Advertisement

Air India: ಏರ್‌ ಇಂಡಿಯಾಕ್ಕೆ ದೇಸಿ ಸಮವಸ್ತ್ರ

12:24 AM Dec 13, 2023 | Pranav MS |

ಹೊಸದಿಲ್ಲಿ: ಏರ್‌ ಇಂಡಿಯಾ ತನ್ನ ಗಗನ ಸಖೀಯರು ಹಾಗೂ ಪೈಲಟ್‌ಗಳಿಗಾಗಿ ಹೊಸ ಸಮವಸ್ತ್ರವನ್ನು ಬಿಡುಗಡೆಗೊಳಿಸಿದೆ. ದೇಶಿ ಪರಂಪರೆಯನ್ನು ಬಿಂಬಿಸುವ ಈ ನೂತನ ಸಮವಸ್ತ್ರಗಳನ್ನು ಪ್ರಸಿದ್ಧ ವಸ್ತ್ರ ವಿನ್ಯಾಸಕರಾದ ಮನೀಶ್‌ ಮಲ್ಹೋತ್ರಾ ವಿನ್ಯಾಸಗೊಳಿಸಿರುವುದು ಮತ್ತೂಂದು ವಿಶೇಷ. ಝರೋಖಾ ಪ್ಯಾಟ್ರನ್‌ನಲ್ಲಿ ಸೀರೆಗಳನ್ನು ಗಗನಸಖೀಯರ ಸಮವಸ್ತ್ರ ವಾಗಿ ವಿನ್ಯಾಸಗೊಳಿಸಿದ್ದು, ಬ್ಲೌಜ್‌ ಮತ್ತು ಬ್ಲೇಜರ್‌ಗಳನ್ನು ಈ ಪ್ಯಾಟ್ರನ್‌ ಹೊಂದಿರಲಿದೆ.

Advertisement

ಸೀರೆಗಳನ್ನು ಪ್ಯಾಂಟ್‌ಗಳ ಜತೆಗೆ ಧರಿಸುವ ಆಯ್ಕೆಯೂ ಇದೆ. ಹಿರಿಯ ಮಹಿಳಾ ಸಿಬಂದಿಗೆ ಬರ್ಗ್ಯಾಂಡಿ ಬಣ್ಣದ ಸೀರೆ ಹಾಗೂ ಜೂನಿಯರ್‌ಗಳಿಗೆ ಕೆಂಪು ಬಣ್ಣದ ಸಮವಸ್ತ್ರ ವಿನ್ಯಾಸ ಮಾಡಲಾಗಿದೆ. ಪುರುಷ ಸಿಬಂದಿಗೆ ಬಂಧಗಾಲ ಕೋಟ್‌-ಪ್ಯಾಂಟ್‌ ಹಾಗೂ ಪೈಲಟ್‌ಗಳಿಗೆ ಬ್ಲಾಕ್‌ ಸ್ಯೂಟ್‌ಗಳನ್ನು ಸಮವಸ್ತ್ರಗಳನ್ನಾಗಿ ವಿನ್ಯಾಸ ಮಾಡಲಾಗಿದ್ದು, ದೇಶಿ ಪರಂಪರೆಯ ಜತೆಗೆ ಆಧುನಿಕ ಶೈಲಿಯನ್ನೂ ಈ ವಸ್ತ್ರಗಳು ಬಿಂಬಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next