Advertisement
ಮುಂದಿನ ಆರ್ಥಿಕ ವರ್ಷದಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಯರು ಮೆಂತೆಕಾಳಿನ (ಗೋಲ್ಡನ್ ಯೆಲ್ಲೊ) ಬಣ್ಣದ ಸಮವಸ್ತ್ರದ ಸೀರೆ ಉಡಲಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಂಧಿಸಿ ಆಕಾಶನೀಲಿ ಬಣ್ಣದ ಸಮವಸ್ತ್ರ ಖರೀದಿ ಪ್ರಕ್ರಿಯೆ ಆರಂಭಿಸಿದಲ್ಲಿ ಅವರು ಈ ಆ ಬಣ್ಣದ ಸೀರೆಯನ್ನೇ ಧರಿಸಬೇಕು. ಇನ್ನೂ ಖರೀದಿ ಪ್ರಕ್ರಿಯೆ ನಡೆಯದಿದ್ದಲ್ಲಿ ಮೆಂತೆ (ಗೋಲ್ಡನ್ ಯಲ್ಲೋ) ಬಣ್ಣದ ಸಮವಸ್ತ್ರದ ಸೀರೆ ಖರೀದಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ನಗದು ವರ್ಗಾವಣೆ
ನಿಗದಿಗೊಳಿಸಿದ ಸಮವಸ್ತ್ರದ ಎರಡು ಸೀರೆಗಳ ಖರೀದಿಗೆ 800 ರೂ.ಗಳನ್ನು ಅವರವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಇಲಾಖೆಯಿಂದಲೇ ಸೀರೆಗಳನ್ನು ವಿತರಿಸಲಾಗುತ್ತಿತ್ತು.
Related Articles
ಇಲಾಖೆ ವಿತರಿಸುತ್ತಿರುವ ಸೀರೆ ಗುಣಮಟ್ಟ ಚೆನ್ನಾಗಿಲ್ಲ. ಆಯ್ಕೆ ಮಾಡಿದ ಬಣ್ಣವೂ ಎಲ್ಲರಿಗೂ ಒಪ್ಪುವಂತಿಲ್ಲ. ಜಾಹೀರಾತು ಮುದ್ರಿಸಿದ ಸೀರೆ ಧರಿಸಲು ಕಾರ್ಯಕರ್ತೆಯರಿಗೆ ಮುಜುಗರವಾಗುತ್ತದೆ. ಆದ್ದರಿಂದ ಸೀರೆಗಳಲ್ಲಿ ಜಾಹೀರಾತು ಮುದ್ರಿಸಬಾರದು. ಸಮವಸ್ತ್ರದ ಸೀರೆಗಾಗಿ ಎಲ್ಲರಿಗೂ ಒಪ್ಪುವ ಬಣ್ಣ ಆಯ್ಕೆ ಮಾಡಬೇಕು. ಇಲಾಖೆಯಿಂದ ಸೀರೆ ವಿತರಿಸದೆ ಹಣವನ್ನೇ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘಟನೆಗಳು ಹೋರಾಟ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಸಂಘಟನೆ ಪದಾಧಿಕಾರಿಗಳೊಂದಿಗೆ ಎರಡು ಸುತ್ತಿನ ಸಭೆ ನಡೆಸಿದ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
Advertisement
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮುಂದಿನ ವರ್ಷದಿಂದ ರಾಜ್ಯಾದ್ಯಂತ ಏಕರೂಪ ಸಮವಸ್ತ್ರ ಜಾರಿಗೊಳಿಸಲು ಇಲಾಖೆ ಈ ವರ್ಷವೇ ಬಣ್ಣ ನಿಗದಿಗೊಳಿಸಿ ಖರೀದಿಗೆ ಹಣವನ್ನೂ ಅವರವರ ಖಾತೆಗೆ ಹಾಕಲಾಗಿದೆ.– ವಾಸಂತಿ ಉಪ್ಪಾರ್,
ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಾವಣಗೆರೆ – ಎಚ್.ಕೆ. ನಟರಾಜ