Advertisement

ಬ್ರಹ್ಮಜ್ಞಾನದ ಹಕ್ಕು ಪ್ರತಿಯೊಬ್ಬರಿಗೂ ಉಂಟು

07:51 PM Jun 19, 2021 | Team Udayavani |

ಶಂಕರಾಚಾರ್ಯರು ಹೇಳಿರುವಂತೆ ಪ್ರತಿಯೊಬ್ಬರಿಗೂ ಬ್ರಹ್ಮಜ್ಞಾನದ ಹಕ್ಕು ಉಂಟು. ಇದಕ್ಕೆ ಬೇಕಿರುವ ಏಕೈಕ ಅರ್ಹತೆಯೆಂದರೆ ಜ್ಞಾನಕ್ಕಾಗಿ ಉತ್ತಟ ಹಂಬಲ. ಗುರುಗಳಾದ ರಂಗನಾಥ ಶರ್ಮಾ ಅವರ ವಿರಚಿತ ಸ್ತೋತ್ರದಂತೆ ಶ್ರೀ ಶಂಕರ ಭಗವತ್ಪಾದರು ಶಂಕರನ ವಿಭೂತಿ ಸ್ವರೂಪ. ಭಗವತ್ಪಾದರ ರಚನೆಗಳು ವೇದ ಸಮಾನ ಸರಸ್ವತಿ ದೇವಿಯ ಆಭರಣಗಳಾಗಿ ಹೊಳೆಯುತ್ತಿವೆ ಎಂದು ಶತಾವಧಾನಿ ಡಾ| ಗಣೇಶ್‌ ಹೇಳಿದರು.

Advertisement

ಇಲ್ಲಿನ ಶೃಂಗೇರಿ ವಿದ್ಯಾ ಭಾರತಿ ಫೌಂಡೇಶನ್‌ನವರು ನಡೆಸುತ್ತಿರುವ ಜ್ಞಾನ ಸುಧಾ ಪ್ರವಚನ ಮಾಲಿಕೆಯಲ್ಲಿ ಇತ್ತೀಚೆಗೆ ನಡೆದ ಶಂಕರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಶ್ರೀ ಶಂಕರಾಚಾರ್ಯರ ಮೂಲತತ್ತ Ìಗಳ ಕುರಿತು ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ ಅವರು, ಶಂಕರಾಚಾರ್ಯರ ಅದ್ವೆ„ತ ವಿಚಾರಗಳ ಕುರಿತು ಅನೇಕ ಜನರಲ್ಲಿ ಗೊಂದಲಗಳು ಇವೆ. ಶಂಕರರು ಹೇಳಿರುವುದೆಲ್ಲವೂ ಹೊಸದೇನಲ್ಲ. ವೇದ, ಉಪನಿಷತ್ತು, ಭಗವದ್ಗೀತೆಯ ಸಾರ ಮತ್ತು ಬಾದರಾಯಣರ ಬ್ರಹ್ಮಸೂತ್ರಗಳ ವ್ಯಾಖ್ಯಾನಗಳೇ ಆಗಿವೆ. ಮೂಲತಃ ಶಂಕರರ ಕೃತಿಗಳು ಔಪನಿಷದಿಕ ದರ್ಶನವೇ ಆಗಿದೆ ಎಂದು ಹೇಳಿದರು.
ಎಲ್ಲರ ಮೂಲ ಬಯಕೆಯೆಂದರೆ ಶಾಶ್ವತ ಸುಖ- ಸಂತೋಷದ ಬದುಕು. ಆದರೆ ಜೀವನದಲ್ಲಿ ಸುಖ-ಸಂತೋಷದ ಜತೆಗೆ ದುಃಖವೂ ಬರುತ್ತದೆ. ಕಷ್ಟ ನಷ್ಟಗಳು, ಅಂತೆಯೇ ಸಾವಿನ ಚಿಂತೆ ಕೂಡ ಬರುತ್ತವೆ. ಶಾಶ್ವತ ಸುಖಕ್ಕೆ ಬೇಕಾಗಿರುವುದು ಜ್ಞಾನ, ಅಧಿಕಾರ ಮತ್ತು ಸ್ವಾತಂತ್ರÂ. ಇವನ್ನು ಸಂಪೂರ್ಣ ಅಸ್ತಿತ್ವ , ಸಂಪೂರ್ಣ ಜ್ಞಾನ, ಸಂಪೂರ್ಣ ಅಧಿಕಾರ, ಸಂಪೂರ್ಣ ಆನಂದ ಮತ್ತು ಸಂಪೂರ್ಣ ಸ್ವಾತಂತ್ರ್ಯ ಎಂದು ಐದು ಶೀರ್ಷಿಕೆಗಳಡಿ ಪರಿಶೀಲಿಸಬಹುದು. ಇವೆಲ್ಲವೂ ಸಾಧ್ಯವೆಂದು ಶಂಕರರು ತೋರಿಸಿ ಯಶಸ್ವಿಯಾಗಿ¨ªಾರೆ ಎಂದು ತಿಳಿಸಿದರು.

ಶಂಕರಾಚಾರ್ಯರ ವ್ಯಾಖ್ಯಾನವನ್ನು ವಿವರಿಸಿದ ಅವರು, ಆಳವಾದ ನಿದ್ರೆಯಲ್ಲಿ ಸಂಪೂರ್ಣ ಸಂತೋಷಕ್ಕೆ ಯಾವುದೇ ಅಡ್ಡಿ ಆತಂಕಗಳಿರುವುದಿಲ್ಲ. ಇಷ್ಟದ ನಾಶ ಅಥವ ಅನಿಷ್ಟದ ಪ್ರಾಪ್ತಿಯ ಆತಂಕ ಜಾಗೃತಾವಸ್ಥೆ ಅಥವ ಸ್ವಪ್ನಾವಸ್ಥೆಯಲ್ಲಿ ಮಾತ್ರ; ಸುಷುಪ್ತಿಯಲ್ಲಿಲ್ಲ. ಜಾಗೃತಾವಸ್ಥೆಯಲ್ಲೂ ಇದೇ ಸುಷುಪ್ತಾವಸ್ಥೆಯನ್ನು ಹೊಂದಲು ಸಾಧ್ಯವಾದರೆ ಸಂಪೂರ್ಣ ಆನಂದ ಸಾಧ್ಯ. ನಾವು ನಿದ್ರೆಯಲ್ಲಿ ಕಳೆದುಕೊಳ್ಳುವುದು ನಮ್ಮ ವ್ಯಕ್ತಿತ್ವವನ್ನು. ನಿದ್ರೆಯಲ್ಲಿ ಎಲ್ಲ ಗುಣವಿಶೇಷಗಳು ಮಾನುಷಭಾವವೂ ಇಲ್ಲದಾಗುವುದು. ದೇಶ ಕಾಲಗಳೂ ಇರುವುದಿಲ್ಲ. ಆದರೂ ಸಂಪೂರ್ಣ ಆನಂದದ ಅನುಭವ ಇರುತ್ತದೆ ಎಂದು ವಿವರಿಸಿದರು.
ಸುಷುಪ್ತಿಯ ನಮ್ಮ ನೈಜ ಸ್ಥಿತಿಯನ್ನು ಜಾಗೃತಾ ವಸ್ಥೆಯಲ್ಲಿ ಮರೆತಿರುತ್ತೇವೆ. ಜಾಗೃತ್ತಿನಲ್ಲಿಯೂ ಈ ಸ್ಥಿತಿಯನ್ನು ಪಡೆದರೆ ಅದನ್ನು ಸಮಾಧಿ ಅಥವಾ ಬ್ರಹ್ಮಾನುಭವ ಎನ್ನುವರು. ಎಚ್ಚರದ ಸ್ಥಿತಿಯಲ್ಲೂ ಬ್ರಹ್ಮಾನಂದದಿಂದ ಇರಬೇಕೆಂದರೆ ಪ್ರಯತ್ನ ಬೇಕು. ಅದೇ “ಸಾಧನೆ’. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ್ಯರು ಹೇಳಿರುವಂತೆ, ಆತ್ಮನ್‌ ಬಗ್ಗೆ ಕೇಳಿತಿಳಿದು, ತಿಳಿದುದನ್ನು ಮನನ, ಚಿಂತನ ಮಾಡಿ, ಬಂದ ತೀರ್ಪನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಸಾಧನೆ. ಇದೇ ವೇದಾಂತ ಯೋಗ ಎಂದು ವಿವರಿಸಿದರು.

ಶಂಕರರ ಪ್ರಕಾರ, ದೇಶ ಮತ್ತು ಕಾಲಗಳ ಲೌಕಿಕತೆಯನ್ನು ಪರಿಮಿತಿಯನ್ನು ಅರಿಯದೆ ಸಚ್ಚಿದಾನಂದದ ಸ್ವರೂಪಾನುಭವ ಸಾಧ್ಯವಾಗದು. ನಾವು ಯಾವಾಗಲೂ ಕಾರಣ- ಕಾರ್ಯದಲ್ಲಿ ತೊಡಗುತ್ತೇವೆ. ಸೃಷ್ಟಿಯಲ್ಲಿ ಸುಖದ ಜತೆಗೇ ದುಃಖವೂ ಏಕೆ? ರೋಗ, ಕಷ್ಟ ನಷ್ಟಗಳೇಕೆ? ದುಷ್ಟಶಕ್ತಿ ದೇವರ ಭಾಗವೇ? ಇದಕ್ಕೆ ಸಮಂಜಸ ಉತ್ತರವಿರುವುದು ಶಂಕರರ ಔಪನಿಷದಿಕ ದರ್ಶನ ತರ್ಕದಲ್ಲಿ ಮಾತ್ರ. ಇವರ ಅನುಸಾರ, ಕಾರಣವೇ ಲೌಕಿಕವಾದುದು. ನಮ್ಮನ್ನು ಕಾಡುವ ಎಲ್ಲ ಗೊಂದಲ ಪ್ರಶ್ನೆಗಳೇಳುವುದು ಜಾಗೃತ್‌, ಸ್ವಪ್ನಗಳಲ್ಲಿ ಮಾತ್ರ. ಸಂಪೂರ್ಣತೆಯಲ್ಲಿ ಪ್ರಶ್ನೆಗೆ, ಗೊಂದಲಕ್ಕೆ ಎಡೆಯಿಲ್ಲ. ನಿದ್ರಾವಸ್ಥೆಯಲ್ಲಿ ಇವಾವುದೂ ಅಸ್ತಿತ್ವದÇÉೇ ಇರುವುದಿಲ್ಲ. ಕಾರಣ, ದೇಶ, ಕಾಲಗಳು ಜಾಗೃತ್ತಿನಲ್ಲಿ ಉದ್ಭವಿಸುವುದು ಅಜ್ಞಾನದಿಂದಾಗಿ. ಸುಷುಪ್ತಿಯನ್ನು ಚೆನ್ನಾಗಿ ಅರಿತುಕೊಂಡರೆ ಅಜ್ಞಾನವನ್ನು ತೊಡೆಯಬಹುದು. ಮಾಯಾವಾದ- ಮಿಥ್ಯಾವಾದವು ಈ ಗೊಂದಲವನ್ನು ನಿವಾರಿಸುವುದು. ಮಿಥ್ಯ ಎಂದರೆ ನಿಜವೂ ಅಲ್ಲ, ಸುಳ್ಳೂ ಅಲ್ಲ. ಇದು ಲೌಕಿಕ ಅಸ್ತಿತ್ವವುಳ್ಳದ್ದು, ಸಾಪೇಕ್ಷವಾದುದು. ಸಂಪೂರ್ಣ ಸತ್ಯ ಬ್ರಹ್ಮಕ್ಕೆ ಸಂಬಂಧಿಸಿದಂತೆ ಜಗತ್ತು ಸಾಪೇಕ್ಷ ಸತ್ಯ- ವ್ಯಾವಹಾರಿಕ ಸತ್ಯ. ಮರೀಚಿಕೆ ತೋರಿಕೆಯ ಸತ್ಯ. ಸಂಪೂರ್ಣ ಸತ್ಯದ ಸಂಪೂರ್ಣ ಆನಂದವನ್ನು ಸಾಪೇಕ್ಷ ಜಗತ್ತಿನಲ್ಲಿ ಅನುಭವಿಸುವುದು “ಅಧಿಕಾರ’ದ ಪ್ರಾಪ್ತಿಯಿಂದ ಎಂದು ಶಂಕರರು ವಿವರಿಸಿದ್ದಾರೆ ಎಂದರು.
ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಅಧಿಕಾರ

Advertisement

“ಅಧಿಕಾರಿ ಭೇದ’ ಪರಿಕಲ್ಪನೆಯನ್ನೂ ವಿವರಿಸಿರುವ ಶಂಕರರು, ಅಧಿಕಾರಿಗಳಲ್ಲಿ ಮೂರು ಸ್ತರ. ಅಧಮ ಅಧಿಕಾರಿ, ಮಧ್ಯಮ ಅಧಿಕಾರಿ ಮತ್ತು ಉತ್ತಮ ಅಧಿಕಾರಿ. ಈ ವಿಂಗಡಣೆ ಬ್ರಹ್ಮಜ್ಞಾನಕ್ಕೆ ಬೇಕಾದ ಅರ್ಹತೆ- ಸಾಮರ್ಥ್ಯವನ್ನು ಕುರಿತಾದುದು. ತಮ್ಮ ಅರ್ಹತೆಯನ್ನು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಎಲ್ಲರಿಗೂ ಇದೆ. ಅರ್ಹತೆ, ಸಾಮರ್ಥ್ಯಕ್ಕೆ ತಕ್ಕಂತೆ ಬೇರೆಬೇರೆ ಮಾರ್ಗಗಳಲ್ಲಿ ಮುಂದುವರಿಯಬಹುದು. ಪ್ರತಿಯೊಬ್ಬರಿಗೂ ಬ್ರಹ್ಮಜ್ಞಾನದ, ಸ್ವಾತಂತ್ರ್ಯದ ಹಕ್ಕುಂಟು. ಪುರಾಣ ಭಗವದ್ಗೀತೆ, ಮತ್ತಿತರ ಗ್ರಂಥಗಳಲ್ಲಿಯೂ ವೇದೋಪನಿಷತ್ತುಗಳ ಸಾರ ಇರುವುದರಿಂದ ಅವುಗಳಿಂದಲೂ ಜ್ಞಾನವೃದ್ಧಿ ಸಾಧ್ಯ. ಅಂದರೆ, ದೀಕ್ಷೆ, ಗುರು, ವೇದಾಭ್ಯಾಸ, ಇರಲೇಬೇಕೆಂದಿಲ್ಲ. ರಮಣ ಮಹರ್ಷಿ ಇದಾವುದೂ ಇಲ್ಲದೆ ಬ್ರಹ್ಮಜ್ಞಾನಿಯಾದವರು. ವಾಮದೇವ ಋಷಿಗಳು ಗರ್ಭದಲ್ಲಿರುವಾಗಲೇ ಬ್ರಹ್ಮಜ್ಞಾನಿಯಾದವರು. ವಿದುರ, ಧರ್ಮವ್ಯಾಧ ಮುಂತಾದವರು ಸಹ ವಿಧಿಪೂರ್ವಕ ಜ್ಞಾನವನ್ನು ಗಳಿಸಲಿಲ್ಲ.

ಸಾಮರ್ಥ್ಯ ಬೆಳೆಸಿಕೊಳ್ಳಲು ಶಂಕರರು ವಿವಿಧ ಮಾರ್ಗಗಳ ಸಲಹೆ ನೀಡಿ¨ªಾರೆ. ಉಪಾಸನೆ, ಯೋಗ. ಸಚ್ಚಿದಾನಂದಕ್ಕೆ ಸಮೀಪಿಸುವ ಯಾವುದೇ ಮಾರ್ಗ, ಮತ- ಧರ್ಮ, ಜಪತಪಗಳು ಸಮ್ಮತವಾದುದು. ಇವೆಲ್ಲ ಸಾಧನೆಗಳು ಚಿತ್ತಶುದ್ಧಿ, ಮನಶುದ್ಧಿಗಾಗಿ. ಅನಂತರವೇ ಅಧಿಕಾರಿಯಾಗುವುದು. ಜ್ಞಾನ ಮಾರ್ಗದಲ್ಲಿ ಜ್ಞಾನ ಪಡೆಯುವುದು ಸಾಧ್ಯ. ಹೀಗೆ ಶಂಕರರ “ಅಧಿಕಾರಿ ಭೇದ’ ಒಂದು ಉದಾತ್ತ ವಿಶಾಲ ಪರಿಕಲ್ಪನೆ ಎಂದು ವಿವರಿಸಿದರು.

ಶಂಕರರ ಅನುಸಾರ ಮೋಕ್ಷ- ಸ್ವಾತಂತ್ರ್ಯವು ಇÇÉೇ ಈಗಲೇ! ಇದು ಜೀವನ್ಮುಕ್ತಿ. ಬೇರೆಲ್ಲ ಮತಗಳಲ್ಲಿ ಮುಕ್ತಿಯು ಮರಣಾನಂತರ ಮಾತ್ರ ಸಾಧ್ಯ. ಶಂಕರರು ಇದೇ ದೇಹದಲ್ಲಿ ಇದೇ ಜನ್ಮದಲ್ಲಿ ಪ್ರತಿಯೊಬ್ಬ ಜೀವಿಗೂ ಮುಕ್ತಿ ಸಾಧ್ಯವೆಂದು ಭರವಸೆ ನೀಡುತ್ತಾರೆ. ಶಂಕರರ ವಿವರಣೆಯಂತೆ ಮುಕ್ತಿಯು ಸಾರ್ವತ್ರಿಕ ನಿರ್ವಿಶೇಷ ಪ್ರತ್ಯಕ್ಷ ಅನುಭವ. ನಂಬಿಕೆಯಲ್ಲ. ಇದು ವೈಜ್ಞಾನಿಕ ಪರಿಪೂರ್ಣ ತರ್ಕಬದ್ಧ ಪರಿಕಲ್ಪನೆ. ಇದರಲ್ಲಿ ಮತಾಂತರವಾಗಲಿ, ದೀಕ್ಷೆ ಅನುಷ್ಠಾನದ ಅವಶ್ಯಕತೆ ಇಲ್ಲ. ನಮ್ಮಲ್ಲಿನ ನಿರ್ಬಂಧಗಳನ್ನು ಕಳಚಬೇಕಷ್ಟೆ. ಮೋಕ್ಷಪ್ರಾಪ್ತಿಗಾಗಿ ಯಾವುದೇ ತರಹದ ಗುಣವಿಶೇಷಗಳನ್ನು ಸಂಪೂರ್ಣವಾಗಿ ಅಳಸಿಕೊಳ್ಳುವುದು. ಆ ಕ್ಷಣವೇ ಬ್ರಹ್ಮಜ್ಞಾನಾನುಭವ ಆಗುವುದು ಎಂದು ತಿಳಿಸಿದರು.
ಕನ್ನಡಕ್ಕೆ ಭಾವಾನುವಾದ- ತಾರಾ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next