸಿದರು.

ಕನ್ನಡ  ಬಾವುಟದ ವರ್ಣಗಳಾದ ಅರಿಶಿನ ಮತ್ತು ಕುಂಕುಮಗಳೆಂಬ ಎರಡು ತಂಡಗಳೊಂದಿಗೆ ಸಂಜೆ 7 ಗಂಟೆಯ ಸಮಯಕ್ಕೆ ಆಟವನ್ನು ಆರಂಭಿಸಿಯಾಯ್ತು. ಕನ್ನಡ ಸಂಘದ ಅಧ್ಯಕ್ಷರಾದ ವೆಂಕಟ್‌ ಅವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಿರೂಪಕರಾದ ಪ್ರೇಮ್‌ ತಮ್ಮ ವಾಕ್ಚಾತುರ್ಯದೊಂದಿಗೆ ಎಲ್ಲರನ್ನೂ ಪರಸ್ಪರ ಸಕ್ರಿಯೆ ಗೊಳಿಸುವಲ್ಲಿ ಸಫ‌ಲರಾಗಿ ಕಾರ್ಯ ನಿರ್ವಹಿಸಿದರು.

Advertisement

ತಾಂತ್ರಿಕ ತಂಡದ ಮುಖ್ಯ ರುವಾರಿಗಳಾದ  ಸಮಂತ್‌,  ಸುದೀಪ್‌, ಚಂದ್ರು, ಶಿವಕುಮಾರ್‌ ಹಾಗೂ ಶ್ರೀಕಾಂತ್‌ ಅವರು  ಈ ಆಟಕ್ಕೆ ಸ್ವಲ್ಪವು ಅಡ್ಡಿ ಬಾರದಂತೆ ಚೆನ್ನಾಗಿ ಕಾರ್ಯ ನಿರ್ವಹಿಸಿದರು.

ಒಂದೊಂದು ಸುತ್ತಿನಲ್ಲೂ 5 ಪ್ರಶ್ನೆಗಳನ್ನೊಳಗೊಂಡ 5 ಸುತ್ತುಗಳ ಆಟವು ಬಹಳ ವಿಭಿನ್ನ ಮತ್ತು ಸ್ವಾರಸ್ಯವಾಗಿತ್ತು. ಸುಮಾರು ರಾತ್ರಿ 10 ಗಂಟೆಯ ತನಕ ನಡೆದರೂ ಈ ಆಟದಲ್ಲಿ ಭಾಗವಹಿಸಿದ ಯಾರಿಗೂ ಮುಗಿಸಬೇಕೆಂಬ ಅವಸರವಿರಲಿಲ್ಲ.

ಮಹಿಳೆಯರಿಗಾಗಿಯೇ ಆಯೋ ಜಿಸಿದ್ದ ಈ ವಿಭಿನ್ನ ಕಾರ್ಯಕ್ರಮಕ್ಕಾಗಿ ಕನ್ನಡ ಸಂಘಕ್ಕೆ ಧನ್ಯವಾದಗಳನ್ನು ಹೇಳುತ್ತ, ಒಲ್ಲದ ಮನಸ್ಸಿನಿಂದ ಒಬ್ಬರನ್ನೊಬ್ಬರು ಬೀಳೊYಟ್ಟರು. ಒಟ್ಟಿನಲ್ಲಿ ಎಲ್ಲವನ್ನು ಮರೆತು, ಸಮಯದ ಪರಿವೇ ಇಲ್ಲದೆ ಮಾತು, ಹರಟೆ, ನಗು ಅಲ್ಲಲ್ಲಿ ಮೂಡಿದ ಸ್ಪರ್ಧಾತ್ಮಕವಾದಂತಹ ಚರ್ಚೆಗಳು, ಆಟದಲ್ಲಿ ಗೆಲ್ಲಬೇಕೆಂಬ ಛಲದಲ್ಲಿನ ಉದ್ವೇಗ ಮಿಶ್ರಿತ ಭಾವಗಳು ಎಲ್ಲರನ್ನೂ ಬೇರೆಯೇ ಲೋಕದಲ್ಲಿದ್ದಂತೆ ಮಾಡಿದ್ದಂತು ಅಲ್ಲಗೆಳೆಯಲಾಗದು.

ರಜತ ಮಹೋತ್ಸವದ ಸಂಭ್ರಮ ದಲ್ಲಿರುವ ಸಿಂಗಾಪುರ ಕನ್ನಡ ಸಂಘವು  ಇನ್ನಷ್ಟು ಉತ್ತಮ ಕಾರ್ಯಕ್ರಮ ಗಳನ್ನು  ನೀಡಲಿ ಎನ್ನುವ ಆಶಯ ದೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.

– ವಿನುತಾ ಭಟ್‌, ಸಿಂಗಾಪುರ

Advertisement

Udayavani is now on Telegram. Click here to join our channel and stay updated with the latest news.

Next